ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

By Nagaraja

ಉತ್ಪಾದನಾ ಕೊರತೆಯನ್ನು ಅನುಭವಿಸುತ್ತಿರುವ ಫೋರ್ಡ್ ಇಕೊಸ್ಪೋರ್ಟ್‌, ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಎಡವುತ್ತಿದೆ. ಇದರಿಂದಾಗಿ ಕೆಲವೊಂದು ಬಾರಿ ಬುಕ್ಕಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸುವುದಲ್ಲದೆ ಇನ್ನಿತರ ಸಂದರ್ಭಗಳಲ್ಲಿ ಕೆಲವು ನಿರ್ದಿಷ್ಟ ವೆರಿಯಂಟ್‌ಗಳ ಕಾಯುವಿಕೆ ಅವಧಿ ಒಂದು ವರ್ಷದ ವರೆಗೂ ವಿಸ್ತರಣೆ ಮಾಡಲು ಪ್ರೇರಿತವಾಗಿದೆ.

ಮನೋಹರವಾದ ಹಾಗೆಯೇ ಗರಿಷ್ಠ ತಂತ್ರಗಾರಿಕೆಯನ್ನು ಹೊಂದಿರುವ ಹೊರತಾಗಿಯೂ ಗ್ರಾಹಕರ ಕೈಕೆಟಕುವಲ್ಲಿ ಎಡವುತ್ತಿರುವುದು ಇಕೊಸ್ಪೋರ್ಟ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ. ಈ ಸದಾವಕಾಶದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಕಾರು ಬ್ರಾಂಡ್ ಆಗಿರುವ ಷೆವರ್ಲೆ ದೇಶದಲ್ಲಿ ನೂತನ ಕಾಂಪಾಕ್ಟ್ ಎಸ್‌ಯುವಿ ಸದ್ಯದಲ್ಲೇ ಪರಿಚಯಿಸುವ ಯೋಜನೆ ಹೊಂದಿದೆ.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಈ ಬಹುನಿರೀಕ್ಷಿತ ಕಾರು ಈಗಾಗಲೇ 2014 ಇಂಡಿಯಾ ಆಟೋ ಎಕ್ಸ್ ಪೋದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಾಗಲಿರುವ ಆಟೋ ಎಕ್ಸ್ ಪೋದಲ್ಲಿ ಷೆವರ್ಲೆ ಸಬ್ 4 ಮೀಟರ್ ಕಾಂಪಾಕ್ಟ್ ಎಸ್‌ಯುವಿ ಕಾರು ಅನಾವರಣಗೊಳ್ಳಲಿದೆ.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಷೆವರ್ಲೆಯ ಈ ನೂತನ ಕಾಂಪಾಕ್ಟ್ ಎಸ್‌ಯುವಿ/ಕ್ರಾಸೋವರ್ ಕಾರು ನೆರವಾಗಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಸಮಕಾಲೀನ ಮಾರುಕಟ್ಟೆಯಲ್ಲಿ ದೇಶದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಗಣನೀಯವಾಗಿ ವರ್ಧಿಸುತ್ತಿದೆ. ಇದರಿಂದಾಗಿ ಕೇವಲ ಷೆವರ್ಲೆ ಮಾತ್ರವಲ್ಲ. ದೆಹಲಿ ಎಕ್ಸ್ ಪೋದಲ್ಲಿ ಪ್ರಖ್ಯಾತ ಸುಜುಕಿ ಹಾಗೂ ಹೋಂಡಾ ಸಂಸ್ಥೆಗಳು ಸಹ ತಮ್ಮ ಅವತರಣಿಕೆಯೊಂದಿಗೆ ಮುಂದೆ ಬರಲಿದೆ.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಷೆವರ್ಲೆ ಕಾಂಪಾಕ್ಟ್ ಎಸ್‌ಯುವಿ, ಜನರಲ್ ಮೋಟಾರ್ಸ್‌ನ ಗಮ್ಮಾ II ತಲಹದಿಯಲ್ಲಿ ರೂಪಿತವಾಗುವ ಸಂಭವವಿದೆ. ಯುರೋಪ್‌ನಲ್ಲಿ ಇದೇ ಫ್ಲ್ಯಾ‌ಟ್‌ಫಾರ್ಮ್‌ನಲ್ಲಿ ಷೆವರ್ಲೆ ಬೀಟ್, ಆವಿಯೋ ಮತ್ತು ಟ್ರಾಕ್ಸ್ ನಿರ್ಮಾಣವಾಗಿದ್ದವು.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಇದು 77 ಅಶ್ವಶಕ್ತಿ ಉತ್ಪಾದಿಸುವ 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದನ್ನೇ ಷೆವರ್ಲೆ ಸೈಲ್ ಮತ್ತು ಎಂಜಾಯ್‌ನಲ್ಲೂ ಬಳಕೆ ಮಾಡಲಾಗಿತ್ತು. ಅಷ್ಟಕ್ಕೂ ದೆಹಲಿ ಆಟೋ ಎಕ್ಸ್ ಪೋದಲ್ಲಿ ಷೆವರ್ಲೆ ನೂತನ ಕಾಂಪಾಕ್ಟ್ ಎಸ್‌ಯುವಿ ಕಾರಿನ ಕಾನ್ಸೆಪ್ಟ್ ರೂಪ ಮಾತ್ರ ಪ್ರದರ್ಶಿಸಲಿದೆಯೇ ಅಥವಾ ನಿರ್ಮಾಣ ಸಿದ್ಧ ಕಾರು ಅನಾವರಣಗೊಳಿಸಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಇಕೊಸ್ಪೋರ್ಟ್‌ಗೆ ಪ್ರಾಣ ಸಂಕಟ, ಷೆವರ್ಲೆಗೆ ಚೆಲ್ಲಾಟ!

ಇದರ ಜತೆಗೆ ಫೇಸ್‌ಲಿಫ್ಟ್ ಬೀಟ್ ಅವತಾರವನ್ನು ಮುಂಬರುವ ಆಟೋ ಎಕ್ಸ್ ಪೋದಲ್ಲಿ ಷೆವರ್ಲೆ ಪ್ರದರ್ಶಿಸಲಿದೆ. ಇದರಲ್ಲಿ ಪರಿಷ್ಕೃತ ಬಂಪರ್, ಹೊಸ ಹೆಡ್‌ಲ್ಯಾಂಪ್ ಮತ್ತು ಟೈಲ್ ಲೈಟ್ ಪ್ರಮುಖ ಆಕರ್ಷಣೆಯಾಗಿರಲಿದೆ.

Most Read Articles

Kannada
English summary
Chevrolet will become the latest automaker in the country to get into making sub-4 meter compact SUVs. According to reports, Chevy will showcase one such compact SUV at the Auto Expo 2014
Story first published: Monday, January 27, 2014, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more