ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

By Nagaraja

ಸದ್ಯ ಮಾರುಕಟ್ಟೆಯಲ್ಲಿ ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ, ಷೆವರ್ಲೆ ಕಾರು ಬ್ರಾಂಡ್‌ನಿಂದ ಭಾರತದಲ್ಲಿ ಲಾಂಚ್ ಆಗಿರುವ ಎಂಜಾಯ್ ಮಲ್ಟಿ ಪರ್ಪಸ್ ವೆಹಕಲ್ ಮೊದಲ ವಸಂತವನ್ನು ಪೂರ್ಣಗೊಳಿಸಿದೆ.

ಇವನ್ನೂ ಓದಿ: ಮಾರುತಿಯಿಂದ ಹೊಸ ಕಾರು - ಸಿಯಾಝ್

ಇದರಂತೆ ಅಮೆರಿಕ ಮೂಲದ ಈ ಸಂಸ್ಥೆಯು ವಿಶೇಷ ಸೀಮಿತ ಆವೃತ್ತಿಯನ್ನು ಗ್ರಾಹಕರಿಗಾಗಿ ಪರಿಚಯಿಸುತ್ತಿದೆ. ಇನ್ನೇನು ಕೆಲವು ದಿನಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಿರುವ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜನರಲ್ ಮೋಟಾರ್ಸ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಸಕ್ಸೇನಾ, ಭಾರತೀಯ ರಸ್ತೆಗಳಲ್ಲಿ ಷೆವರ್ಲೆ ಎಂಜಾಯ್ ಸಂತೋಷದ ಒಂದು ವರ್ಷವನ್ನು ಪೂರ್ಣಗೊಳಿಸಿದೆ ಎಂದಿದ್ದಾರೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

2013 ಮೇ ತಿಂಗಳಲ್ಲಿ ಲಾಂಚ್ ಆಗಿರುವ ಈ ಬಹುನಿರೀಕ್ಷಿತ ಕಾರು 20,000 ಯುನಿಟ್‌ಗಳಷ್ಟು ಮಾರಾಟವಾಗಿದೆ. ಇದು ಎಂಪಿವಿ ವಿಭಾಗದಲ್ಲಿ ಕಠಿಣ ಪೈಪೋಟಿಯನ್ನು ಒಡ್ಡುತ್ತಿದೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

ನೂತನ ಸೀಮಿತ ಆವೃತ್ತಿಯಲ್ಲಿ ವಿಶೇಷವಾದ ಆಕ್ಸೆಸರಿ ಪ್ಯಾಕೇಜ್ ಲಭ್ಯವಿರಲಿದೆ. ಈ ಬಗ್ಗೆ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ. ಹಾಗಿದ್ದರೂ ಕ್ರೋಮ್ ಕಿಟ್ ಲಭ್ಯವಿರಲಿದ್ದು, ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಹಾಗೂ ಡೋರ್ ಹ್ಯಾಂಡಲ್‌ ಸುತ್ತಲೂ ಕ್ರೋಮ್ ಟಚ್ ಪಡೆಯಲಿದೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

ಅಷ್ಟೇ ಯಾಕೆ ರೂಫ್ ಮೇಲೆ ಲಗ್ಗೇಜ್ ರೈಲ್ ಇರಲಿದೆ. ಹಾಗೆಯೇ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಸೈಡ್ ಬ್ಲಿಂಕರ್ ಮತ್ತು ತಾಜಾ ಸೈಡ್ ಡಿಕಾಲ್ಸ್ ಪಡೆಯಲಿದೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

ಜೊತೆಗೆ ಕಾರಿನ ಒಳಭಾಗದಲ್ಲಿ ಡ್ಯಾಶೋ ಬೋರ್ಡ್‌ನಲ್ಲಿ ವುಡನ್ ಟಚ್ ಪಡೆಯಲಿದೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.2 ಲೀಟರ್ ಟರ್ಬೊಚಾರ್ಜ್ಡ್ (74.8 ಅಶ್ವಶಕ್ತಿ) ಡೀಸೆಲ್ ಎಂಜಿನ್ ಜತೆಗೆ 1.3 ಲೀಟರ್ ಪೆಟ್ರೋಲ್ ಎಂಜಿನ್ (100 ಅಶ್ವಶಕ್ತಿ) ಪಡೆದುಕೊಳ್ಳಲಿದೆ.

ಬಂದಿದೆ ಷೆವರ್ಲೆ ಎಂಜಾಯ್ ವಾರ್ಷಿಕ ಎಡಿಷನ್

ಅಂತಿಮವಾಗಿ ಸಾಮಾನ್ಯ ಷೆವರ್ಲೆ ಎಂಜಾಯ್ ಆವೃತ್ತಿಯ ಪ್ರಾರಂಭಿಕ ದರ 5.74 ಲಕ್ಷ ರು.ಗಳಾಗಿವೆ. ಇದೀಗ ವಾರ್ಷಿಕ ಎಡಿಷನ್‌ನಲ್ಲಿ ರು. 43,000 ವರೆಗಿನ ಹೆಚ್ಚುವರಿ ಆಕ್ಸೆಸರಿಗಳ ಪ್ರಯೋಜನ ಪಡೆಯಬಹುದಾಗಿದೆ.

Most Read Articles

Kannada
English summary
The incredibly spacious and luxurious Chevrolet Enjoy is the perfect car to help you play all your roles in life. Now it’s time to Enjoy Unlimited with Enjoy Anniversary Edition. 
Story first published: Tuesday, May 6, 2014, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X