ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

Written By:

ಆಸಕ್ತಿದಾಯಕ ಸುದ್ದಿಯೊಂದರಲ್ಲಿ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಅಧೀನತೆಯಲ್ಲಿರುವ ಷೆವರ್ಲೆ ಭಾರತದಲ್ಲಿ ಅಗ್ಗದ ದರಗಳಲ್ಲಿ ಎಂಜಾಯ್ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ.

ನಿಮ್ಮ ಮಾಹಿತಿಗಾಗಿ, ಈಗಾಗಲೇ ದೇಶದ ನಂ.1 ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿಯ ಜನಪ್ರಿಯ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಷೆವರ್ಲೆ ಎಂಜಾಯ್‌ನ ಸೀಮಿತ ಆವೃತ್ತಿಯ ಎಕ್ಸ್ ಶೋ ರೂಂ ದರ 5.30 ಲಕ್ಷ ರು.ಗಳಾಗಿವೆ. ಇದು ನಿಜಕ್ಕೂ ಆಟೋ ವಿಮರ್ಶಕರಲ್ಲಿ ಆಶ್ಚರ್ಯ ಮೂಡಿಸುವಂತಾಗಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ಅಷ್ಟೇ ಅಲ್ಲದೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೂ ನೂತನ ಷೆವರ್ಲೆ ಸೀಮಿತ ಆವೃತ್ತಿಯು ಆಗಮನವಾಗಿದೆ. ಇದರಲ್ಲಿ ಹೊಸತಾದ ವುಡ್ ಡ್ಯಾಶ್ ಬೋರ್ಡ್, ಕ್ರೋಮ್ ಕಿಟ್, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಸೈಡ್ ಬ್ಲಿಂಕರ್ಸ್, ರೂಫ್ ರೈಲ್ ಮತ್ತು ಆಕರ್ಷಣೀಯ ಗ್ರಾಫಿಕ್ಸ್ ಸೌಲಭ್ಯವಿರಲಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ಹಾಗೆಯೇ 33,000 ರು. ವರೆಗೆ ಉಳಿತಾಯ ಹಾಗೂ 14,000 ರು. ವರೆಗಿನ ಆಕ್ಸೆಸರಿ ಸಂಪೂರ್ಣ ಉಚಿತವಾಗಿ ನಿಮ್ಮದಾಗಿಸಿಕೊಳ್ಳುವ ಅವಕಾಶವನ್ನು ಷೆವರ್ಲೆ ಮುಂದಿಡುತ್ತಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ಕಳೆದ ವರ್ಷ ಲಾಂಚ್ ಕಂಡಿದ್ದ ಷೆವರ್ಲೆ ಎಂಜಾಯ್, ಅತ್ಯುತ್ತಮ ವಿನ್ಯಾಸ ಪಡೆದುಕೊಂಡಿರುವ ಹೊರತಾಗಿಯೂ ನಿರೀಕ್ಷಿಸಿದಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ನಿಟ್ಟಿನಲ್ಲಿ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಜೊತೆಗೆ ಬೆಲೆಗಳಲ್ಲೂ ಭಾರಿ ಕಡಿತ ಮಾಡಲಾಗಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ನೂತನ ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿಯು ಕೇವಲ ಟಾಪ್ ಎಂಡ್ ವೆರಿಯಂಟ್‌ಗೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ವೆರಿಯಂಟ್‌ಗಳಲ್ಲೂ ದೊರಕಲಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ಇದರಲ್ಲಿ ಫಿಯೆಟ್‌ನ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದೆ. ಇದನ್ನ ಪುಣೆಯ ಘಟಕದಲ್ಲಿ ನಿರ್ಮಿಸಲಾಗಿದೆ.

ಷೆವರ್ಲೆ ಎಂಜಾಯ್ ಸೀಮಿತ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಷೆವರ್ಲೆ ಎಂಜಾಯ್ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 18.2 ಹಾಗೂ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ 13.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

English summary
Chevrolet have launched a limited version on the Enjoy at a price of Rs 5.30 lakh, ex-showroom. The Limited Edition will feature better and extra style updates, states Chevrolet officials.
Story first published: Thursday, January 23, 2014, 16:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark