ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

By Nagaraja

ವಿದೇಶಗಳಲ್ಲಿ ಕಾರಿನಲ್ಲಿ ಪಯಣಿಸುವಾಗ ಮಕ್ಕಳ ಸುರಕ್ಷತೆಗಾಗಿ ವಿಶೇಷ ಆಸನ ವ್ಯವಸ್ಥೆ ಕಾಣಸಿಗುವುದು ಸರ್ವೆ ಸಾಮಾನ್ಯವಾಗಿದೆ. ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಕಾರಿನಲ್ಲಿ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (ಸಿಆರ್‌ಎಸ್) ಆಳವಡಿಸಲಾಗುತ್ತದೆ. ಇಲ್ಲಿ ಸಿಆರ್‌ಎಸ್ ಎಂದರೆ ವಿಶೇಷ ರೀತಿಯ ಆಸನ ಆಗಿದ್ದು, ಇದು ಅಪಘಾತ ಮುಂತಾದ ಸಂದರ್ಭಗಳಲ್ಲಿ ಮಕ್ಕಳಿಗೆ ಹೆಚ್ಚು ರಕ್ಷಣೆ ಒದಗಿಸುವುದಲ್ಲದೆ ಆರಾಮದಾಯಕ ಪಯಣಕ್ಕೆ ಸಹಕಾರಿಯಾಗಲಿದೆ.

ಪ್ರಸ್ತುತ ವರದಿಗಳ ಪ್ರಕಾರ ಮಕ್ಕಳ ಹತೋಟಿ ವ್ಯವಸ್ಥೆ (ಸಿಆರ್‌ಎಸ್) ಭಾರತದಲ್ಲೂ ಅಕ್ಟೋಬರ್ 1ರಿಂದ ಕಡ್ಡಾಯವಾಗಲಿದೆ. ಈ ಮೂಲಕ ಅಪಘಾತದ ವೇಳೆ ಗಾಯಾಳುಗಳ ಸಂಖ್ಯೆ ಕಡಿಮೆ ಮಾಡುವ ಇರಾದೆಯನ್ನು ಹೊಂದಿದೆ.

ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮಕ್ಕಳ ವಿಶೇಷ ಆಸನವು, ಬದಲಾಯಿಸಬಹುದಾದ ಸೀಟು ಆಗಿದ್ದು, ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುತ್ತದೆ.

ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

ಇದನ್ನು ಸಾಮಾನ್ಯ ಸೀಟುಗಳ ಜಾಗದಲ್ಲಿ ಅಥವಾ ಅದರ ಮೇಲ್ಗಡೆಯಾಗಿ ಆಳವಡಿಸಬಹುದಾಗಿದೆ.

ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

ಪ್ರಸ್ತುತ ಸೀಟು ಹಲವು ವಿಧದ ಆಕಾರಗಳನ್ನು ಹೊಂದಿದ್ದು, ತೂಕದಲ್ಲಿ ವ್ಯತ್ಯಯ ಹೊಂದಿರುತ್ತದೆ. ಇದನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಹೆತ್ತವರು ಖರೀಸಬಹುದಾಗಿದೆ.

ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಸಾಮಾನ್ಯ ಸೀಟು ಬೆಲ್ಟ್‌ಗಿಂತಲೂ ಭಿನ್ನವಾಗಿರುತ್ತದೆ. ಅಂತೆಯೇ ಅಕ್ಟೋಬರ್ ಬಳಿಕ ಮಾರಾಟವಾಗುವ ಕಾರುಗಳಲ್ಲಿ ಇದನ್ನು ಲಗತ್ತಿಸುವ ನಿಟ್ಟಿನಲ್ಲಿ ಕಡಿಮೆ ಪಕ್ಷ ಒಂದಾದರೂ ಐಎಸ್‌ಒ‌ಫಿಕ್ಸ್ ವ್ಯವಸ್ಥೆ ಹೊಂದಿರಬೇಕಾಗಿದೆ.

ಮಕ್ಕಳ ಸುರಕ್ಷತೆಗಾಗಿ ಕಾರಿನಲ್ಲಿ ವಿಶೇಷ ಆಸನ ವ್ಯವಸ್ಥೆ

ಮುಂಭಾಗದ ಸೀಟಿನಲ್ಲಿ ಏರ್ ಬ್ಯಾಗ್ ಸೌಲಭ್ಯವಿರುವುದರಿಂದ ಅಂತೆಯೇ ಮಕ್ಕಳಿಗೆ ಇದು ಹೆಚ್ಚು ಮಾರಕವಾಗಿರುವುದರಿಂದ ವಾಹನ ತಯಾರಕರು ಹಿಂದುಗಡೆ ಸೀಟಿನಲ್ಲಿ ಮಕ್ಕಳಿಗಾಗಿ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಸೌಲಭ್ಯ ಒದಗಿಸುವ ಸಾಧ್ಯತೆಯಿದೆ.

Most Read Articles

Kannada
English summary
Provision to fit Child Restraint System (CRS) could soon be made mandatory in cars sold in India from October 1. CRS is a safety feature meant to keep children safely strapped to the seat who would otherwise not fit in regular seat belts.
Story first published: Saturday, March 1, 2014, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X