ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

Written By:

ನಿನ್ನೆಯಷ್ಟೇ ಕೇರಳ ಸಿಎಂ ಭೇಟಿ ಮಾಡಿ ವಾಪಸ್ ಕಾರಿನಲ್ಲಿ ಸಂಚರಿಸುತ್ತಿದ್ದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಬೈಕ್‌ ಸವಾರರಿಗೆ ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡಿರುವ ವಿಡಿಯೊ ವೈರಲ್‌ ಆಗಿದ್ದು, 65 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

ನಿವೃತ್ತಿಗೂ ಮುನ್ನ ಕ್ರೀಡಾಂಗಣದಲ್ಲಿ ತಲೆಗೆ ಹೆಲ್ಮೆಟ್‌ ಧರಿಸಿ ಹಲವು ಗಂಟೆಗಳ ಕಾಲ ಕ್ರಿಕೆಟ್‌ ಆಡುತ್ತಿದ್ದ ಸಚಿನ್‌ ತೆಂಡುಲ್ಕರ್‌ ಅವರು ಇದೀಗ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

ನಿನ್ನೆ ಕೇರಳದಲ್ಲಿ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಬೈಕ್‌ ಸವಾರರಿಗೆ ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡಿರುವ ವಿಡಿಯೊ ವೈರಲ್‌ ಆಗಿದ್ದು, 65 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದೆ.

Recommended Video - Watch Now!
[Kannada] Bajaj Pulsar NS200 ABS Launched In India - DriveSpark
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಇದಕ್ಕೂ ಮುನ್ನ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಇಲ್ಲದೆಯೇ ಸಂಚರಿಸುತ್ತಿರುವುದನ್ನು ಗಮನಿಸಿದ ಅವರು, ತಮ್ಮನ್ನು ಕಂಡು ಮುಗುಳು ನಗುತ್ತಿದ್ದ ಅಭಿಮಾನಿಗಳಿಗೆ ‘ಹಿಂದೆ ಕುಳಿತವರೂ ಸಹ ಹೆಲ್ಮೆಟ್‌ ಧರಸಿ' ಎಂದು ಮನವಿ ಮಾಡಿದ್ರು.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಸವಾರರು ಹಾಗೂ ಹಿಂದೆ ಕುಳಿತವರೂ ಕೂಡ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್‌ ಹಾಕಿಕೊಳ್ಳುವಂತೆ ತಿಳಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ತನ್ನ ಫೇಸ್‌ಬುಕ್‌ ಪುಟದಲ್ಲಿ ‘ಹೆಲ್ಮೆಟ್‌ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ' ಎಂಬ ಬರಹದೊಂದಿದೆ ವಿಡಿಯೊ ಪ್ರಕಟಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್‌ ವಿಡಿಯೋ ಸಿಕ್ಕಾಪಟ್ಟೆ ವೈರಲ್

‘ರಸ್ತೆ ಸುರಕ್ಷತೆ ಎಲ್ಲರ ಮೊದಲ ಆದ್ಯತೆಯಾಗಬೇಕು' ಎನ್ನುವ ಅಭಿಪ್ರಾಯದೊಂದಿಗೆ ಇದೇ ವರ್ಷ ಏಪ್ರಿಲ್‌ನಲ್ಲಿ ವಿಡಿಯೊ ಒಂದನ್ನು ಟ್ವೀಟಿಸಿದ್ದರು. ಸೆಲ್ಫಿ ತೆಗೆದುಕೊಳ್ಳಲು ಬಂದ ಯುವಕರಿಗೆ ಹೆಲ್ಮೆಟ್‌ ಧರಿಸುವಂತೆ ವಾಗ್ದಾನ ಮಾಡಿಸಿದ್ದು ಈ ವಿಡಿಯೊದಲ್ಲಿತ್ತು.

ತಪ್ಪದೇ ಓದಿ-ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಜೊತೆಗೆ ಕೇರಳದಿಂದ ಮುಂಬೈ ವಾಪಸ್ ತೆರಳುತ್ತಿರುವಾಗ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಸಚಿನ್ ತಂಡುಲ್ಕರ್ ಅವರು ಬೈಕ್ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರುವುದನ್ನು ಕಂಡ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗ್ರೇಟ್ ಗೊಯಿಂಗ್ ಬೆಂಗಳೂರು ಎಂಬ ಅಡಿ ಬರಹದೊಂದಿಗೆ ಟ್ಪಿಟರ್‌ನಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದಾರೆ.

Trending On DriveSpark Kannada:

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

English summary
Read in Kannada: Sachin Tendulkar Asks Bike Riders to Wear Helmet at Kerala. Click for Details...
Story first published: Saturday, November 4, 2017, 19:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark