ಕಾಯುವಿಕೆ ಅಂತ್ಯ; ದಟ್ಸನ್ ಗೊ ಬಜೆಟ್ ಕಾರು ಭರ್ಜರಿ ಲಾಂಚ್

Written By:

ಅಂತೂ ಕಾಯುವಿಕೆ ಕಾಲ ಅಂತ್ಯಗೊಂಡಿದೆ. ಬಹುನಿರೀಕ್ಷಿತ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ದೇಶದ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ದೇಶಿಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ನೂತನ ಅಲೆಯಿಬ್ಬಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಕೊಟ್ಟ ಮಾತನ್ನು ಉಳಿಸಿಕೊಂಡಿರುವ ದಟ್ಸನ್, ನೂತನ ಗೊ ಹ್ಯಾಚ್‌ಬ್ಯಾಕ್ ಕಾರು ಪ್ರಾರಂಭಿಕ ದರ 3.12 ಲಕ್ಷ ರು.ಗಳಲ್ಲಿ ಬಿಡುಗಡೆ ಮಾಡಿದೆ. ಅಂದರೆ ಮಾರುತಿ ಆಲ್ಟೊ, ಹ್ಯುಂಡೈ ಇಯಾನ್ ಕೋಟೆ ಭೇದಿಸುವಲ್ಲಿ ಸರ್ವ ಸನ್ನದ್ಧವಾಗಿ ನಿಂತಿದೆ. ನೂತನ ದಟ್ಸನ್ ಗೊ ಡಿ, ಎ ಹಾಗೂ ಟಿಗಳೆಂಬ ಮೂರು ವೆರಿಯಂಟ್ ಹಾಗೂ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಆಗಮನವಾಗಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

 • ಬೇಸ್ 'ಡಿ' ವೆರಿಯಂಟ್: 3.12 ಲಕ್ಷ ರು.
 • ಮಿಡ್ 'ಎ' ವೆರಿಯಂಟ್ 3.42 ಲಕ್ಷ ರು.
 • ಟಾಂಪ್ ಎಂಡ್ 'ಟಿ' ವೆರಿಯಂಟ್ 3.69 ಲಕ್ಷ ರು.
ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಈ ಪೈಕಿ ಬೇಸ್ ಡಿ ವೆರಿಯಂಟ್ ದರ 3.12 ಲಕ್ಷ ರು.ಗಳಾಗಿದ್ದು, ಡಿ ಹಾಗೂ ಡಿ1ಗಳೆಂಬ ಎರಡು ವರ್ಷನ್‌ಗಳಲ್ಲಿ ಲಭ್ಯವಾಗಲಿದೆ. ಡಿ ಹಾಗೂ ಡಿ1 ವೆರಿಯಂಟ್‌ಗಳ ಪ್ರಮುಖ ವ್ಯತ್ಯಾಸ ಏನೆಂದರೆ ಡಿ1 ವೆರಿಯಂಟ್‌ನಲ್ಲಿ ಲೆಫ್ಟ್ ವಿಂಗ್ ಮಿರರ್, ಬೋಟಲ್ ಹೋಲ್ಡರ್ ಮತ್ತು ಮುಂಭಾಗದ ಬಾಗಿಲಿನಲ್ಲಿ ಮ್ಯಾಪ್ ಪಾಕೆಟ್ ಸೌಲಭ್ಯವಿರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್,
 • ಡಿಜಿಟಲ್ ಟ್ರಿಪ್ ಕಂಪ್ಯೂಟರ್,
 • ಗೇರ್ ಶಿಫ್ಟ್ ಗೈಡ್,
 • ಎಂಜಿನ್ ಇಮೊಬಿಲೈಜರ್,
 • ಸ್ಪೀಡ್ ಸೆನ್ಸಿಟಿವ್ ವೈಪರ್.
 • ಪವರ್ ಸ್ಟೀರಿಂಗ್,
 • ಫ್ರಂಟ್ ಪವರ್ ವಿಂಡೋ,
 • ಸೆಂಟ್ರಲ್ ಲಾಕಿಂಗ್,
ಎ ವೆರಿಯಂಟ್

ಎ ವೆರಿಯಂಟ್

ಎಸಿ, ಎರಡು ಸ್ಪೀಕರ್ ಆಡಿಯೋ ಸಿಸ್ಟಂ, ಆಕ್ಸ್, ಮೊಬೈಲ್ ಸ್ಟಾಂಡ್, ಯುಎಸ್‌ಬಿ ಪೋರ್ಟ್.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಇನ್ನುಳಿದಂತೆ ಟಾಪ್ ಎಂಡ್ ಟಿ ವೆರಿಯಂಟ್‌ನಲ್ಲಿ ಮೇಲೆ ತಿಳಿಸಿದ ಫೀಚರ್ ಸೇರಿದಂತೆ ಪವರ್ ವಿಂಡೋ, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ದೇಹ ಬಣ್ಣದ ಬಂಪರ್, ಸೆಂಟ್ರಲ್ ಲಾಕಿಂಗ್ ಮತ್ತು ವೀಲ್ ಕವರ್ ಹೆಚ್ಚುವರಿಯಾಗಿ ಪಡೆಯಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಸಾಗಿದ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿದ್ದ ದಟ್ಸನ್ ಗೊ ಸಣ್ಣ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದಕ್ಕಾಗಿ ನೀವು ಮುಗಂಡವಾಗಿ ರು. 11,000 ಪಾವತಿಸಬೇಕಾಗಿದೆ. ಇದು ದೇಶದಲ್ಲಿ ಸ್ಥಿತಗೊಂಡಿರವು 125 ನಿಸ್ಸಾನ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ. ಇದರ ಜತೆಗೆ ರೋಡ್ ಸೈಡ್ ಅಸಿಸ್ಟಂಟ್ ಹಾಗೂ ಎರಡು ವರ್ಷಗಳ ವಾರಂಟಿ ಸೌಲಭ್ಯವಿರುತ್ತದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಕಳೆದ ವರ್ಷದ ದಟ್ಸನ್ ಸಣ್ಣ ಕಾರು ಬ್ರಾಂಡ್ ಅನ್ನು ದೇಶಕ್ಕೆ ಪರಿಚಯಿಸಿದ್ದ ಜಪಾನ್ ಮೂಲದ ನಿಸ್ಸಾನ್, ಪ್ರಮುಖವಾಗಿಯೂ ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡಿತ್ತು.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹೋಲಿಸಿದರೆ ದಟ್ಸನ್ ಗೊ ಹೆಚ್ಚು ಸ್ಥಳಾವಕಾಶ ಹಾಗೆಯೇ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಂಡಿದೆ. ಇದು ಖಂಡಿತವಾಗಿಯೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಅಂದ ಹಾಗೆ ದಟ್ಸನ್ ಗೊ, 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ (68 ಬಿಎಚ್‌ಪಿ, 110 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ. ಸದ್ಯ ಪೆಟ್ರೋಲ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ನಿಸ್ಸಾನ್ ಮೈಕ್ರಾ ತಲಹದಿಯಲ್ಲಿ ರೂಪುಗೊಂಡಿರುವ ದಟ್ಸನ್ ಗೊ, ಪ್ರತಿ ಲೀಟರ್‌ಗೆ 20.63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಇಲ್ಲಿಗೆ ದಟ್ಸನ್ ಪಯಣ ಮುಗಿಯುದಿಲ್ಲ. ಮುಂದಿನ ದಿನಗಳಲ್ಲಿ ದಟ್ಸನ್ ಗೊ ಪ್ಲಸ್ ಮಲ್ಟಿ ಪರ್ಪಸ್ ವಾಹನ ಸಹ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಮಾರುತಿ ಎರ್ಟಿಗಾ ಹಾಗೂ ಷೆವರ್ಲೆ ಎಂಜಾಯ್ ಆವೃತ್ತಿಗಳಿಗೆ ಪೈಪೋಟಿ ನೀಡಲಿದೆ. ಸಂಸ್ಥೆಯು ಈಗಾಗಲೇ ನೂತನ ಎಂಟ್ರಿ ಲೆವೆಲ್ ರೆಡಿಗೊ ಸಣ್ಣ ಕಾರನ್ನು ಸಹ ಅನಾವರಣಗೊಳಿಸಿದ್ದು, ಇದು ಆಲ್ಟೊಗೆ ಪ್ರತಿಸ್ಪರ್ಧಿಯಾಗಿರಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಇಷ್ಟೆಲ್ಲ ಆದರೂ ದರ ಕಡಿತಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ಫೀಚರ್ಸ್‌ಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದು ಸಿಂಗಲ್ ವೈಪರ್, ಕವರ್ ರಹಿತ ಗ್ಲೋವ್ ಬಾಕ್ಸ್ ಹಾಗೂ ಹಿಂದುಗಡೆ ಪವರ್ ವಿಂಡೋಸ್ ಕೊರತೆ ಕಾಡಲಿದೆ. ಅಷ್ಟೇ ಅಲ್ಲದೆ ಟಾಪ್ ಎಂಡ್ ವೆರಿಯಂಟ್‌ನಲ್ಲೂ ಎಬಿಎಸ್, ಏರ್ ಬ್ಯಾಗ್‌ಗಳ ಅಲಭ್ಯತೆ ಕಾಡಲದೆ. ಹಾಗಿದ್ದರೂ ಇವೆಲ್ಲವೂ ಐಚ್ಛಿಕವಾಗಲಿದೆ.

ಕಾಯುವಿಕೆ ಅಂತ್ಯ; ದಟ್ಸನ್ ಗೊ ಸಣ್ಣ ಕಾರು ಭರ್ಜರಿ ಲಾಂಚ್

ಇನ್ನು ಸ್ಮರ್ಧಾತ್ಮಕ ದರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬೇಸ್ ವೆರಿಯಂಟ್‌ಗಳಲ್ಲಿ ಎಸಿ ಹಾಗೂ ಪವರ್ ಸ್ಟೀರಿಂಗ್ ಇರುವುದಿಲ್ಲ. ಇನ್ನು ಗೇರ್ ಲಿವರ್, ಸೆಂಟರ್ ಕನ್ಸಾಲ್‌ನಲ್ಲಿ ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್ ಹಾಗೂ ಸಾಲು ಆಸನ ವ್ಯವಸ್ಥೆ ಹೆಚ್ಚು ಸ್ಥಳಾವಕಾಶ ಒದಗಿಸಲಿದೆ.

ದಟ್ಸನ್ ಗೊ

ದಟ್ಸನ್ ಗೊ

ಉದ್ದ - 3785 ಎಂಎಂ

ಅಗಲ - 1635 ಎಂಎಂ

ಎತ್ತರ - 1485 ಎಂಎಂ

ವೀಲ್ ಬೇಸ್ - 2450 ಎಂಎಂ

English summary
Datsun has launched its Go hatchback today at a starting price of Rs 3.12 lakh. The new Datsun Go is available in three variants - D, A and T.
Story first published: Wednesday, March 19, 2014, 13:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark