4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

Written By:

ಈ ಮೊದಲೇ ತಿಳಿಸಿರುವಂತೆಯೇ ನಿಸ್ಸಾನ್ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಮುಂದಿನ ವರ್ಷಾರಂಭದಲ್ಲಿ ದೇಶಕ್ಕೆ ಪರಿಚಯವಾಗುವುದು ಅಧಿಕೃತಗೊಂಡಿದೆ. ಇದರಂತೆ ಮುಂಬೈನಲ್ಲಿ ಹೆಚ್ಚಿನ ವಿವರ ಬಹಿರಂಗಪಡಿಸಿರುವ ಕಂಪನಿ ಪ್ರತಿನಿಧಿಗಳು ನೂತನ ದಟ್ಸನ್ ಟಾಪ್ ಎಂಡ್ ವೆರಿಯಂಟ್ ನಾಲ್ಕು ರು.ಗಳ ಅಸುಪಾಸಿನಲ್ಲಿ ಗ್ರಾಹಕರ ಕೈಸೇರಲಿದೆ ಎಂದು ತಿಳಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿ ಸಹ ಭಾಗವಹಿಸಿದ್ದರು. ಈ ಮೂಲಕ ವಾಹನ ಪ್ರಿಯರಿಗಾಗಿ ಮಾಹಿತಿಗಳನ್ನು ಕಲೆ ಹಾಕಲು ಅದೇ ರೀತಿ ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ಬಿಡುಗಡೆ ಮಾಡಲು ನಾವು ಯಶಸ್ವಿಯಾಗಿದ್ದೇವೆ. ಅಷ್ಟಕ್ಕೂ ದಟ್ಸನ್‌ನಿಂದ ಬಿಡುಗಡೆಯಾಗಲಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಅರಿಯಲು ಸ್ಲೈಡರ್‌ನತ್ತ ಮುಂದುವರಿಯಿರಿ...

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಕಂಪನಿ ಪ್ರತಿನಿಧಿಗಳ ಪ್ರಕಾರ ನೂತನವಾಗಿ ಆಗಮನವಾಗಲಿರುವ ದಟ್ಸನ್ ಗೊ ಬಿಡುಗಡೆ ಪೂರ್ವಭಾವಿಯಾಗಿ ದೇಶದ 90ಕ್ಕೂ ಹೆಚ್ಚು ನಗರಗಳಲ್ಲಿ ಪ್ರದರ್ಶಿಸಲಾಗುವುದು. ಈ ಮೂಲಕ ಗ್ರಾಹಕರನ್ನು ನಿಕಟವಾಗಿ ತಲುಪುವ ಪ್ರಯತ್ನ ಮಾಡಲಾಗುತ್ತಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಇದರಂಗವಾಗಿ ಮುಂಬೈ ಹಾಗೂ ದೆಹಲಿ ನಗರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಲ್ಕು ಲಕ್ಷದೊಳಗೆ ಬಿಡುಗಡೆಯಾಗುತ್ತಿರುವುದೇ ಗ್ರಾಹಕರಲ್ಲಿ ಹೆಚ್ಚು ಕುತೂಹಲ ಸೃಷ್ಟಿ ಮಾಡುವಲ್ಲಿ ಕಾರಣವಾಗಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

2014 ವರ್ಷಾರಂಭದಲ್ಲೇ ದಟ್ಸನ್ ಮಾರಾಟ ಆರಂಭವಾಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ವ್ಯಾಗನಾರ್, ಎಸ್ಟಿಲೊ, ಎಸ್ಟಾರ್‌ಗಳಂತಹ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಟಾರ್ಗೆಟ್ ಮಾಡುತ್ತಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರನ್ನು ದಟ್ಸನ್ ಗೊ ಪ್ಲಸ್ ಮಲ್ಟಿ ಪರ್ಪಸ್ ವೆಹಿಕಲ್ ಹಿಂಬಾಲಿಸಲಿದೆ. ಈ ಮೂಲಕ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ದಟ್ಸನ್ ಗೊ ಹ್ಯಾಚ್‌ಬ್ಯಾಕ್‌ನ್ನು ಎಕಾನಮಿ ಕಾರೆಂದೇ ಬಿಂಬಿಸಲಾಗುತ್ತಿದೆ. ಖಂಡಿತವಾಗಿಯೂ ಆಲ್ಟೊ 800ಗಿಂತಲೂ ಅತ್ಯುತ್ತಮ ವಿನ್ಯಾಸ ಪಡೆದುಕೊಳ್ಳುವಲ್ಲಿ ದಟ್ಸನ್ ಯಶಸ್ವಿಯಾಗಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ನೂತನ ದಟ್ಸನ್ ಗೊ, 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಕಂಪನಿ ಇದಕ್ಕಾಗಿ ಪ್ರತ್ಯೇಕ ಡೀಲರ್‌ಶಿಪ್ ತೆರೆದುಕೊಳ್ಳಲಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಇದೇ ಮೊದಲ ಬಾರಿಗೆ 26ರಿಂದ 40ರ ಹರೆಯದ ಪ್ರಾಯ ವರ್ಗದವರನ್ನು ಗುರಿಯಾಗಿರಿಸಿಕೊಂಡು ಈ ಹೊಚ್ಚ ಹೊಸ ಕಾರನ್ನು ಬಿಡುಗಡೆಗೊಳಿಸುತ್ತಿರುವುದು ಇನ್ನೊಂದು ವಿಶೇಷವಾಗಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಇಂಡಿಯನ್ ಆಟೋ ಎಕ್ಸ್ ಪೋ ಅಥವಾ ಅದಕ್ಕಿಂತಲೂ ಮೊದಲಾಗಿ ದಟ್ಸನ್ ಗೊ ಕಾರು ಲೋಕರ್ಪಣೆಯಾಗಲಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿರುವುದು ಸ್ಮರ್ಧಾತಕ ದರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನೆರವಾಗಲಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಆದರೆ ಸದ್ಯ ಪೆಟ್ರೋಲ್ ವೆರಿಯಂಟ್‌ನಲ್ಲಿ ಮಾತ್ರ ದಟ್ಸನ್ ಮಾರುಕಟ್ಟೆ ತಲುಪುತ್ತಿದೆ.

4 ಲಕ್ಷಕ್ಕೆ ನಿಮ್ಮ ಕೈ ಸೇರಲಿದೆ ದಟ್ಸನ್ ಅಗ್ಗದ ಕಾರು

ಇನ್ನು ಭಾರತೀಯ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಅತ್ಯುತ್ತಮ ಮೈಲೇಜ್ ಹೊಂದಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.

Story first published: Monday, December 16, 2013, 6:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark