ದೊಡ್ಡ ಕುಟುಂಬಕ್ಕಾಗಿ ಫಿಯೆಟ್ 7 ಸೀಟಿನ 500ಎಲ್ ಲೈವಿಂಗ್
ನಾಲ್ಕು ಮೀಟರ್ ಪರಿಮಿತಿಯೊಳಗಿರುವ ಕಾರುಗಳಿಗೆ ತೆರಿಗೆ ವಿನಾಯಿತಿ ಲಭಿಸುವ ಹಿನ್ನಲೆಯಲ್ಲಿ ಬಹುತೇಕ ಕಾರುಗಳು ಫೈವ್ ಸೀಟರ್ ಕಾರುಗಳತ್ತ ಹೆಚ್ಚಿನ ಗಮನ ಹರಿಸ ತೊಡಗಿದ್ದವು. ಇದರಿಂದಾಗಿ ಏಳೆಂಟು ಸದಸ್ಯರಿರುವ ಕುಟಂಬಗಳಿಗೆ ಸಣ್ಣ ಕಾರು ಖರೀದಿಸುವುದರ ಹೊರತು ಅನ್ಯ ಮಾರ್ಗವಿರಲಿಲ್ಲ.
ಇನ್ನು ದೊಡ್ಡ ಕಾರು ಬೇಕೆಂದರೆ ಹೆಚ್ಚು ಮೊತ್ತ ಪಾವತಿಸಬೇಕಾಗಿತ್ತು. ವಿಷಯ ಏನೇ ಇರಲಿ, ಪ್ರಸ್ತುತ ಜಗತ್ತಿನ ಅತಿ ಶ್ರೇಷ್ಠ ಬ್ರಾಂಡ್‌ಗಳಲ್ಲಿ ಒಂದೆನಿಸಿಕೊಂಡಿರುವ ಇಟಲಿ ಮೂಲದ ಫಿಯೆಟ್, ಸೆವೆನ್ ಸೀಟರ್ ಕಾರೊಂದನ್ನು ಯುರೋಪ್‌ನಲ್ಲಿ ಅನಾವರಣಗೊಳಿಸಿದೆ. ಖಂಡಿತವಾಗಿಯೂ ಇದು ದೂಡ್ಡ ಕುಟುಂಬಗಳ ಸಮಸ್ಯೆಯನ್ನು ಇದು ನೀಗಿಸಬಲ್ಲದು.
ಪ್ರಸ್ತುತ ಎಂಪಿವಿ ಭಾರತ ಪ್ರವೇಶ ಯಾವಾಗ ಪಡೆಯಲಿದೆ ಎಂಬುದು ತಿಳಿದು ಬಂದಿಲ್ಲ. ಹಾಗೊಂದು ವೇಳೆ ಭಾರತಕ್ಕೆ ಲಗ್ಗೆಯಿಟ್ಟರೆ ಟೊಯೊಟಾ ಇನ್ನೋವಾ ಕಾರುಗಳಿಗೆ ಪ್ರಬಲ ಪ್ರತಿಸ್ಫರ್ದಿ ಎನಿಸಲಿದೆ. ಅಷ್ಟೇ ಅಲ್ಲದೆ ಪ್ರವಾಸ ಮುಂತಾದ ಮನರಂಜನೆಗಳಿಗೆ ಕುಟುಂಬದ ಜತೆಯಾಗಿಯೇ ತೆರಳಬಹುದಾಗಿದೆ. ಇದು ಏಳು ಜನರಿಗೆ ಆರಾಯದಾಯಕವಾಗಿ ಪಯಣಿಸುವ ವಿನ್ಯಾಸ ಪಡೆದುಕೊಂಡಿದೆ.
ನೂತನ ಫಿಯೆಲ್ 500 ಎಲ್ ಲೈವಿಂಗ್ ಕಾರಿನಲ್ಲಿ ಮೂರು ಸಾಲಿನ ಸಿಟ್ಟಿಂಗ್ ವ್ಯವಸ್ಥೆಯಿದೆ. ಪ್ರಸ್ತುತ ಕಾರು 500 ಕಾರಿನ ಆರನೇ ವಾರ್ಷಿಕೋತ್ಸವ ಅಂಗವಾಗಿ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ.

ನೂತನ ಫಿಯೆಟ್ 500ಎಲ್ ಲೈವಿಂಗ್ ತಲಾ ಎರಡು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಇದರ ಪಾಪ್ ಸ್ಟಾರ್ ಹಾಗೂ ಲಾಂಜ್ ವೆರಿಯಂಟ್‌ಗಳು ಐದು ಹಾಗೂ ಏಳು ಸೀಟ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಗ್ರಾಹಕರಿಗೆ ಅನೇಕ ಕಸ್ಟಮೈಸ್ಡ್ ಆಪ್ಷನ್‌ಗಳಿವೆ.

ನೂತನ ಫಿಯೆಟ್ ಕಾರು 19 ವಿವಿಧ ಬಾಡಿ ಕಲರ್ ಆಯ್ಕೆಗಳಲ್ಲಿ ಆಗಮನವಾಗುತ್ತಿದೆ. ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ಪ್ರದಾನ ಮಾಡಲಿದೆ.

ಹಾಗೆಯೇ ಕಾರಿನ ಒಳಭಾಗದಲ್ಲಿ ಲೆಥರ್ ಇಂಟಿರಿಯರ್, ನೇವಿಗೇಷನ್ ಸಿಸ್ಟಂ ಹಾಗೂ ರಿವರ್ಸ್ ಕ್ಯಾಮೆರಾ ಆಯ್ಕೆಗಳಿವೆ.

ಇನ್ನು ದರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ಇದು ಈ ಬಗ್ಗೆ ಅಧಿಕೃತ ಲಾಂಚ್ ವೇಳೆ ಮಾಹಿತಿ ದೊರಕುವ ಸಾಧ್ಯತೆಗಳಿವೆ.

ಇಷ್ಟೆಲ್ಲ ಆದರೂ ಫಿಯೆಟ್‌ನಿಂದ ನೂತನ ಕಾರು ಯಾವಾಗ ಭಾರತ ಪ್ರವೇಶ ಪಡೆಯಲಿದೆ ಎಂಬುದು ಕುತೂಹಲವಾಗಿಯೇ ಉಳಿದಿದೆ.


Click it and Unblock the Notifications








