ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

Written By:

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಾಂಪಾಕ್ಟ್ ಸೆಡಾನ್ ವಿಭಾಗದ ಬಳಿಕ ಮಲ್ಟಿ ಪರ್ಪಸ್ ವಾಹನಗಳಿಗೂ (ಎಂಪಿವಿ) ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಮಾರುತಿ ಎರ್ಟಿಗಾ ಯಶಸ್ಸು ಇದಕ್ಕೊಂದು ನಿದರ್ಶನವಾಗಿದೆ.

ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಪ್ರತ್ಯಕ್ಷ

ಹಾಗಿರುವಾಗ ಎಲ್ಲ ಹೊಸತನದಿಂದ ಕೂಡಿರುವ ಹೋಂಡಾ ಮೊಬಿಲಿಯೊ ಎಂಪಿವಿ ಮಾರುಕಟ್ಟೆಗೆ ಲಗ್ಗೆಯಿಡಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ತೆರೆಮರೆಯಲ್ಲಿ ಮೊಬಿಲಿಯೊಗೆ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳುತ್ತಿದೆ. ಅದುವೆ ಫಿಯೆಟ್ ಡೊಬ್ಲೊ (Doblo).

To Follow DriveSpark On Facebook, Click The Like Button
ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಪುಣೆಯಲ್ಲಿ ಪರೀಕ್ಷಾರ್ಥ ಚಾಲನೆ ವೇಳೆ ಫಿಯೆಟ್ ಡೊಬ್ಲೊ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿವೆ. ಇದು ಫಿಯೆಟ್ ಇಂಡಿಯಾದ ರಂಜನ್‌ಗೋನ್ ಘಟಕದಲ್ಲಿ ಕಾಣಿಸಿಕೊಂಡಿದೆ.

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ನಿಮ್ಮ ಮಾಹಿತಿಗಾಗಿ, ದಶಕದಷ್ಟು ಹಿಂದೆ ಫಿಯೆಟ್ ಡೊಬ್ಲೊ ವ್ಯಾನ್ ಅನ್ನು 2000 ಪ್ಯಾರಿಸ್ ಮೋಟಾರು ಶೋದಲ್ಲಿ ಮೊದಲು ಅನಾವರಣಗೊಳಿಸಲಾಗಿತ್ತು.

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಇದು ಐದು ಹಾಗೂ ಏಳು ಸೀಟುಗಳ ಆಸನ ವ್ಯವಸ್ಥೆ ಹೊಂದಿದೆ. ಹಾಗಿದ್ದರೂ ಪ್ರಸಕ್ತ ಸಾಲಿನಲ್ಲಿ ಲಾಂಚ್ ಮಾಡುವ ಯಾವುದೇ ಇರಾದೆ ಹೊಂದಿಲ್ಲ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಪ್ರಸಕ್ತ ಸಾಲಿನಲ್ಲಿ ನಾಲ್ಕು ಮಾದರಿಗಳನ್ನು ಲಾಂಚ್ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಪೈಕಿ ಲಿನಿಯಾ ಈಗಾಗಲೇ ಬಿಡುಗಡೆಯಾಗಿದೆ. ಇದನ್ನು ಪುಂಟೊ ಫೇಸ್‌ಲಿಫ್ಟ್, ಅವೆಂಚ್ಯುರಾ ಹಾಗೂ 500 ಅಬಾರ್ತ್ ಹಿಂಬಾಲಿಸಲಿದೆ. ಈ ಮೂರು ಆವೃತ್ತಿಗಳು ಅನುಕ್ರಮವಾಗಿ ಜೂನ್, ಆಗಸ್ಟ್ ಹಾಗೂ ಡಿಸೆಂಬರ್‌ನಲ್ಲಿ ಲಾಂಚ್ ಆಗಲಿದೆ.

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಕಳೆದ ಕೆಲವು ವರ್ಷಗಳಲ್ಲಿ ಎಂಪಿವಿ ವಿಭಾಗದಲ್ಲಿ ದೇಶದಲ್ಲಿ ಪ್ರಗತಿ ಸಾಧಿಸಿದೆ. ಇದೇ ಕಾರಣಕ್ಕಾಗಿ ಫಿಯೆಟ್ ತನ್ನ ಹೊಸ ಆವೃತ್ತಿಯನ್ನು ಪರೀಕ್ಷಿಸುತ್ತಿದೆ. ಇದು 2015ರಲ್ಲಿ ಲಾಂಚ್ ಆದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಫೋಟೊ ಕೃಪೆ: ಫಿಯೆಟ್ ಹಿಮಾಚಲ ಪ್ರದೇಶ

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಅಷ್ಟಕ್ಕೂ ಲೇಟೆಸ್ಟ್ ಜನರೇಷನ್ ಡೊಬ್ಲೊ 1.4 ಫೈರ್ ಪೆಟ್ರೋಲ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ. ಸದ್ಯ ಈವೆರಡು ಭಾರತದಲ್ಲೇ ಉತ್ಪಾದನೆಯಾಗುತ್ತಿದೆ.

ಫೋಟೊ ಕೃಪೆ: ಫಿಯೆಟ್ ಹಿಮಾಚಲ ಪ್ರದೇಶ

ಫಿಯೆಟ್‌ನಿಂದ ಎರ್ಟಿಗಾ, ಮೊಬಿಲಿಯೊ ಪ್ರತಿಸ್ಪರ್ಧಿ ಸಿದ್ಧ

ಈ ಎಲ್ಲ ವಿಚಾರಗಳು ಡೊಬ್ಲೊ ಬಿಡುಗಡೆ ಮಾಡುವಂತೆ ಇಟಲಿ ಮೂಲದ ಫಿಯೆಟ್ ಸಂಸ್ಥೆಯನ್ನು ಪ್ರೇರೇಪಿಸಿದೆ. ಇದು 4253 ಎಂಎಂ ಉದ್ದ, 1831 ಎಂಎಂ ಎತ್ತರ, 1772 ಎಂಎಂ ಅಗಲ ಹಾಗೂ 2583 ಎಂಎಂ ವೀಲ್ ಬೇಸ್ ಹೊಂದಿದೆ. ಅಂದರೆ ಎರ್ಟಿಗಾಗಿಂತಲೂ ಹೆಚ್ಚು ಸುತ್ತಳತೆಯನ್ನು ಹೊಂದಿರಲಿದೆ.

Story first published: Thursday, April 17, 2014, 7:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark