ಇಂಧನ ಕ್ಷಮತೆ ಹೆಚ್ಚಿಸಲು ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

Written By:

ಶಿಪ್ರ ಗತಿಯ ಬೆಳವಣಿಗೆಯೊಂದರಲ್ಲಿ ಇಂಧನ ಕ್ಷಮತೆ ಹೆಚ್ಚಿಸಲು ಪಣ ತೊಟ್ಟಿರುವ ಫೋರ್ಡ್ ಸಂಸ್ಥೆಯು, ತನ್ನೆಲ್ಲ ಕಾರುಗಳಿಗೆ ನೂತನ 'ಆಟೋ ಸ್ಟಾರ್ಟ್/ಸ್ಟಾಪ್' ತಂತ್ರಜ್ಞಾನ ಆಳವಡಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಯೋಜನೆ ಪ್ರಾಥಮಿಕ ಅಂಗವಾಗಿ 2017ರ ವೇಳೆಗೆ ತವರೂರಾದ ಅಮೆರಿಕದಲ್ಲಿ ಶೇಕಡಾ 70ರಷ್ಟು ಫೋರ್ಡ್ ಕಾರುಗಳಿಗೆ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಗಾರಿಕೆಯನ್ನು ಆಳವಡಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಅತ್ಯಂತ ಹೆಚ್ಚು ಇಂಧನ ಕ್ಷಮತೆಯುಳ್ಳ ಫೋರ್ಡ್ ಕಾರೆಂದೇ ಬಿಂಬಿಸಲ್ಪಟ್ಟಿರುವ ಫಿಯೆಸ್ಟಾ ಹ್ಯಾಚ್‌ಬ್ಯಾಕ್ 1.0 ಲೀಟರ್ ಇಕೊಬೂಸ್ಟ್ ಕಾರಿನ ಬಿಡುಗಡೆಗೂ ಮುಂಚಿತವಾಗಿ ಈ ಮಹತ್ತರ ಯೋಜನೆ ಪ್ರಕಟಗೊಂಡಿದೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಪರಿಣಾಮಕಾರಿ ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯ ಮಾಡುವುದರತ್ತ ಕಾರ್ಯಮಗ್ನವಾಗಿರುವ ಫೋರ್ಡ್ ಸ್ವಯಂಚಾಲಿತ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಆಳವಡಿಸಲಿದೆ ಎಂದು ಫೋರ್ಡ್ ಜಾಗತಿಕ ಪವರ್‌ಟ್ರೇನ್ ಉಪಾಧ್ಯಕ್ಷ ಬಾಬ್ ಫಾಸೆಟ್ಟಿ ತಿಳಿಸಿದ್ದಾರೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಅಂದ ಹಾಗೆ ಆಟೋ ಸ್ಟಾರ್ಟ್/ಸ್ಪಾಟ್ ಇಂಧನ ಉಳಿತಾಯ ವೈಶಿಷ್ಟ್ಯವು ಮೋಟಾರು ವಾಹನದ ಎಂಜಿನನ್ನು ಹತೋಟಿಯಲ್ಲಿಡಲಿದ್ದು, ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಪೋಲಾಗುವುದನ್ನು ತಡೆಯಲಿದೆ. ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಕಾರ್ಯಗಳು ಮುಂದುವರಿದ ಬ್ಯಾಟರಿ ವ್ಯವಸ್ಥೆಯ ನಿಯಂತ್ರಣದಲ್ಲಿರದೆ. ಬಳಿಕ ಚಾಲಕ ಬ್ರೇಕ್‌ನಿಂದ ಕಾಲು ತೆಗೆದ ತಕ್ಷಣ ಎಂಜಿನ್ ಯಥಾ ಪ್ರಕಾರ ಕಾರ್ಯರೂಪಕ್ಕೆ ಬರಲಿದೆ. ಈ ಮೂಲಕ ಇಂಧನ ಉಳಿಸಲು ನೆರವಾಗಲಿದೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಅಧ್ಯಯನದ ಪ್ರಕಾರ ಮೋಟಾರು ಎಂಜಿನ್‌ನಲ್ಲಿ ಆಟೋ ಸ್ಟಾರ್ಟ್/ಸ್ಟಾಪ್ ಎಂಜಿನ್ ಆಳವಡಿಸುವುದರಿಂದ ಟ್ರಾಫಿಕ್ ಪರಿಸ್ಥಿತಿಯಲ್ಲಿ ಇಂಧನ ಕ್ಷಮತೆಯನ್ನು ಶೇಕಡಾ 10ರಷ್ಟು ಹೆಚ್ಚಿಸಬಹುದಾಗಿದೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಇವೆಲ್ಲವೂ ಫೋರ್ಡ್ ಬ್ಲ್ಯೂ ಪ್ರಿಂಟ್ ಸಂರಕ್ಷಣೆ ಯೋಜನೆಯ ಅಂಗವಾಗಿ ಆಳವಡಿಕೆಯಾಗಲಿದೆ. ಸದ್ಯದಲ್ಲೇ ನೆಕ್ಸ್ಟ್ ಜನರೇಷನ್ ಇಕೊಸ್ಪೋರ್ಟ್ ಕಾರಿನಲ್ಲೂ ಈ ತಂತ್ರಜ್ಞಾನ ಆಳವಡಿಕೆಯಾಗಲಿದೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಅಂದ ಹಾಗೆ ಭಾರತದಲ್ಲೀಗ ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ ಹೊಂದಿದ ಯಾವುದೇ ವಾಹನಗಳು ಮಾರಾಟದಲ್ಲಿಲ್ಲ. ಹಾಗಿದ್ದರೂ ಹಲವಾರು ಯುರೋಪಿಯನ್ ಮಾದರಿಗಳಲ್ಲಿ ಈಗಾಗಲೇ ಇಂಥ ತಂತ್ರಜ್ಞಾನಗಳು ಲಭ್ಯವಿದ್ದು, ವರ್ಷಾಂತ್ಯದ ವೇಳೆಗೆ 5,00,000ದಷ್ಟು ವಾಹನಗಳಿಗೆ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ ಆಳವಡಿಕೆಯಾಗುವ ನಿರೀಕ್ಷೆಯಲ್ಲಿದೆ.

ಫೋರ್ಡ್ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ

ಭಾರತದಲ್ಲಿ ಮಹೀಂದ್ರ ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ500 ಎಸ್‌ಯುವಿ ಕಾರುಗಳಿಲ್ಲಿ ಮಾತ್ರ ಸ್ಟಾರ್ಟ್/ಸ್ಟಾಪ್ ತಂತ್ರಗಾರಿಕೆ ಲಭ್ಯವಿದೆ. ಮಹೀಂದ್ರ ಮೈಕ್ರೊ-ಹೈಬ್ರಿಡ್ ತಂತ್ರಗಾರಿಕೆಯು ಇದಕ್ಕೆ ಸಮಾನವಾದ ರೀತಿಯಲ್ಲೇ ಕೆಲಸ ಮಾಡುತ್ತಿದೆ ಎಂಬುದು ಗಮನಾರ್ಹವಾಗಿದೆ.

English summary
Ford, under its Blueprint for Sustainability initiative, has announced it will introduce Auto Start/Stop technology in 70 percent of its cars by the year 2017 in the United States.
Story first published: Monday, December 16, 2013, 13:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark