ಇಕೊಸ್ಪೋರ್ಟ್ ಯಶಸ್ಸಿನ ಬೆನ್ನಲ್ಲೇ ಫಿಯೆಸ್ಟಾ ಆಗಮನ ಖಚಿತ

Written By:

ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಯಶಸ್ಸಿನ ಬೆನ್ನಲ್ಲೇ ಅಮೆರಿಕದ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್, ಭಾರತಕ್ಕೆ ಇನ್ನೊಂದು ಮಾಡೆಲ್ ಪರಿಚಯಿಸಲು ಯೋಜನೆ ಹಾಕಿಕೊಂಡಿದೆ.

ಮೂಲಗಳ ಪ್ರಕಾರ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಫೋರ್ಡ್ ಫಿಯೆಸ್ಟಾ ಸೆಡಾನ್ ಕಾರಿನ ಫೇಸ್‌ಲಿಫ್ಟ್ ವರ್ಷನನ್ನು 2014ರ ವರ್ಷಾರಂಭದಲ್ಲಿ ದೇಶಕ್ಕೆ ಪರಿಚಯಸಲಿದೆ.

ಅಮೆರಿಕ ಸೇರಿದಂತೆ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ 2014 ಫೋರ್ಡ್ ಫಿಯೆಸ್ಟಾ ಹಲವಾರು ಕಾರಣಗಳಿಂದಾಗಿ ವಿಶೇಷವೆನಿಸಿದೆ. ಇದು ದೇಶದ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯನ್ನು ಫೋರ್ಡ್ ಹೊಂದಿದೆ.

To Follow DriveSpark On Facebook, Click The Like Button
ದೆಹಲಿ ಆಟೋ ಎಕ್ಸ್‌ಪೋ

ದೆಹಲಿ ಆಟೋ ಎಕ್ಸ್‌ಪೋ

ಸದ್ಯ ಬಂದಿರುವ ಮಾಹಿತಿ ಪ್ರಕಾರ ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ ಫೋರ್ಡ್ ಫಿಯೆಸ್ಟಾ ಫೇಸ್‌ಲಿಫ್ಟ್ ತದಾ ಬಳಿಕ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಸೆಡಾನ್ ಕಾರು

ಸೆಡಾನ್ ಕಾರು

ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ಐದು ಡೋರಿನ ಹ್ಯಾಚ್‌ಬ್ಯಾಕ್ ಕಾರಾಗಿ ಪರಿಗಣಿಸಲ್ಪಟ್ಟಿರುವ ಪೋರ್ಡ್ ಫಿಯೆಸ್ಟಾ, ಭಾರತದಲ್ಲಿ ಮಗದೊಮ್ಮೆ ಸಿ ಸೆಡಾನ್ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಹ್ಯುಂಡೈ ವರ್ನಾ ಆವೃತ್ತಿಗಳಿಗೆ ನಿಕಟ ಪೈಪೋಟಿ ಎಸಗಲಿದೆ.

ಪರಿಷ್ಕೃತ ಮಾಡೆಲ್

ಪರಿಷ್ಕೃತ ಮಾಡೆಲ್

ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿದೆ. ಬ್ರೆಜಿಲ್‌ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಈ ಸೆಡಾನ್ ಕಾರಿನಲ್ಲಿ ಹೊಸ ಅಲಾಯ್ ವೀಲ್ ಆಳವಡಿಸಲಾಗುವುದು.

ಎಂಜಿನ್

ಎಂಜಿನ್

ಹಾಗಿದ್ದರೂ ಇಕೊಸ್ಪೋರ್ಟ್‌ನಲ್ಲಿರುವ 1.0 ಇಕೊಬೂಸ್ಟ್ ಎಂಜಿನ್ ಆಳವಡಿಸುವ ಸಾಧ್ಯತೆ ಕಡಿಮೆಯಾಗಿದೆ. ಇದು ವಿಶೇಷವಾಗಿಯೂ ಇಕೊಸ್ಪೋರ್ಟ್‌ಗಾಗಿ ಮೀಸಲಿರಿಸಲಾಗುವುದು. ಹಾಗಿದ್ದರೂ 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಕಂಡುಬರಲಿದೆ.

ಯುರೋಪ್ ಆವೃತ್ತಿ

ಯುರೋಪ್ ಆವೃತ್ತಿ

ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಇಕೊಬೂಸ್ಟ್ ಎಂಜಿನನ್ನು ಫಿಯೆಸ್ಟಾಗೆ ಆಳವಡಿಸುವ ಯೋಜನೆಯಿಂದ ಫೋರ್ಡ್ ಹಿಂದೆ ಸರಿಯುತ್ತಿದೆ. ಸದ್ಯ ಭಾರತದಲ್ಲಿ ಫಿಯೆಸ್ಟಾ ಅಷ್ಟೊಂದು ಜನಪ್ರಿಯತೆ ಗಿಟ್ಟಿಸಿಕೊಂಡಿಲ್ಲ. ಆದರೆ ಉತ್ಪಾದನೆಯನ್ನು ಸ್ಥಳೀಯವಾಗಿಸುವುದರರೊಂದಿಗೆ 2014 ಫಿಯೆಸ್ಟಾ ಮಾಡೆಲನ್ನು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಫೋರ್ಡ್ ಯೋಜನೆ ಹೊಂದಿದೆ.

English summary
According to a new reports, Ford India would be launching the 2013 Ford Fiesta facelift early next year.
Story first published: Friday, August 23, 2013, 16:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark