ಸಿಟಿಯೆಲ್ಲ ಡೀಸೆಲ್‌ಮಯ; ಹೋಂಡಾ ಸಿಟಿಗೆ ಸಕತ್ ಡಿಮ್ಯಾಂಡ್?

By Nagaraja

ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಕಾರು ಭಾರತ ಮಾರುಕಟ್ಟೆಯನ್ನು ಲಗ್ಗೆಯಿಡಲು ತುದಿಗಾಲಲ್ಲಿ ನಿಂತಿದೆ. ಹಾಗಿರುವಂತೆಯೇ ಹೋಂಡಾ ಸಿಟಿ ಕಾರಿಗೆ ಭಾರಿ ಬೇಡಿಕೆ ಕಂಡುಬಂದಿದ್ದು, ಹಲವಾರು ಡೀಲರ್‌ಶಿಪ್‌ಗಳಲ್ಲಿ ಅನಧಿಕೃತ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿರುವ ಬಗ್ಗೆ ಮಾಹಿತಿಗಳು ಬಂದಿವೆ.

2014 ಹೋಂಡಾ ಸಿಟಿ ಕಾರು ಡೀಸೆಲ್ ವರ್ಷನ್ ಪಡೆದುಕೊಳ್ಳುತ್ತಿರುವುದು ಗ್ರಾಹಕರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಅಲ್ಲದೆ ವಿನ್ಯಾಸದಲ್ಲೂ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ.

2014 ಹೋಂಡಾ ಸಿಟಿ

2014 ಹೋಂಡಾ ಸಿಟಿ ಡೀಸೆಲ್ ಕಾರಿನ ಜಾಗತಿಕ ಪಾದರ್ಪಣೆ ನವೆಂಬರ್ 25ರಂದು ನಡೆಯಲಿದೆ.

2014 ಹೋಂಡಾ ಸಿಟಿ

ಈ ನಡುವೆ ಔಟ್ ಡೇಟಡ್ ಹೋಂಡಾ ಸಿಟಿ ಕಾರಿನ ಬೇಡಿಕೆ ಗಣನೀಯ ಕುಸಿತ ಕಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಕೇವಲ 31 ಯುನಿಟ್‌ಗಳಷ್ಟೇ ಬುಕ್ಕಿಂಗ್ ಆಗಿವೆ. ಕಳೆದ ಬಾರಿಯಿದು 2,043 ಯುನಿಟ್‌ಗಳಾಗಿತ್ತು.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್

2014 ಹೋಂಡಾ ಸಿಟಿ

ಹೋಂಡಾದ ಕೆಲವು ಡೀಲರ್‌ಶಿಪ್‌ಗಳಲ್ಲಿ ಮುಂಗಡವಾಗಿ 50,000 ರು. ಪಾವತಿಸುವ ಮೂಲಕ ಮುಗಂಡ ಬುಕ್ಕಿಂಗ್ ದಾಖಲಿಸಿಕೊಳ್ಳಲಾಗುತ್ತಿದೆ.

2014 ಹೋಂಡಾ ಸಿಟಿ

ಬಲ್ಲ ಮೂಲಗಳ ಪ್ರಕಾರ 2014 ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಡೀಸೆಲ್ ಕಾರು ತದಾ ಬಳಿಕ ಲಾಂಚ್ ಆಗಲಿದೆ.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್
2014 ಹೋಂಡಾ ಸಿಟಿ

2014 ದೆಹಲಿ ಎಕ್ಸ್ ಪೋದಲ್ಲಿ ಸಿಟಿ ಜತೆ ಹೋಂಡಾ ಜಾಝ್ ಹಾಗೂ ಮೊಬಿಲಿಯೊ ಎಂಪಿವಿ ಕೂಡಾ ಪ್ರದರ್ಶನ ಕಾಣುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್
2014 ಹೋಂಡಾ ಸಿಟಿ

ಪೆಟ್ರೋಲ್, ಡೀಸೆಲ್ ಸೇರಿದಂತೆ ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಹೋಂಡಾ ಸಿಟಿ ಆಗಮನವಾಗುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್
2014 ಹೋಂಡಾ ಸಿಟಿ

ಪೆಟ್ರೋಲ್ ವೆರಿಯಂಟ್ ಸದ್ಯ ಮಾರುಕಟ್ಟೆಯಲ್ಲಿರುವ ಐ-ವಿಟೆಕ್ (i-VTEC) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅದೇ ಹೊತ್ತಿಗೆ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೇಜ್ ಐ-ಡಿಟೆಕ್ ಡೀಸೆಲ್ ಎಂಜಿನ್ (i-DTEC) ಪಡೆದುಕೊಳ್ಳಲಿದೆ.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್

2014 ಹೋಂಡಾ ಸಿಟಿ

ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಕ್ರೀಡಾತ್ಮಕ ಲುಕ್ ಪಡೆಯಲಿರುವ ಹೋಂಡಾ ಸಿಟಿ ಸೆಡಾನ್ ಕಾರಿನ ಹೆಡ್ ಲ್ಯಾಂಪ್, ಪ್ರೊಜೆಕ್ಟರ್ ಲೈಟ್ ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಾಂದರ್ಭಿಕ ಚಿತ್ರ: ಹೋಂಡಾ ಕ್ರೈಡರ್

Most Read Articles

Kannada
English summary
New Honda City diesel coming soon. New Honda City diesel expected to launch after the 2014 Indian Auto Expo.
Story first published: Wednesday, November 6, 2013, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X