ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

Posted By:

ನಾವು ಹಲವು ವಿಧಧ ಕಾರುಗಳನ್ನು ನೋಡಿರುತ್ತೇವೆ. ಅಂದ ಚಂದವಾದ ವರ್ಣೀಯ ಕಾರುಗಳು ಮೊದಲ ನೋಟದಲ್ಲೇ ನಮ್ಮ ಕಣ್ಣು ಕುಕ್ಕುವಂತಿರುತ್ತದೆ. ಇಂದು ನಾವು ಪರಿಚಯಿಸಲಿರುವ ಕಾರು ಕೂಡಾ ಇದೇ ಪಟ್ಟಿಗೆ ಸೇರಿದೆ.

ದೈನಂದಿನ ಜೀವನದಲ್ಲಿ ತಲೆದೋರುವ ಪಾರ್ಕಿಂಗ್ ಸಮಸ್ಯೆಯಿಂದಾಗಿ ಸಾಕಪ್ಪಾ ಸಾಕು ಈ ವಾಹನಗಳ ಸಹವಾಸ ಎಂದು ಅನ್ನಿಸಿಬಿಡುತ್ತದೆ. ಆದರೆ ಇವೆಲ್ಲಕ್ಕೂ ಪರಿಹಾರವೆಂಬಂತೆ ದಕ್ಷಿಣ ಕೊರಿಯಾದ ಹೆಸರಾಂತ ಕಂಪನಿಯೊಂದು ಮೊಟ್ಟೆಯಾಕಾರದ ಕಾರೊಂದನ್ನು ಸಿದ್ಧಪಡಿಸಿದೆ.

ಹೌದು, ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆಯು ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರವಾಗುವಂತಹ ಪರಿಣಾಮಕಾರಿ ಮೊಟ್ಟೆಯಾಕಾರದ ಕಾರನ್ನು ಅಭಿವೃದ್ಧಿಪಡಿಸಿದೆ.

ಹೆಸರಲ್ಲೇ ಸೂಚಿಸಿದಂತೆ ಮೊಟ್ಟೆ ಆಕಾರವನ್ನು ಹೊಂದಿರುವ ಈ ಸುಂದರಿ, ಸಂಚಾರ ದಟ್ಟಣೆಯಲ್ಲೂ ಸೈಕಲ್ ತರಹನೇ ಸರಾಗವಾಗಿ ಚಲಿಸಲಿದೆ. ಹಾಗಿದ್ದರೆ ಬನ್ನಿ ಈ ವಿಶೇಷ ಕಾರಿನ ಬಗೆಗಿನ ಸ್ಪೆಷಲ್ ಡಿಟೈಲ್ಸ್ ನೋಡೋಣ...

ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಅಂದ ಹಾಗೆ ಸಿಯೋಲ್ ಮೋಟಾರ್ ಶೋದಲ್ಲಿ ಹ್ಯುಂಡೈಯ ಮೊಟ್ಟೆಯಾಕಾರದ 'ಇ4ಯು' (E4U) ಕಾರು ಅನಾವರಣಗೊಂಡಿದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಇದು ಒಂದು ವ್ಯಕ್ತಿಗೆ ಮಾತ್ರ ಸಂಚರಿಸಬಹುದಾದ ವಿಶೇಷ ಕಾರಾಗಿದೆ. ಹಾಗೆಯೇ ನಿಕಟ ವಾಹನ ದಟ್ಟಣೆಯಲ್ಲೂ ಹಾಯಾಗಿ ಚಲಿಸಬಹುದಾಗಿದ್ದು, ಪಾರ್ಕಿಂಗ್ ಮಾಡುವುದು ಇನ್ನು ಸುಲಭ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಎಲೆಕ್ಟ್ರಿಕ್ ಬ್ಯಾಟರಿಯಿಂದ ಈ ಕಾರು ಕೆಲಸ ಮಾಡುತ್ತಿದ್ದು, ಪ್ರತಿ ಗಂಟೆಗೆ ಗರಿಷ್ಠ 18 ಮೈಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಪ್ರಸ್ತುತ ಕಾರಿಗೆ 'ಇ4ಯು' ಎಂದು ನಾಮಕರಣ ಮಾಡಲು ವಿಶೇಷ ಕಾರಣವೊಂದಿದೆ. ಇದರಲ್ಲಿ ನಾಲ್ಕು 'ಇ' ಅಡಗಿದ್ದು, (evolution, electricity, eco-friendliness and egg) ವಿಕಸನ, ವಿದ್ಯುತ್, ಪರಿಸರ ಸ್ನೇಹಿ ಹಾಗೂ ಮೊಟ್ಟೆಯಾಕಾರದ ಸಂಕೇತ ನೀಡುತ್ತದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ನಗರ ಪ್ರದೇಶದ ಜನರಿಗೆ ಈ ಮೊಟ್ಟೆಯಾಕಾರದ ಕಾರು ಸಹಕಾರಿಯಾಗಲಿದೆ. ಇನ್ನು ಪರಿಸರ ಸ್ನೇಹಿ ಆಗಿದ್ದರಿಂದ ಹೆಚ್ಚು ಗ್ರಾಹಕರನ್ನು ಆಕರ್ಷಿಸಲಿದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಕಾರಿನ ಹಿಂಬದಿಯಲ್ಲಿ ಮಡಚಬಹುದಾದ ರಿಯರ್ ಲೆಗ್ ಹೊಂದಿದ್ದು, ಇದರ ನೆರವಿನಿಂದ ಜನದಟ್ಟಣೆಯ ನಗರ ಬೀದಿಗಳಲ್ಲಿ ಸುಲಲಿತವಾಗಿ ಪಾರ್ಕಿಂಗ್ ಮಾಡಬಹುದಾಗಿದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಹಾಗೆಯೇ ಹಿಂಬದಿಯಲ್ಲಿನ ಎರಡು ವೀಲ್‌ಗಳು ಕಾರಿಗೆ ಹೆಚ್ಚು ಸಮತೋಲನ ನೀಡುತ್ತದೆ. ಇದು 24 ವೋಲ್ಟ್ ಹಾಗೂ 500 ವ್ಯಾಟ್ ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತದೆ.

ಪಾರ್ಕಿಂಗ್‌ ಸಮಸ್ಯೆಗೆ ಹ್ಯುಂಡೈ ಮೊಟ್ಟೆಯಾಕಾರದ ಕಾರು ಪರಿಹಾರ

ಪ್ರಸ್ತುತ ಕಾನ್ಸೆಪ್ಟ್ ಕಾರಿನ ಉತ್ಪಾದಕ ವರ್ಷನ್ ಸದ್ಯದಲ್ಲೇ ಆರಂಭವಾಗಲಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರಕಿಲ್ಲ. ಸದ್ಯ ಚಿತ್ರಗಳನ್ನು ನೋಡಿ ಎಂಜಾಯ್ ಮಾಡಿರಿ...

ಹ್ಯುಂಡೈ 'ಇ4ಯು'

ಹ್ಯುಂಡೈ 'ಇ4ಯು'

ಹ್ಯುಂಡೈ 'ಇ4ಯು'

ಹ್ಯುಂಡೈ 'ಇ4ಯು'

English summary
Car manufacturers Hyundai has put a whole new spin on personal transportation with the egg-shaped E4U vehicle it showed off at the Seoul Motor Show.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark