ಬೆಂಗಳೂರು ಪ್ರವೇಶಿಸಿದ ಹ್ಯುಂಡೈ ಎಲೈಟ್ ಐ20; ಬೆಲೆ ಎಷ್ಟು?

By Nagaraja

ಕಳೆದ ದಿನವಷ್ಟೇ ದೇಶಿಯ ಲಾಂಚ್ ಕಂಡಿದ್ದ ಹ್ಯುಂಡೈ ಎಲೈಟ್ ಐ20 ಇದೀಗ ಸ್ಥಳೀಯ ಲಾಂಚ್‌ನ ಭಾಗವಾಗಿ ಬೆಂಗಳೂರು ನಗರ ಪ್ರವೇಶ ಕಂಡಿದೆ. ದೇಶದ ಅತಿದೊಡ್ಡ ರಫ್ತು ತಯಾರಕ ಹಾಗೂ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಬೆಂಗಳೂರಿನವರಿಗಾಗಿ ಹ್ಯುಂಡೈ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ.

ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಇದನ್ನು ಪ್ರಮುಖವಾಗಿಯೂ ಜರ್ಮನಿಯಲ್ಲಿರುವ ಹ್ಯುಂಡೈ ಮೋಟಾರ್ಸ್ ಯುರೋಪ್ ಡಿಸೈನ್ ಕೇಂದ್ರದಿಂದ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಸಂಸ್ಥೆಯ ಹೊಸತಾದ ಫ್ಲೂಯಿಡಿಕ್ 2.0 ಸ್ಟ್ರೋಮ್ ಎಡ್ಜ್ ಡಿಸೈನ್ ನೀತಿಯನ್ನು ಅನುಸರಿಸಲಾಗಿದೆ. ಹ್ಯುಂಡೈ ಎಲೈಟ್ ಐ20 ಬೆಂಗಳೂರು ಎಕ್ಸ್ ಶೋ ರೂಂ ದರ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ವೈಶಿಷ್ಟ್ಯ

ವೈಶಿಷ್ಟ್ಯ

ದಿಟ್ಟವಾದ ಹಾಗೂ ದೊಡ್ಡದಾದ ಫ್ರಂಟ್ ಗ್ರಿಲ್,

ದೊಡ್ಡ ಬೊನೆಟ್,

ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್,

ಪ್ರೀಮಿಯಂ 2 ಟೋನ್ 16 ಇಂಚು ಡೈಮಂಡ್ ಕಟ್ ಅಲಾಯ್ ವೀಲ್,

ಸ್ಪೋರ್ಟಿ ಸ್ಟೈಲಿಷ್ ಬ್ಲ್ಯಾಕ್ ಸಿ ಪಿಲ್ಲರ್,

ಪ್ರೀಮಿಯಂ ಕ್ರೋಮ್ ಫಿನಿಶ್ ಡೋರ್ ಹ್ಯಾಂಡಲ್

ಪ್ರೀಮಿಯಂ ಇಂಟಿರಿಯರ್

ಪ್ರೀಮಿಯಂ ಇಂಟಿರಿಯರ್

ಸ್ಪೋರ್ಟಿ ಬಹುಕ್ರಿಯಾತ್ಮಕ ಸ್ಟೀರಿಂಗ್ ವೀಲ್,

ಇಂಟೇಗ್ರೇಟಡ್ 2 ಡಿನ್ ಎಂಪಿ3 ಆಡಿಯೋ ಜೊತೆಗೆ ಯಎಸ್‌ಬಿ, ಆಕ್ಸ್ ಇನ್ ಮತ್ತು 1 ಜಿಜಿ ಇಂಟರ್ನಲ್ ಮೆಮರಿ,

ಹೆಚ್ಚು ಸ್ಥಳಾವಕಾಶಯುಕ್ತ ಕ್ಯಾಬಿನ್,

285 ಲೀಟರ್ ಬೂಟ್ ಸ್ಪೇಸ್,

ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ (ಎಫ್‌ಎಟಿಸಿ),

ಆರ್ಮ್‌ರೆಸ್ಟ್, ಸ್ಟೋರೆಜ್ ಬಾಕ್ಸ್,

ಹೊಂದಾಣಿಸಬಹುದಾದ ಚಾಲಕ ಸೀಟು ಎತ್ತರ,

ಸನ್‌ಗ್ಲಾಸ್ ಹೋಲ್ಡರ್, ಕಾರ್ಡ್ ಹೋಲ್ಡರ್

ಎಂಜಿನ್

ಎಂಜಿನ್

1.2 ಡ್ಯುಯಲ್ ವಿಟಿವಿಟಿ ಕಪ್ಪ ಪೆಟ್ರೋಲ್ - 1197 ಸಿಸಿ, 83 ಅಶ್ವಶಕ್ತಿ, 11.7 ಟಾರ್ಕ್

1.4 ಯು2 ಸಿಆರ್‌ಡಿಐ ಡೀಸೆಲ್ - 1395 ಸಿಸಿ, 90 ಅಶ್ವಶಕ್ತಿ, 22.4 ಟಾರ್ಕ್

ಮೈಲೇಜ್ (kmpl)

ಮೈಲೇಜ್ (kmpl)

1.2 ಡ್ಯುಯಲ್ ವಿಟಿವಿಟಿ ಕಪ್ಪ - 18.60 (ಇರಾ/ಮ್ಯಾಗ್ನ)

1.4 ಯು2 ಸಿಆರ್‌ಡಿಐ ಡೀಸೆಲ್ - 22.54 (ಇರಾ/ಮ್ಯಾಗ್ನ)

ಮುಂದುವರಿದ ಹೈಟೆಕ್ ತಂತ್ರಗಾರಿಕೆ

ಮುಂದುವರಿದ ಹೈಟೆಕ್ ತಂತ್ರಗಾರಿಕೆ

ಬ್ಲೂಟೂತ್ ಕನೆಕ್ಟಿವಿಟಿ,

ಬಹುಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಆಡಿಯೋ, ಬ್ಲೂಟೂತ್ ನಿಯಂತ್ರಣ,

ಸ್ಟಾರ್ಟ್ ಸ್ಟಾಪ್ ಬಟನ್,

ಸ್ಮಾರ್ಟ್ ಕೀ,

ಟಿಲ್ಟ್ ಆಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್,

ಎಸ್ಕಾರ್ಟ್ ಫಂಕ್ಷನ್,

ಆಟೋ ಫೋಲ್ಡಿಂಗ್ ಔಟ್‌ಸೈಡ್ ರಿಯರ್ ವ್ಯೂ ಮಿರರ್.

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಏರ್‌ಬ್ಯಾಗ್,

ಎಬಿಎಸ್,

ಸ್ಮಾರ್ಟ್ ಪೆಡಲ್,

ಪರಿಣಾಮಕಾರಿ ಸೆನ್ಸಿಂಗ್ ಡೋರ್ ಅನ್‌ಲಾಕ್,

ಸುಧಾರಿತ ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸ್ಟೀರಿಂಗ್ ಅಡಾಪ್ಟಿವ್ ಪಾರ್ಕಿಂಗ್ ಗೈಡ್ ಲೈನ್,

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ಫೀಚರ್ಸ್

ಫೀಚರ್ಸ್

ಕ್ರೀಡಾತ್ಮಕ ಮತ್ತು ಸ್ಟೈಲಿಶ್ ಕಪ್ಪು 'ಸಿ' ಪಿಲ್ಲರ್,

ಫ್ರಂಟ್ ಕನ್ಸಾಲ್ ಆರ್ಮ್ ರೆಸ್ಟ್ ಜೊತೆ ಸ್ಟೋರೆಜ್ ಬಾಕ್ಸ್,

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್,

2 ಟೋನ್ ಡೈಮಂಡ್ ಕಟ್ 16 ಇಂಚು ಅಲಾಯ್ ವೀಲ್,

ಆಡಿಯೋದಲ್ಲಿ 1 ಜಿಬಿ ಇಂಟರ್ನಲ್ ಮೆಮರಿ,

ಸ್ಮಾರ್ಟ್ ಪೆಡಾಲ್,

ಮುಂದುವರಿದ ಪ್ರೀಮಿಯಂ ಲುಕಿಂಗ್ ಸೂಪರ್‌ವಿಷನ್ ಕ್ಲಸ್ಟರ್

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ಇರಾ - 4.98

ಮ್ಯಾಗ್ನ - 5.51

ಸ್ಪೋರ್ಟ್ಜ್ - 6.04

ಸ್ಪೋರ್ಟ್ಜ್ (ಐಚ್ಛಿಕ) - 6.36

ಆಸ್ಟಾ - 6.58

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ಡೀಸೆಲ್ (ಲಕ್ಷ ರು.ಗಳಲ್ಲಿ)

ಇರಾ - 6.20

ಮ್ಯಾಗ್ನ - 6.73

ಸ್ಪೋರ್ಟ್ಜ್ - 7.26

ಸ್ಪೋರ್ಟ್ಜ್ (ಐಚ್ಛಿಕ) - 7.58

ಆಸ್ಟಾ - 7.8

ಬೆಂಗಳೂರು ಪ್ರವೇಶಿಸಿದ ಹ್ಯುಂಡೈ ಎಲೈಟ್ ಐ20

ಹೊಸ ಹ್ಯುಂಡೈ ಐ20 ಇತ್ತೀಚೆಗಷ್ಟೇ ಪರಿಷ್ಕೃತಗೊಂಡಿರುವ ಫೋಕ್ಸ್‌ವ್ಯಾಗನ್ ಪೊಲೊ, ಫಿಯೆಟ್ ಪುಂಟೊ ಇವೊ, ಮಾರುತಿ ಸ್ವಿಫ್ಟ್ ಮತ್ತು ಹೋಂಡಾ ಜಾಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Most Read Articles

Kannada
English summary
Hyundai Motor India has launched the all-new Elite i20 in Bangalore. A sporty, dynamic and innovative hatchback with class leading unique features, the all-new Elite i20 has been designed using Hyundai’s evolved Fluidic Sculpture 2.0 philosophy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X