4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

Written By:

ನಿರೀಕ್ಷೆಯಂತೆಯೇ ದೇಶದ ಮಾರುಕಟ್ಟೆಗೆ ಹ್ಯುಂಡೈ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಎಂಟ್ರಿ ಕೊಟ್ಟಿದೆ. ಇದರ ಬೇಸ್ ಪೆಟ್ರೋಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 4.89 ಲಕ್ಷ ರು.ಗಳಾಗಿರಲಿದೆ.

ಇದರೊಂದಿಗೆ ಬಹುನಿರೀಕ್ಷಿತ ಎಲೈಟ್ ಐ20 ಕಾರನ್ನು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವಲ್ಲಿ ಸಂಸ್ಥೆಯು ಯಶ ಕಂಡಿದೆ. ಭಾರತದಲ್ಲಿ ಮೊದಲು ಬಿಡುಗಡೆಗೊಂಡಿರುವ ಎಲೈಟ್ ಐ20 ಆವೃತ್ತಿಯ ಜಾಗತಿಕ ಲಾಂಚ್ ಯುರೋಪ್‌ನಲ್ಲಿ ಮುಂದಿನ ತಿಂಗಳು ನಡೆಯಲಿದೆ.|

 

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಇದನ್ನು ಪ್ರಮುಖವಾಗಿಯೂ ಜರ್ಮನಿಯಲ್ಲಿರುವ ಹ್ಯುಂಡೈ ಮೋಟಾರ್ಸ್ ಯುರೋಪ್ ಡಿಸೈನ್ ಕೇಂದ್ರದಿಂದ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಸಂಸ್ಥೆಯ ಹೊಸತಾದ ಫ್ಲೂಯಿಡಿಕ್ 2.0 ಸ್ಟ್ರೋಮ್ ಎಜ್ಡ್ ಡಿಸೈನ್ ನೀತಿಯನ್ನು ಅನುಸರಿಸಲಾಗಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಹೊಸ ಹ್ಯುಂಡೈ ಐ20 ಇತ್ತೀಚೆಗಷ್ಟೇ ಪರಿಷ್ಕೃತಗೊಂಡಿರುವ ಫೋಕ್ಸ್‌ವ್ಯಾಗನ್ ಪೊಲೊ, ಫಿಯೆಟ್ ಪುಂಟೊ ಇವೊ, ಮಾರುತಿ ಸ್ವಿಫ್ಟ್ ಮತ್ತು ಹೋಂಡಾ ಜಾಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಹಿಂದಿನ ಜನಾಂಗದ ಹ್ಯುಂಡೈ ಐ20 ಮಾದರಿಗೆ ಹೋಲಿಸಿದಾಗ ಹೊಸ ಎಲೈಟ್ ಐ20 ಕಾರಿನ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರ 1.4 ಲೀಟರ್ ಡೀಸೆಲ್ ಎಂಜಿನ್ 88.7 ಅಶ್ವಶಕ್ತಿ (220 ಎನ್‍‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಆದರೆ ನೀವಿಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಮಾಡಿಕೊಳ್ಳಲಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಮಾತ್ರ ಇರಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಅದೇ ರೀತಿ ಇದರ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ 82 ಅಶ್ವಶಕ್ತಿ (114 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಇನ್ನೊಂದು 1.4 ಲೀಟರ್ ಪೆಟ್ರೋಲ್ ಎಂಜಿನ್ 98 ಅಶ್ವಶಕ್ತಿ (136 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಾಗಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಹಿಂದಿನ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಮುಂದುಗಡೆ ದಿಟ್ಟ ರೇಖೆಗಳು, ಎಲ್‌ಇಡಿ ಡೇಟೈಮ್ ಹೆಡ್‌ಲೈಟ್, ಬಿ-ಸಿ ಪಿಲ್ಲರುಗಳಲ್ಲಿ ಕಪ್ಪು ಪಟ್ಟಿ, ದೊಡ್ಡ ಲೈಟ್‌ಗಳ ಜೊತೆಗೆ ಎಲ್‌ಇಡಿ ಚಮಕ್ ಮತ್ತು ಆಕರ್ಷಕ ಫ್ರಂಟ್ ಗ್ರಿಲ್ ಇರಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಕಾರಿನೊಳಗೂ ಹೆಚ್ಚಿನ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ತ್ರಿ ಸ್ಪೋಕ್ ಹಾಗೂ ಆಡಿಯೋ ನಿಯಂತ್ರಿತ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಜತೆ 2ಜಿಬಿ ಆನ್ ಬೋರ್ಡ್ ಸ್ಟೋರೆಜ್, ರಿಯರ್ ಎಸಿ ವೆಂಟ್ಸ್ ಜೊತೆಗೆ ಈಗಿನ ಮಾದರಿಗಿಂತಲೂ ಹೆಚ್ಚು ಸ್ಥಳಾವಕಾಶ ಇರಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಲ್ಲಿ 6 ಏರ್ ಬ್ಯಾಗ್, ಅಡಾಪ್ಟಿವ್ ಸ್ಟೀರಿಂಗ್ ಪಾರ್ಕಿಂಗ್ ಅಸಿಸ್ಟ್, ಡೋರ್ ಸೆನ್ಸಾರ್, ರಿವರ್ಸ್ ಕ್ಯಾಮೆರಾ ಜೊತೆಗೆ ಪಾರ್ಕಿಂಗ್ ಸೆನ್ಸಾರ್ ಇರಲಿದೆ.

4.89 ಲಕ್ಷಕ್ಕೆ ಹ್ಯುಂಡೈ ಎಲೈಟ್ ಐ20 ಭರ್ಜರಿ ಲಾಂಚ್

ಇನ್ನು ಭಾರತೀಯ ಅಧ್ಯಯನ ವಾಹನ ಸಂಸ್ಥೆಯ ಮಾನ್ಯತೆಯ ಪ್ರಕಾರ ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 18.6 ಕೀ.ಮೀ. ಅಂತೆಯೇ ಡೀಸೆಲ್ ಮಾದರಿಯು 22.54 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ಇರಾ - 4.89

ಮ್ಯಾಗ್ನ - 5.94

ಸ್ಪೋರ್ಟ್ಜ್ - 5.94

ಆಸ್ಟಾ - 6.47

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್ (ಲಕ್ಷ ರು.ಗಳಲ್ಲಿ)

ಇರಾ - 6.1

ಮ್ಯಾಗ್ನ - 6.62

ಸ್ಪೋರ್ಟ್ಜ್ - 7.14

ಆಸ್ಟಾ - 7.66

ಆಸ್ಟಾ

ಆಸ್ಟಾ

 • ಪವರ್ ಸ್ಟೀರಿಂಗ್,
 • ಫ್ರಂಟ್ ಪವರ್ ವಿಂಡೋಸ್,
 • ಮ್ಯಾನುವಲ್ ಎಸಿ,
 • ಸೆಂಟ್ರಲ್ ಲಾಕಿಂಗ್,
 • 14 ಇಂಚು ಅಲಾಯ್ ವೀಲ್
ಮ್ಯಾಗ್ನ

ಮ್ಯಾಗ್ನ

 • ಪ್ಲಿಪ್ ಕಿ,
 • ರಿಯರ್ ಪಾರ್ಸೆಲ್ ಸೆಲ್ಫ್,
 • ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್,
 • 2 ಡಿನ್ ಮ್ಯೂಸಿಕ್ ಸಿಸ್ಟಂ, ಆಕ್ಸ್/ಯುಎಸ್‌ಬಿ/ಬ್ಲೂಟೂತ್ ಕನೆಕ್ಟಿವಿಟಿ ಜತೆ 4 ಸ್ಪೀಕರ್‌ಗೆ ಸಂಪರ್ಕಿತ 1 ಜಿಬಿ ಇಂಟರ್ನಲ್ ಸ್ಟೋರೆಜ್,
 • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
 • ಆಲ್ ಡೋರ್ ಪವರ್ ವಿಂಡೋಸ್,
 • ರಿಯರ್ ಎಸಿ ವೆಂಟ್ಸ್,
 • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
 • ಕೂಲ್ಡ್ ಗ್ಲೋವ್ ಬಾಕ್ಸ್
ಸ್ಪೋರ್ಟ್ಜ್

ಸ್ಪೋರ್ಟ್ಜ್

 • ಮ್ಯಾಗ್ನ ಜೊತೆ ಈ ಕೆಳಕಂಡ ಹೆಚ್ಚುವರಿ ವೈಶಿಷ್ಟ್ಯಗಳು ಇರಲಿದೆ.
 • ಡ್ರೈವರ್ ಏರ್ ಬ್ಯಾಗ್,
 • ಎಬಿಎಸ್,
 • ರಿಯರ್ ಪಾರ್ಕಿಂಗ್ ಸೆನ್ಸಾರ್,
 • ರಿಯರ್ ವ್ಯೂ ಕ್ಯಾಮೆರಾ ಜೊತೆ ಐಆರ್‌ವಿಎಂ ಪರದೆ,
 • ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಮತ್ತು ಗೇರ್ ಲಿವರ್,
 • ಟಿಲ್ಟ್ ಮತ್ತು ಟೆಲಿಸ್ಕಾಪಿಕ್ ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್,
 • ಆಟೋಮ್ಯಾಟಿಕ್ ಎಸಿ
ಸ್ಪೋರ್ಟ್ಜ್ (ಐಚ್ಛಿಕ)

ಸ್ಪೋರ್ಟ್ಜ್ (ಐಚ್ಛಿಕ)

 • ಕ್ಲಚ್ ಲಾಕ್,
 • ಸ್ಮಾರ್ಟ್ ಕೀ,
 • 16 ಇಂಚು ಅಲಾಯ್ ವೀಲ್ ಜತೆ ಸ್ಪೇರ್ ವೀಲ್,
 • ಕ್ರೋಮ್ ಡೋರ್ ಹ್ಯಾಂಡಲ್ಸ್
ಆಸ್ಟಾ

ಆಸ್ಟಾ

 • ಸ್ಪೋರ್ಟ್ಜ್ (ಐಚ್ಛಿಕ) ಜೊತೆಗೆ
 • ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್,
 • ಆಟೋಮ್ಯಾಟಿಕ್ ಹೆಡ್ ಲೈಟ್,
 • ರಿಯರ್ ವೈಪರ್ ಮತ್ತು ವಾಶರ್,
 • ಸೆಕೆಂಡರಿ ಪವರ್ ಸಾಕೆಟ್
English summary
Hyundai Motor India has launched the new Elite i20 at a starting price of Rs 4.89 lakh, ex-showroom Delhi for the base petrol variant.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark