ಹ್ಯುಂಡೈ ಎಚ್‌ಬಿ20ಎಸ್ ಸೆಡಾನ್ ಕಾರು ಲಾಂಚ್

Written By:

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯಾದ ಹ್ಯುಂಡೈ, ಬ್ರೆಜಿಲ್‌ನಲ್ಲಿ ಹ್ಯುಂಡೈ ಎಚ್‌ಬಿ20ಎಸ್ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಪ್ರಸ್ತುತ ವಾರ್ತೆಯನ್ನು ಇಲ್ಲಿ ಉಲ್ಲೇಖಿಸಿರುವ ಪ್ರಮುಖ ಕಾರಣವೇನೆಂದರೆ ಹ್ಯುಂಡೈ ಎಚ್‌ಬಿ20ಎಸ್ ಕಾರು ಮುಂದಿನ ದಿನಗಳಲ್ಲಿ ಭಾರತಕ್ಕೂ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

ದೇಶದಲ್ಲಿ ಉತ್ತಮ ಮಾರುಕಟ್ಟೆ ಹೊಂದಿರುವುದು ಹಾಗೂ ಮಾರುತಿ ಸುಜುಕಿಗೆ ನಿಕಟ ಪೈಪೋಟಿ ಒಡ್ಡಲು ಹ್ಯುಂಡೈ ಹೊಸ ಅವತಾರ ಪ್ರತ್ಯಕ್ಷವಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ಬ್ರೆಜಿಲ್‌ನಲ್ಲಿ ಬಿಡುಗಡೆಗೊಂಡಿದ್ದ ಐ20 ತಲಹದಿಯ ಹ್ಯುಂಡೈ ಕಡಿಮೆ ವೆಚ್ಚದ ಎಚ್‌ಬಿ20 ಕಾರು ಭಾರಿ ಯಶ ಸಾಧಿಸಿತ್ತಲ್ಲದೆ ಅಲ್ಲಿ ಅತ್ಯಂತ ಹೆಚ್ಚು ಮಾರಾಟ ಕಂಡ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ನೂತನ ಸೋದರ ಎಚ್‌ಬಿ20ಎಸ್ ಸೆಡಾನ್ ಕಾರಿನ ಎಂಟ್ರಿ ಪಡೆದುಕೊಂಡಿರುವುದು ಮತ್ತಷ್ಟು ಬಲ ತುಂಬುವಂತಾಗಿದೆ.

ಬ್ರೆಜಿಲ್‌ನಲ್ಲಿ ಹ್ಯುಂಡೈ ಎಚ್‌ಬಿ20 ಹ್ಯಾಚ್‌ಬ್ಯಾಕ್ ಕಾರಿಗೆ ಷೆವರ್ಲೆ ಓನಿಕ್ಸ್‌ನಿಂದ ಕಠಿಣ ಪೈಪೋಟಿ ಎದುರಾಗಿತ್ತು. ಇದರ ಬೆನ್ನಲ್ಲೇ ಷೆವರ್ಲೆಯ ಪ್ರಿಸ್ಮಾ ಸೆಡಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಎಚ್‌ಬಿ20ಎಸ್ ಕಾರನ್ನು ಹ್ಯುಂಡೈ ಕಣಕ್ಕಿಳಿಸಿದೆ.

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯಾಚ್‌ಬ್ಯಾಕ್‌ನಲ್ಲಿ ಬಳಕೆ ಮಾಡಲಾದ 1.0 ಲೀಟರ್ ಪ್ಯೂಯಲ್ ಎಂಜಿನ್ ಎಚ್‌ಬಿ20ಎಸ್ ಸೆಡಾನ್ ಕಾರಿನಲ್ಲೂ ಆಳವಡಿಸಲಾಗಿದೆ. ಒಟ್ಟಾರೆಯಾಗಿ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ಲುಕ್ ಆಕರ್ಷಕವಾಗಿದೆ.

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಪರವ್ ಸ್ಟೀರಿಂಗ್, ಏರ್ ಕಂಡೀಷನರ್, ಡ್ಯುಯಲ್ ಏರ್‌ಬ್ಯಾಕ್, ಪವರ್ ವಿಂಡೋ, ಆಡಿಯೋ ಸಿಸ್ಟಂ ಜತೆ ರೆಡಿಯೋ, ಎಂಪಿ3, ಬ್ಲೂಟೂತ್ ಹಾಗೂ ಯುಎಸ್‌ಬಿ ಕನೆಕ್ಟಿವಿಗಳಂತಹ ಆಕರ್ಷಕ ಫೀಚರ್ಸ್‌ಗಳನ್ನು ಹ್ಯುಂಡೈ ಎಚ್‌ಬಿ20ಎಸ್ ಸೆಡಾನ್ ಕಾರು ಹೊಂದಿದೆ.

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಇನ್ನು ದರದ ಬಗ್ಗೆ ಗಮನ ವಹಿಸುವುದಾದರೆ ನೂತನ ಹ್ಯುಂಡೈ ಎಚ್‌ಬಿ20ಎಸ್ ದರ 11 ಲಕ್ಷ ಅಸುಪಾಸಿನಲ್ಲಿದೆ. ಅಂದರೆ ಷೆವರ್ಲೆ ಸೆಡಾನ್ ಕಾರಿಗೆ ಹೋಲಿಸಿದರೆ ಸ್ವಲ್ಪ ದುಬಾರಿಯಾಗಲಿದೆ. ಆದರೆ ಹೆಚ್ಚಿನ ಫೀಚರ್ಸ್ ಹೊಂದಿದೆ.

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

ಹ್ಯುಂಡೈ ಎಚ್‌ಬಿ20ಎಸ್

English summary
India's second largest car maker Hyundai Motors India is planning bring an entry level sedan based its premium hatchback i20. This all new entry level sedan might the replaced version of the existing Hyundai Accent. Have a look at the Brazilian version of i20 sedan.
Story first published: Friday, March 22, 2013, 14:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark