ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

Written By:

ವಿಶ್ವದ ಹೆಸರಾಂತ ವಾಹನ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ, ಇದೀಗ ನಿರ್ವಹಣಾ ಕಾರು ವಿಭಾಗಕ್ಕೂ ಕಾಲಿಟ್ಟಿದ್ದು, ನೂತನ ಐ20 ಡಬ್ಲ್ಯುಆರ್‌ಸಿ ಸ್ಪೋರ್ಟ್ಸ್ ಕಾರನ್ನು ಲಾಂಚ್ ಮಾಡಿದೆ.

ಈ ಮೂಲಕ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ವಿಶ್ವ ರಾಲಿ ಕಾರು ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಳ್ಳುವುದನ್ನು ಖಚಿತಪಡಿಸಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಇತರ ಸ್ಪರ್ಧಿಗಳಂತೆ ಹ್ಯುಂಡೈ ಸಹ ಪರಿಷ್ಕೃತ ಐ20 ರೇಸ್ ಕಾರನ್ನು ಅಭಿವೃದ್ಧಿಗೊಳಿಸಿದೆ. ಇದು ಶೆಲ್ ವರ್ಲ್ಡ್ ರಾಲಿ ತಂಡವೆಂದು ಹೆಸರಿಸಿಕೊಳ್ಳಲಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಭಾರತದಲ್ಲಿ ತಯಾರುಗೊಂಡ ಹ್ಯುಂಡೈ ಐ20 ಕಾರುಗಳು ಬಳಿಕ ಜರ್ಮನಿಯಲ್ಲಿ ರೇಸಿಂಗ್ ಸ್ಪರ್ಶ ಪಡೆಯಲಿದೆ. ಇದರಲ್ಲಿ ಡಬ್ಲ್ಯುಆರ್‌ಸಿ ರೇಸಿಂಗ್ ಮೆಷಿನ್ ಆಳವಡಿಸಿಕೊಳ್ಳಲಾಗುತ್ತದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಮೊಂಟೆಕಾರ್ಲೊದಲ್ಲಿ ನಡೆಯಲಿರುವ 2014 ಎಫ್‌ಐಎ ವರ್ಲ್ಡ್ ರಾಲಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಮುಂಚೂಣಿಯ ಚಾಲಕ ಡ್ಯಾನಿ ಸೊರ್ಡೊ ತಂಡದ ಚಾಲನೆಯನ್ನು ಮುನ್ನಡೆಸಲಿದ್ದಾರೆ. ಇವರಿಗೆ ಥೆರ್ರಿ ನ್ಯೂವಿಲ್ಲೆ ಸಾಥ್ ನೀಡಲಿದ್ದಾರೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ವಿಶೇಷವೆಂದರೆ ಒಂದು ವರ್ಷದ ಅವಧಿಯೊಳಗೆ ಹ್ಯುಂಡೈ ಐ20 ಡಬ್ಲ್ಯುಆರ್‌ಸಿ ತಂಡವನ್ನು ಬಿಡುಗಡೆಗೊಳಿಸಲಾಗಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಇನ್ನು ಮುಂದಿನ ದಿನಗಳಲ್ಲಿ ಮೋಟಾರು ಸ್ಪೋರ್ಟ್ಸ್ ವಿಭಾಗದಲ್ಲಿ ಹ್ಯುಂಡೈ ಹೊಸ ಶಕ್ತಿಯಾಗಿ ಬೆಳೆಯಲಿದೆ. ಇದಕ್ಕೆಲ್ಲ ಐ20 ಸ್ಪೋರ್ಟ್ಸ್ ಕಾರು ಸಾಕ್ಷಿಯಾಗಲಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಅಷ್ಟೇ ಯಾಕೆ ಐ20 ಡಬ್ಲ್ಯುಆರ್‌ಸಿ ಸ್ಪೋರ್ಟ್ಸ್ ನಿರ್ಮಾಣ ಮಾಡುವ ವಿಭಾಗಕ್ಕೆ ಹ್ಯುಂಡೈ ಹೆಸರೊಂದನ್ನು ಇರಿಸಿದೆ. ಇದು 'ಎನ್' ಎಂದು ಹೆಸರಿಸಿಕೊಳ್ಳಲಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಇಲ್ಲಿ ಎನ್ ಎಂಬುದು ನಾಮ್ಯಾಂಗ್ ಎಂಬುದನ್ನು ಉಲ್ಲೇಖಿಸುತ್ತದೆ. ಇದು ದಕ್ಷಿಣ ಕೊರಿಯಾದ ಹ್ಯುಂಡೈ ಆರ್ ಆಂಡ್ ಡಿ ಸೆಂಟರ್ ಹೆಸರಾಗಿದೆ.

ಹ್ಯುಂಡೈ ಅತ್ಯಾಕರ್ಷಕ ಸ್ಪೋರ್ಟ್ಸ್ ಕಾರು ಲಾಂಚ್

ಒಟ್ಟಿನಲ್ಲಿ ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳನ್ನು ಸಂಕೇತ ಮಾಡಲು ಹ್ಯುಂಡೈ ಎನ್ ಬಳಕೆಯಾಗಲಿದೆ. ಇದು ಗ್ರಾಹಕರಿಗೆ ನೂತನ ಅನುಭವ ನೀಡಲಿದೆ.

Story first published: Thursday, December 12, 2013, 7:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark