ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

Written By:

ಜಪಾನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಸದ್ಯದಲ್ಲೇ ನೂತನ 2015 ಪಿಕಪ್ ಟ್ರಕ್ ಜಾಗತಿಕವಾಗಿ ಅನಾವರಣಗೊಳಿಸಲಿದೆ. ಇದು ಮುಂದಿನ ದಿನಗಳಲ್ಲಿ ಭಾರತಕ್ಕೂ ಪ್ರವೇಶಿಸಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಥಾಯ್ಲೆಂಡ್‌ನಲ್ಲಿ ಜೂನ್ 11ರಂದು ಜಾಗತಿಕ ಎಂಟ್ರಿ ಪಡೆಯಲಿರುವ ನಿಸ್ಸಾನ್ ಪಿಕಪ್ ಟ್ರಕ್ ಪ್ರಚಾರಾರ್ಥವಾಗಿ ಟೀಸರ್ ವೀಡಿಯೋಗಳನ್ನು ಬಿಡುಗಡೆಗೊಳಿಸಲಾಗಿದೆ.

ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

ಪ್ರಮುಖವಾಗಿಯೂ ದಕ್ಷಿಣ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳಲಿರುವ ನಿಸ್ಸಾನ್ ನವಾರ ಟ್ರಕ್ ಥಾಯ್ಲೆಂಡ್, ಇಂಡೋನೇಷ್ಯಾ ಹಾಗೂ ಮಲೇಷ್ಯಾ ರಾಷ್ಟ್ರಗಳಲ್ಲಿ ಟೊಯೊಟಾದ ಹಿಲಕ್ಸ್, ಇಸುಝು ಡಿಮ್ಯಾಕ್ಸ್ ಮತ್ತು ಮಿಟ್ಸುಬಿಸಿ ಟ್ರೈಟಾನ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ನಿಸ್ಸಾನ್ ದೊಡ್ಡ ಎಸ್‌ಯುವಿ ಪರಿಚಯಿಸುವ ಬಗ್ಗೆ ಸುದ್ದಿಯಾಗಿತ್ತು. ಪ್ರಸ್ತುತ ನವಾರ ಪಿಕಪ್ ಟ್ರಕ್ ಸಹ ಎಸ್‌ಯುವಿ ವಿನ್ಯಾಸಕ್ಕೆ ಹೋಲುತ್ತಿರುವುದು ಹೆಚ್ಚು ಕುತೂಹಲ ಮನೆ ಮಾಡುವಲ್ಲಿ ಕಾರಣವಾಗಿದೆ.

ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

ಹಾಗೊಂದು ವೇಳೆ ಭಾರತಕ್ಕೆ ಪರಿಚಯವಾಗಲಿರುವ ನಿಸ್ಸಾನ್ ವಾಹನ, ಪಿಕಪ್ ಟ್ರಕ್ ಬದಲು ಎಸ್‌ಯುವಿ ಆಗಿ ಪರಿವರ್ತನೆಯಾದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಇದು ಟೊಯೊಟಾ ಫಾರ್ಚ್ಯುನರ್ ರೇಂಜ್‌ನಲ್ಲಿ ಗುರುತಿಸಿಕೊಳ್ಳಲಿದೆ.

ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

ಇನ್ನು ಕಾರಿನೊಳಗೆ ಸಾಂಪ್ರಾದಾಯಿಕ ನಿಸ್ಸಾನ್ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಇದು ಸೆಂಟ್ರಲ್ ಕನ್ಸಾಲ್‌ನಲ್ಲಿ ಮಲ್ಟಿಮೀಡಿಯಾ ಮಾಹಿತಿ ಮನರಂಜನಾ ಪರದೆ ಗಿಟ್ಟಿಸಿಕೊಳ್ಳಲಿದೆ.

ನಿಸ್ಸಾನ್ ನವಾರ ಭಾರತಕ್ಕೂ ಬರಬಹುದೇ?

ಇನ್ನು ನಿಸ್ಸಾನ್ ನವಾರ ಪಿಕಪ್ ಟ್ರಕ್ 2.5 ಲೀಟರ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 190 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ 6 ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

Story first published: Wednesday, June 11, 2014, 8:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark