ತಾವೇನು ಕಮ್ಮಿಯೇನಲ್ಲ; ದಿಲ್ಲಿಯಲ್ಲಿ ಇಸುಝು ಅವತಾರ
ಎಲ್ಲರೂ ಪ್ರತಿಷ್ಠಿತ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳ ಹೊಸ ಮಾದರಿಗಳ ಆಗಮನವನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
2014 ಆಟೋ ಎಕ್ಸ್ ಪೋ ಲೈವ್
ಈ ನಡುವೆ ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಎಂಟ್ರಿ ಕೊಟ್ಟಿರುವ ಜಪಾನ್ ಮೂಲದ ಇಸುಝು ಮೋಟಾರ್ಸ್ ನೂತನ ಬಿಎಸ್-4 ಕ್ರೀಡಾ ಉತ್ಪಾದಕ ವಾಹನವಾದ 'ಎಂಯು-7' ಆವೃತ್ತಿಯನ್ನು ದೇಶಕ್ಕೆ ಪರಿಚಯಿಸಿದೆ. ಇದೇ ಸಂದರ್ಭದಲ್ಲಿ 'ಡಿ ಮ್ಯಾಕ್ಸ್' ಮೊದಲ ಪಿಕಪ್ ಟ್ರಕ್ ಜತೆ ಡಿಮ್ಯಾಕ್ಸ್ ಸಿಂಗಲ್ ಕ್ಯಾಬ್ ಮತ್ತು ರಾಲಿ ಕಾರನ್ನು ಸಹ ಅನಾವರಣಗೊಳಿಸಲಾಗಿದೆ.

ಮೊದಲ ನೋಟದಲ್ಲಿಯೇ ಎಂಯು-7 ಆಕ್ರಮಣಕಾರಿ ವಿನ್ಯಾಸ ಪಡೆದುಕೊಳ್ಳುವಲ್ಲಿ ಯಶ ಸಾಧಿಸಿದೆ. ಮೂರು ಮೀಟರ್ ವೀಲ್ ಬೇಸ್ ಹೊಂದಿರುವ ಎಂಯು-7 ದೇಶದಲ್ಲಿನ ಅತಿ ಉದ್ದದ ಎಸ್‌ಯುವಿ ಎನಿಸಿಕೊಳ್ಳಲಿದೆ.

ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ಇಸುಝು ಎಸ್‌ಯುವಿ ಅತ್ಯಧಿಕ ಸ್ಥಳಾವಕಾಶವನ್ನು ಪಡೆಯಲಿದೆ.

ಇದು 3 ಲೀಟರ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 163 ಪಿಎಸ್ ಪವರ್ (360 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಇನ್ನೊಂದೆಡೆ ಡಿ-ಮ್ಯಾಕ್ಸ್ ದೇಶದ ಮೊದಲ ಮಲ್ಟಿ ಯುಟಿಲಿಟಿ ಪಿಕಪ್ ಟ್ರಕ್ ಆಗಿರಲಿದೆ. ಇದು ಹೆಚ್ಚು ಗುಣಮಟ್ಟ ಹಾಗೂ ಆರಾಮದಾಯಕ ಚಾಲನೆಯನ್ನು ಪ್ರದಾನ ಮಾಡಲಿದೆ.

ಸಂಸ್ಥೆಯ ಪ್ರಕಾರ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿಯೂ ಡಿಮ್ಯಾಕ್ಸ್ ಯಶ ಕಾಣಲಿದೆ. ಪ್ರಸ್ತುತ ಪಿಕಪ್ ಟ್ರಕ್ ಜಾಗತಿಕವಾಗಿ ಮಾರಾಟವಾಗಲಿದೆ.

ಪ್ರಸ್ತುತ ಹಿಂದೂಸ್ತಾನ್ ಮೋಟಾರ್ಸ್ ಜತೆ ಪಾಲುದಾರಿಕೆ ಹೊಂದಿರುವ ಇಸುಝು, ಚೆನ್ನೈನ ತಿರುವಲ್ಲೂರು ಘಟಕದಲ್ಲಿ ಎಂಯು-7 ಮತ್ತು ಡಿಮ್ಯಾಕ್ಸ್ ಆವೃತ್ತಿಗಳನ್ನು ಉತ್ಪಾದಿಸಲಿದೆ.


Click it and Unblock the Notifications








