ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

Written By:

ತನ್ನ ಸಹೋದರಿ ಲ್ಯಾಂಡ್ ರೋವರ್ ಇರುವಾಗ ಜಾಗ್ವಾರ್‌‌ಗೆ ಯಾವತ್ತೂ ಕ್ರೀಡಾ ಬಳಕೆಯ ವಾಹನ ಉತ್ಪಾದಿಸುವ ಬಗೆಗಿನ ಚಿಂತೆಯೇ ಬರಲಿಲ್ಲ. ಆದರೆ ಬದಲಾದ ವಾಹನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಜಾಗ್ವಾರ್ ಸಹ ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರೊಂದನ್ನು ಅಭಿವೃದ್ಧಿಪಡಿಸಿದೆ.

2014 ಆಟೋ ಎಕ್ಸ್ ಪೋ

ನಾವು ಮಾತನಾಡುತ್ತಿರುವುದು ಜಾಗ್ವಾರ್ ಸಿ-ಎಕ್ಸ್17 ಕ್ರಾಸೋವರ್ ಕಾನ್ಸೆಪ್ಟ್ ಕಾರಿನ ಬಗ್ಗೆ. ಈ ಹಿಂದೆ 2013 ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಮೊದಲ ಬಾರಿಗೆ ಪರದೆ ಬಿಚ್ಚಿಕೊಂಡಿದ್ದ ಜಾಗ್ವಾರ್ ಸಿ-ಎಕ್ಸ್17, ದೆಹಲಿಯಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲೂ ಮಿನುಗಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಇಲ್ಲಿ ಕಂಡುಬಂದಿರುವ ವಿಶೇಷ ಅಂಶವೆಂದರೆ ಜಾಗ್ವಾರ್ ಸಿ-ಎಕ್ಸ್17 ಕ್ರಾಸೋವರ್ ಕಾರು ಚಿನ್ನದ ಬಣ್ಣದ ಲೇಪನದೊಂದಿಗೆ ಅತ್ಯಾಕರ್ಷಕವಾಗಿ ಗೋಚರಿಸುತ್ತಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಜಾಗ್ವಾರ್ ಪಾಲಿಗೆ ಸಿಎಕ್ಸ್17 ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದ ಮಾದರಿಯೆನಿಸಲಿದೆ. ಜಾಗ್ವಾರ್ ಭವಿಷ್ಯದ ಕಾರುಗಳ ವಿನ್ಯಾಸದಡಿಯಲ್ಲಿ ಇದನ್ನು ರಚಿಸಲಾಗಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಅಲ್ಯೂಮಿನಿಯಂ ಪರಿಕರ ಬಳಸುವ ಮೂಲಕ ಕಾರಿನ ಭಾರ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ಇದರ ನಿರ್ಮಾಣ ವರ್ಷನ್ 2015 ಅಥವಾ 2016ರಲ್ಲಿ ಆಗಮನವಾಗುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೂ ಇದರ ಪರಿಚಯವಾಗಲಿದೆ. ಇದರಲ್ಲಿ ಕಂಪನಿಯು ಹೊಸತಾದ ಫೋರ್ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಳವಡಿಸಲಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಹಾಗಿದ್ದರೂ ಇಂಧನ ಕ್ಷಮತೆ ಹಾಗೂ ನಿರ್ವಹಣೆ ವಿಚಾರದಲ್ಲಿ ಯಾವುದೇ ರಾಜಿಗೂ ಕಂಪನಿ ತಯಾರಾಗಿಲ್ಲ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಈ ಐದು ಸೀಟುಗಳ ಕ್ರಾಸೋವರ್ ಕಾನ್ಸೆಪ್ಟ್ ಕಾರಿನಲ್ಲಿ ಮಲ್ಟಿ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯಿದ್ದು, ಇದನ್ನು ವೈಫೈ ಜತೆ ಸಂಪರ್ಕಿಸುವ ಮೂಲಕ ಪ್ರಯಾಣಿಕರಿಗೆ ಹೊರ ಜಗತ್ತಿನ ಜತೆಯೂ ಸಂಪರ್ಕ ಸಾಧಿಸಬಹುದಾಗಿದೆ. ಇದರಲ್ಲಿ ಆಲ್ಟ್ರಾ ಪ್ರೀಮಿಯಂ ಮೆರಿಡಿಯನ್ ಆಡಿಯೋ ಸಿಸ್ಟಂ ಸಹ ಪ್ರದರ್ಶಿಸಲಾಗಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಇದರಲ್ಲಿರುವ ರಿಯರ್ ಎಕ್ಸಿಟ್ ಡಿಟೆಕ್ಷನ್ ಫೀಚರ್, ಬಾಗಿಲು ತೆರೆಯುವ ವೇಳೆ ಬ್ಲೈಂಡ್ ಸ್ಪಾಟ್‌ಗಳಿದ್ದಲ್ಲಿ ಮಾಹಿತಿ ಒದಗಿಸಲಿದೆ.

ದೆಹಲಿಯಲ್ಲಿ ಮಿನುಗಿದ ಜಾಗ್ವಾರ್ ಪ್ರಪ್ರಥಮ ಎಸ್‌ಯುವಿ

ಒಟ್ಟಾರೆಯಾಗಿ ಜಾಗ್ವಾರ್ ಸಿ-ಎಕ್ಸ್17 4718 ಎಂಎಂ ಉದ್ದ, 1959 ಎಂಎಂ ಅಗಲ ಮತ್ತು 1649 ಎಂಎಂ ಎತ್ತರ ಹೊಂದಿರಲಿದೆ. ಹಾಗೆಯೇ 2905 ಎಂಎಂ ವೀಲ್ ಬೇಸ್ ಹಾಗೂ 213 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದಿದೆ.

English summary
We are of course talking about the Jaguar C-X17 crossover concept that first broke cover in September 2013 at the Frankfurt Auto Show. Now, for the first time the same crossover concept made its appearance in India during the Auto Expo 2014.
Story first published: Saturday, February 15, 2014, 10:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark