ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

By Nagaraja

ನೀವು ಯೋಗಾಸನ ಪ್ರೇಮಿಯೇ? ದೂರ ಪ್ರಯಾಣದ ವೇಳೆ ಯೋಗಾಸನ ಆಚರಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತೆ ಬೇಡ ಇನ್ನು ಮುಂದೆ ನಿಮ್ಮ ಈ ಸಮಸ್ಯೆಗೂ ಪರಿಹಾರ ದೊರಕಲಿದೆ. ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್, ತನ್ನ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಕ್ವಾಂಟೊ ಕಾರಲ್ಲಿ 'ಯೋಗ ಸೀಟು' ಅವಿಷ್ಕರಿಸಿದೆ.

ಕ್ವಾಂಟೊ ಕೊಳ್ತೀರಾ; ಟೆಸ್ಟ್ ಡ್ರೈವ್ ರಿಪೋರ್ಟ್ ನೋಡಿ

ಒಟ್ಟು 36 ವಿವಿಧ ಆಸನ ವ್ಯವಸ್ಥೆ ಹೊಂದಿರುವ ಮಹೀಂದ್ರ ಕ್ವಾಂಟೊ ಯೋಗ ಸೀಟು ಹೆಚ್ಚು ನಮ್ಯತೆ ಹಾಗೂ ಅನುಕೂಲಕರವಾಗಲಿದೆ. 5 + 2 ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ಮಹೀಂದ್ರ ಕ್ವಾಂಟೊದಲ್ಲಿ ನೂತನ ಯೋಗ ಆಸನದ ಸೌಲಭ್ಯ ಒದಗಿಸಲಾಗಿದೆ.

ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

ಅಂದ ಮಾತ್ರಕ್ಕೆ ಪ್ರಯೋಗಿಕವಾಗಿ ಯೋಗ ಆಸನ ಎಷ್ಟರ ಮಟ್ಟಿಗೆ ತೃಪ್ತಿದಾಯಕವಾಗಲಿದೆಯೇ ಎಂಬುದಂತೂ ತಿಳಿದು ಬಂದಿಲ್ಲ. ಆದರೆ ಪ್ರಯಾಣಿಕರ ಹೊಂದಾಣಿಕೆಗೆ ಹೆಚ್ಚು ಒತ್ತು ಕೊಡಲಾಗಿದೆ.

ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ, ಕ್ವಾಂಟೊ ಯೋಗ ಆಸನವು ನೀವು ನಗರದಲ್ಲಿದ್ದರೂ ಮನೆಯಲ್ಲಿರುವಂತೆಯೇ ಭಾಸವಾಗಲಿದೆ. ಅದು ಹೆದ್ದಾರಿಯೇ ಆಗಿರಬಹುದು ಅಥವಾ ಆಫ್ ರೋಡ್ ಆಗಿರಬಹುದು ನಿಮಗೆ ಆನಂದದಾಯಕ ಪಯಣ ಒದಗಿಸಲಿದೆ.

ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

ಅಲ್ಲದೆ ನಿಮ್ಮ ವಾರಂತ್ಯದ ಪಯಣದಲ್ಲಿ ಹೆಚ್ಚು ಲಗ್ಗೇಜ್‌ಗಳನ್ನು ಹೊತ್ತೊಯ್ಯಬಹುದು. ಯಾಕೆಂದರೆ ಇದರ ಹೊಂದಾಣಿಸಬಹುದಾದ ಸ್ಟೋರೆಜ್ ಸ್ಪೇಸ್ ನಿಮ್ಮ ಪಯಣವನ್ನು ಇನ್ನಷ್ಟು ಸುಲಲಿತಗೊಳಿಸಲಿದೆ.

ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

ಹೊಸತಾದ ಆಸನ ವ್ಯವಸ್ಥೆಯಡಿ ಎರಡನೇ ಸಾಲಿನ ಸೀಟಿನಲ್ಲೂ ಒರಗುವ ವ್ಯವಸ್ಥೆಯಿದ್ದು ಮಧ್ಯದಲ್ಲಿ ಆರ್ಮ್ ರೆಸ್ಟ್ ಕೂಡಾ ಲಗತ್ತಿಸಲಾಗಿದೆ. ಇದು ಪ್ರಯಾಣಿಕರಿಗೆ ಸೀಟು ಹಿಂದಕ್ಕೆ ಹೊಂದಾಣಿಸಬಹುದಾದ ಅವಕಾಶವಿದ್ದು, ಹೆಚ್ಚು ಲೆಗ್ ರೂಂ ಕೂಡಾ ಸಿಗಲಿದೆ.

ಇನ್ನು ಮುಂದೆ ಕಾರಲ್ಲೇ ಯೋಗಾಸನ ಅಭ್ಯಸಿಸಿ!

ಹಗುರ ಭಾರದ 1.5 ಲೀಟರ್ ಎಂಸಿಆರ್100 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಕ್ವಾಂಟೊ ಕಾಂಪಾಕ್ಟ್ ಎಸ್‌ಯುವಿ 100 ಪಿಎಸ್ ಪವರ್ (240 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದು ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಪ್ರತಿ ಲೀಟರ್‌ಗೆ 17.21 ಕೀ.ಮೀ. ಮೈಲೇಜ್ ನೀಡಲಿದೆ.

Most Read Articles

Kannada
English summary
Mahindra & Mahindra Ltd (M&M), India’s leading SUV manufacturer, has launched a flexible seating in Quanto, its 5+2 seater compact SUV. Christened as ‘Yoga seats’, the new seats allow 36 different seating combinations that offer flexibility and convenience.
Story first published: Friday, January 24, 2014, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X