ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

Written By:

ದೇಶದ ಅತಿ ದೊಡ್ಡ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯಿಂದ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯಾದ ಎರಡು ತಿಂಗಳೊಳಗೆ 35,000 ಬುಕ್ಕಿಂಗ್ ಸಂಖ್ಯೆಯನ್ನು ದಾಟುವ ಮೂಲಕ ಗಮನ ಸೆಳೆದಿದೆ.

ಮಾರುತಿ ಸೆಲೆರಿಯೊ ಏನಿದೆ ವೈಶಿಷ್ಟ್ಯ ?

ಮಾರುತಿ ಸೆಲೆರಿಯೊ ಆಟೋಮ್ಯಾಟಿಕ್ ವೆರಿಯಂಟ್‌ಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇದರಿಂದಾಗಿ ಮುಂಗಡವಾಗಿ ಬುಕ್ಕಿಂಗ್ ಮಾಡಿದ ಗ್ರಾಹಕರು ತಮ್ಮ ಕಾರಿನ ಆಗಮನಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ವರದಿಗಳ ಪ್ರಕಾರ ಒಟ್ಟು ಬುಕ್ಕಿಂಗ್‌ನಲ್ಲಿ ಶೇಕಡಾ 49ರಷ್ಟು ಆಟೋಮ್ಯಾಟಿಕ್ ವೆರಿಯಂಟ್‌ಗಳಿಗೆ ಬೇಡಿಕೆ ಕಂಡುಬಂದಿದೆ.

To Follow DriveSpark On Facebook, Click The Like Button
ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ಇನ್ನೊಂದು ವರದಿಗಳ ಪ್ರಕಾರ ಪುರುಷರಿಗಿಂತ ಸ್ತ್ರೀ ಚಾಲಕಿಯರು ಸೆಲೆರಿಯೊ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಇದು ಸುಲಭ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ಸಂಸ್ಥೆಯ ಪ್ರಕಾರ ಸೆಲೆರಿಯೊ ಆಟೋಮ್ಯಾಟಿಕ್ ವೆರಿಯಂಟ್ ಸಹ ಪ್ರತಿ ಲೀಟರ್‌ಗೆ ಪ್ರಭಾವತ್ಮಾಕ 23.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ಎ-ಸ್ಟಾರ್ ಹಾಗೂ ಎಸ್ಟಿಲೊ ಬದಲಿ ಕಾರಾಗಿ ರಸ್ತೆ ಪ್ರವೇಶಿಸಿರುವ ಸೆಲೆರಿಯೊ ಪ್ರಾರಂಭಿಕ ದರ 3.90 ಲಕ್ಷ ರು.ಗಳಾಗಿವೆ.

ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ನೂತನ ಮಾರುತಿ ಸೆಲೆರಿಯೊ ಒಟ್ಟು ಆರು ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ. ಈ ಪೈಕಿ ನಾಲ್ಕು ಆವೃತ್ತಿಗಳು ಮ್ಯಾನುವಲ್ ಹಾಗೂ ಉಳಿದರೆಡು ಆಟೋಮ್ಯಾಟಿಕ್ (ಎಎಂಟಿ) ಇಝಡ್ ಡ್ರೈವ್ ವ್ಯವಸ್ಥೆ ಹೊಂದಿರಲಿದೆ.

ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ಪ್ರಸ್ತುತ ಕಾರು 1.0 ಲೀಟರ್, 3 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗರಿಷ್ಠ 67 ಬಿಎಚ್‌ಪಿ ಉತ್ಪಾದಿಸುವ (90 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮುಖಾಂತರ ಚೈತನ್ಯ ರವಾನೆಯಾಗಲಿದೆ.

ಸೆಲೆರಿಯೊ ಶೈನಿಂಗ್; 2 ತಿಂಗಳಲ್ಲೇ 35,000 ಬುಕ್ಕಿಂಗ್

ಸೆಲೆರಿಯೊದ ಎಲ್‌ಎಕ್ಸ್‌ಐ ವೆರಿಯಂಟ್ ಪವರ್ ಸ್ಟೀರಿಂಗ್ ಸೌಲಭ್ಯ ಪಡೆದಲಿದೆ. ಅಷ್ಟೇ ಅಲ್ಲದೆ ಎಸಿ ಸೌಲಭ್ಯವೂ ಇರಲಿದೆ. ಇನ್ನೊಂದೆಡೆ ವಿಎಕ್ಸ್‌ಐ ಪವರ್ ವಿಂಡೋ, ಫ್ರಂಟ್ ಗ್ರಿಲ್, ಕ್ರೋಮ್ ಲೈನಿಂಗ್ ಜತೆಗೆ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಪಡೆಯಲಿದೆ.

English summary
In two months, Celerio bookings have crossed 35,100 units, of which 49% were for the automatic transmission.
Story first published: Saturday, April 12, 2014, 8:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark