ವಾರೆವ್ಹಾ...ಬಂದೇ ಬಿಡ್ತು ಮಾರುತಿ ವ್ಯಾಗನಾರ್ ಸ್ಟಿಂಗ್ರೇ!

ವಾಹನ ಪ್ರಿಯರು ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಮಾರುತಿ ಸುಜುಕಿ ವ್ಯಾಗನಾರ್ ಸ್ಟಿಂಗ್ರೇ ಆವೃತ್ತಿ ಲಾಂಚ್ ಆಗಿದೆ. ಇದರ ಎಕ್ಸ್‌ ಶೋ ರೂಂ ದರ 4.09 ಲಕ್ಷ ರು.ಗಳಿಂದ ಹಿಡಿದು 4.67 ಲಕ್ಷ ರು.ಗಳ ವರೆಗಿದೆ.

ದರ ಹಾಗೂ ವೆರಿಯಂಟ್ (ದೆಹಲಿ ಎಕ್ಸ್‌ ಶೋ ರೂಂ)

* ವ್ಯಾಗನಾರ್ ಸ್ಟಿಂಗ್ರೇ ಎಲ್‌ಎಕ್ಸ್‌ಐ: 4.09 ಲಕ್ಷ ರು.
* ವ್ಯಾಗನಾರ್ ಸ್ಟಿಂಗ್ರೇ ವಿಎಕ್ಸ್‌ಐ: 4.38 ಲಕ್ಷ ರು.
* ವ್ಯಾಗನಾರ್ ಸ್ಟಿಂಗ್ರೇ ವಿಎಕ್ಸ್‌ಐ (ಆಪ್ಷನ್): 4.67 ಲಕ್ಷ ರು.

ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನಾರ್‌ಗಿಂತ ಹೆಚ್ಚು ಸ್ಮಾಟ್ ಎನಿಸಿಕೊಂಡಿರುವ ಸ್ಟಿಂಗ್ರೇ ದರದಲ್ಲೂ ಸ್ವಲ್ಪ ದುಬಾರಿಯೆನಿಸಿದ್ದು, ಈ ಹ್ಯಾಚ್‌ಬ್ಯಾಕ್ ಕಾರಿಗಾಗಿ ಹೆಚ್ಚುವರಿ ರು. 25,000 ಪಾವತಿಸಬೇಕಾಗಿದೆ.

ಸ್ಮಾರ್ಟ್ ಕಾರು

ಸ್ಮಾರ್ಟ್ ಕಾರು

ಸಾಮಾನ್ಯ ವ್ಯಾಗನಾರ್ ಆವೃತ್ತಿಗಿಂತಲೂ ಭಿನ್ನವಾಗಿ ಸ್ಟಿಂಗ್ರೇಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ರಿಯರ್ ವ್ಯೂ ಮಿರರ್ ಹಾಗೂ ಪ್ರೊಜೆಕ್ಟರ್ ಹೆಡ್ ಲೈಟ್ ಸೌಲಭ್ಯವಿದೆ.

ಇಂಟಿರಿಯರ್

ಇಂಟಿರಿಯರ್

ಕಾರಿನ ಇಂಟಿರಿಯರ್ ಭಾಗಗಳಲ್ಲಿ ನೂತನ ಆಡಿಯೋ ಸಿಸ್ಟಂ ಹಾಗೆಯೇ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಲಭ್ಯವಿರುತ್ತದೆ.

ಟಾಪ್ ಎಂಡ್ ವೆರಿಯಂಟ್

ಟಾಪ್ ಎಂಡ್ ವೆರಿಯಂಟ್

ಇನ್ನು ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ (ಆಪ್ಷನ್) ವೆರಿಯಂಟ್‌ಗಳಲ್ಲಿ ರಿಯರ್ ವೈಪರ್, ರಿಯರ್ ಢಿಫಾಗರ್ ಹಾಗೂ ಫೋರ್ ಪವರ್ ವಿಂಡೋಸ್ ಲಭ್ಯವಿರುತ್ತದೆ. ಹಾಗೆಯೇ ಟಾಪ್ ವೆರಿಯಂಟ್‌ಗಳಲ್ಲಿ ಆಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಸಿಂಗಲ್ ಏರ್ ಬ್ಯಾಗ್ ಲಗತ್ತಿಸುವ ಆಯ್ಕೆ ಕೂಡಾ ಇರುತ್ತದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರಲ್ಲಿ ವ್ಯಾಗನಾರ್‌ಗೆ ಸಮಾನವಾದ 1 ಲೀಟರ್ 3 ಸಿಲಿಂಡರ್ ಕೆ ಸಿರೀಸ್ ಎಂಜಿನ್ ಆಳವಡಿಸಲಾಗಿದೆ. ಇದು 67 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ಪವರ್ ಸಪ್ಲೇ ಆಗಲಿದೆ.

ಯುವಕರ ಫೇವರಿಟ್

ಯುವಕರ ಫೇವರಿಟ್

ಮಡಚಬಹುದಾಗ ಸೀಟ್ ವಿಧಾನದ ನೆರವಿನಿಂದ 180 ಲೀಟರ್ ಬೂಟ್ ಸ್ಪೇಸ್‌ಗಿಂತಲೂ ಹೆಚ್ಚಿನ ಲಗ್ಗೇಜ್‌ಗಳನ್ನು ಹೊತ್ತೊಯ್ಯಬಹುದಾಗಿದೆ. ಕಳೆದ ಒಂದು ವರ್ಷದಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಂಡಿರುವ ವ್ಯಾಗನಾರ್ ಸ್ಟಿಂಗ್ರೇ ಮುಖಾಂತರ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಲ್ಲಿದೆ ಮಾರುತಿ.

ಮೈಲೇಜ್

ಮೈಲೇಜ್

ಭಾರತದ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ಪಡೆದಿರುವ ಮಾರುತಿ ವ್ಯಾಗನಾರ್ ಸ್ಟಿಂಗ್ರೇ ಪ್ರತಿ ಲೀಟರ್‌ಗೆ 20.51 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಡೀಸೆಲ್ ಬರುತ್ತಾ?

ಡೀಸೆಲ್ ಬರುತ್ತಾ?

ಮಾರುತಿ ವ್ಯಾಗನಾರ್ ಡೀಸೆಲ್ ವೆರಿಯಂಟ್ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಿದ್ದರೂ ಮಾರುತಿ ಆಲ್ಟೊ 800 ಡೀಸೆಲ್ ಕಾರು ಪರಿಚಯಿಸಲು ಯೋಜನೆ ಹಾಕಿಕೊಂಡಿರುವ ಮಾರುತಿ ಮುಂದಿನ ದಿನಗಳಲ್ಲಿ ವ್ಯಾಗನಾರ್ ಡೀಸೆಲ್ ಆವೃತ್ತಿ ಪರಿಚಯಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ನೂತನ ಮಾರುತಿ ಸ್ಟಿಂಗ್ರೇ ಐದು ವ್ಯತ್ಯಸ್ತ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ,

1. Midnight Blue,

2. Passion Red,

3. Glistening Grey,

4. Superior White,

5. Silky Silver.

ಅನಿಸಿಕೆ

ಅನಿಸಿಕೆ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Maruti Suzuki Stingray has made it debut. The Stingray which is a redesigned Wagon R will be sold as a separate model, without the Wagon R name attached to it. Price starts at INR 4.09 lakhs (ex-showroom, Delhi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X