ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

By Nagaraja

ಭಾರತೀಯ ಮಾರುಕಟ್ಟೆಗೆ ಕಡಿಮೆ ಬೆಲೆ ಬಾಳುವ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಹಾಗೂ ಬಿ ಕ್ಲಾಸ್ ಪ್ರವೇಶಿಸಿ ಇದೀಗ ಒಂದು ವರ್ಷವಾಗುತ್ತಿದೆ. ಇದರ ಖುಷಿಯಲ್ಲಿರುವ ಜರ್ಮನಿಯ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ವಿಶೇಷ ಸೀಮಿತ ಆವೃತ್ತಿಗಳನ್ನು ಪರಿಚಯಿಸಿದೆ.

'ಎಡಿಷನ್ 1' ಎಂದು ಗುರುತಿಸಿಕೊಳ್ಳಲಿರುವ ಬೆಂಝ್ ಎ ಹಾಗೂ ಬಿ ಕ್ಲಾಸ್ ವಾಹನಗಳು ಸೀಮಿತ 100 ಯುನಿಟ್‌ಗಳಷ್ಟೇ ಮಾರಾಟವಾಗಲಿದೆ. ಅಲ್ಲದೆ ಹಿಂದಿನ ಆವೃತ್ತಿಗಿಂತಲೂ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ. ಬೆಲೆ ಇತ್ಯಾದಿ ಮಹತ್ವಪೂರ್ಣ ಮಾಹಿತಿಗಳಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ

ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

ನೂತನ ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್ ಹಾಗೂ ಬಿ ಕ್ಲಾಸ್ ಮಾದರಿಗಳು ಅನುಕ್ರಮವಾಗಿ 26.17 ಹಾಗೂ 28.75 ಲಕ್ಷ ರು.ಗಳಷ್ಟು (ಮುಂಬೈ ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ.(ಚಿತ್ರದಲ್ಲಿ: ಬೆಂಝ್ ಎ ಕ್ಲಾಸ್)

ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

ಈ ಎರಡು ಮಾದರಿಗಳು ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಇವುಗಳು 2.2 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 107 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. (ಚಿತ್ರದಲ್ಲಿ: ಬೆಂಝ್ ಬಿ ಕ್ಲಾಸ್)

ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

ಅಲ್ಲದೆ 7 ಜಿ ಟ್ರಾನಿಕ್ ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ ಹೊಂದಿರಲಿದೆ. ಹಾಗೆಯೇ ಗರಿಷ್ಠ ಗಂಟೆಗೆ 190 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. (ಚಿತ್ರದಲ್ಲಿ: ಬೆಂಝ್ ಎ ಕ್ಲಾಸ್)

ಎಡಿಷನ್ 1 ಎ ಕ್ಲಾಸ್ ವೈಶಿಷ್ಟ್ಯ

ಎಡಿಷನ್ 1 ಎ ಕ್ಲಾಸ್ ವೈಶಿಷ್ಟ್ಯ

ಪ್ಯಾನೋರಾಮಿಕ್ ಸನ್‌ರೂಫ್, ಹೊಸ ಹಾಗೂ ಟೈಮೊಲೈಟ್ ಗ್ರೇ 17 ಇಂಚು ಅಲಾಯ್, ಕಾರಿನ ಬದಿಯಲ್ಲಿ ಎಡಿಷನ್ 1 ಡಿಕಾಲ್ಸ್, ರಿವರ್ಸ್ ಕ್ಯಾಮೆರಾ ಮತ್ತು ಹಿಂದುಗಡೆ ಪ್ರಯಾಣಿಕರಿಗೂ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟು ಸೌಲಭ್ಯವಿರಲಿದೆ.

ಬಿ ಕ್ಲಾಸ್ ಎಡಿಷನ್ 1

ಬಿ ಕ್ಲಾಸ್ ಎಡಿಷನ್ 1

ಇವೆಲ್ಲ ಸೌಲಭ್ಯಗಳ ಜೊತೆಗೆ ಬಿ ಕ್ಲಾಸ್ ಎಡಿಷನ್ 1 ಮಾದರಿಯು ಹಿಂದುಗಡೆ ಮಾಹಿತಿ ಮನರಂಜನಾ ವ್ಯವಸ್ಥೆಯ ಭಾಗವಾಗಿ 17.8 ಸೆಂಟಿಮೀಟರ್ ಸ್ಕ್ರೀನ್ ಪಡೆಯಲಿದೆ.

ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

ಬೆಂಝ್ ಪ್ರಕಾರ ಸಂಸ್ಥೆಯಿಂದ ಮಾರಾಟವಾಗುತ್ತಿರುವ ಪ್ರತಿ ಐದು ಕಾರುಗಳ ಪೈಕಿ ಒಂದು ಮಾದರಿಯು ಎ ಅಥವಾ ಬಿ ಕ್ಲಾಸ್ ಆಗಿರುತ್ತದೆ. ಇದರಿಂದಲೇ ದೇಶದಲ್ಲಿ ಎ ಹಾಗೂ ಬಿ ಕ್ಲಾಸ್ ಮಾದಿರಗಳು ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. (ಚಿತ್ರದಲ್ಲಿ: ಬೆಂಝ್ ಎ ಕ್ಲಾಸ್)

ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್, ಬಿ ಕ್ಲಾಸ್ ಲಾಂಚ್

ಸದ್ಯ ಲಾಂಚ್ ಕಂಡಿರುವ ಬೆಂಝ್ ಎ ಹಾಗೂ ಕ್ಲಾಸ್ ಮಾದರಿಗಳು ಇನ್ನಷ್ಟೇ ಬಿಡುಗಡೆಯಾಗಲಿರುವ ಆಡಿ ಎ3 ಮಾದರಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ. ಜುಲೈ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಆಡಿ ಎ3, 26 ಲಕ್ಷ ರು.ಗಳ ರೇಂಜ್‌ನಲ್ಲಿ ಮಾರುಕಟ್ಟೆ ತಲುಪಲಿದೆ. (ಚಿತ್ರದಲ್ಲಿ: ಬೆಂಝ್ ಬಿ ಕ್ಲಾಸ್)


Most Read Articles

Kannada
Story first published: Tuesday, June 24, 2014, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X