ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

Written By:

ಭಾರತದಂತಹ ವಿಸ್ತಾರವಾದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಯುಟಿಲಿಟಿ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಗಮನ ಕೇಂದ್ರಿಕರಿಸಿರುವ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಎಸ್‌ಯುವಿ ಹಾಗೂ ಎಂಪಿವಿ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.

ಇದರಿಂದ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಕೂಡಾ ಹೊರತಾಗಿಲ್ಲ. ಹೌದು, ಬೆಂಝ್ ಸದ್ಯದಲ್ಲೇ ಲಗ್ಷುರಿ ವಿ-ಕ್ಲಾಸ್ ಎಂಪಿವಿ ಆವೃತ್ತಿಯೊಂದನ್ನು ಅನಾವರಣಗೊಳಿಸಲಿದೆ. ಹಾಗಿದ್ದರೂ ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆಯನ್ನು ಯಾವಾಗ ಪ್ರವೇಶಿಸಲಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಅತ್ಯುತ್ತಮ ವಿನ್ಯಾಸ ಪಡೆದಿರುವ ಬೆಂಝ್ ವಿ-ಕ್ಲಾಸ್ ಪ್ರಾಯೋಗಿಕವಾಗಿಯೂ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಅಂದ ಹಾಗೆ 1996ನೇ ಇಸವಿಯ ಬಳಿಕ ಮಗದೊಮ್ಮೆ ವಿ-ಕ್ಲಾಸ್ ಎಂಟ್ರಿ ಕೊಡುತ್ತಿದೆ. ಇದು ಕಳೆದ ವರ್ಷ ಹಿಂಪಡೆಯಲಾದ ಆರ್-ಕ್ಲಾಸ್‌ಗೆ ಬದಲಿ ವ್ಯವಸ್ಥೆಯಾಗಿರಲಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಮಾರ್ಚ್ ತಿಂಗಳಲ್ಲಿ ಸಾಗಲಿರುವ ಪ್ರತಿಷ್ಠಿತ ಜಿನೆವಾ ಮೋಟಾರು ಶೋದಲ್ಲಿ ವಿ-ಕ್ಲಾಸ್ ಆವೃತ್ತಿಯನ್ನು ಬೆಂಝ್ ಪ್ರದರ್ಶಿಸಲಿದೆ. ಇದರ ಬೆನ್ನಲ್ಲೇ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಸ್ಪೇನ್‌ನಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ವಿ-ಕ್ಲಾಸ್ ಉತ್ಪಾದನೆಯಾಗಲಿದೆ. ಇನ್ನು ವಿನ್ಯಾಸ ಬಗ್ಗೆ ಮಾತನಾಡುವುದ್ದಲ್ಲಿ ಮೊದಲ ನೋಟಕ್ಕೆ ಮುಂಭಾಗದಿಂದ ಸಾಮಾನ್ಯ ಬೆಂಝ್ ಕಾರು ತರಹನೇ ಗೋಚರಿಸಲಿದೆ. ಯಾಕೆಂದರೆ ಇದರ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಎಸ್-ಕ್ಲಾಸ್‌ನಿಂದ ಆಮದು ಮಾಡಲಾಗಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಇನ್ನುಳಿದಂತೆ ಸಿ-ಕ್ಲಾಸ್‌ನಿಂದಲೂ ಸ್ಪೂರ್ತಿ ಪಡೆದು ರಚಿಸಲಾಗಿದೆ. ಒಟ್ಟಿನಲ್ಲಿ ಎಂಪಿವಿಗೆ ಹೊಂದಿಕೆಯಾಗುವಂತೆಯೇ ಡಿಸೈನ್ ರೂಪಿಸಲಾಗಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಅಂದ ಹಾಗೆ ವಿ-ಕ್ಲಾಸ್ ಮತ್ತು ವಿ-ಕ್ಲಾಸ್ ಅವಂತ್‌ಗಾರ್ಡ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಎಕ್ಸ್‌ಟೀರಿಯರ್ ಪ್ಯಾಕೇಜ್ ಮತ್ತು ಇಂಟಿರಿಯರ್ ಡಿಸೈನ್ ಪ್ಯಾಕೇಜ್ ದೊರಕಲಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಇದು 2+2+2 ಹಾಗೂ 2+3+3 ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಅಷ್ಟೇ ಅಲ್ಲ ಅಂತಿಮ ಸಾಲಿನ ಸೀಟನ್ನು ಮಡಚುವ ಮೂಲಕ ಹಾಯಾಗಿ ಮಲಗುವ ವ್ಯವಸ್ಥೆ ಕೂಡಾ ಒದಗಿಸಲಾಗಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಗ್ರಾಹಕರು ತಾವು ಬಯಸಿದ ಹಾಗೆ ಕಸ್ಟಮೈಸ್ಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಮನರಂಜನೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಝ್‌ನಿಂದ ಬರಲಿದೆ ಐಷಾರಾಮಿ ಎಂಪಿವಿ ಕಾರು

ಅಂತಿಮವಾಗಿ ಬೆಂಝ್ ವಿ-ಕ್ಲಾಸ್ 2.1 ಲೀಟರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ಆಗಮನವಾಗಲಿದೆ. ಹಾಗೆಯೇ 7ಜಿ-ಟ್ರಾನಿಕ್ ಪ್ಲಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

English summary
Mercedes-Benz V-Class has been revealed, a beautiful looking MPV that combines driving pleasure and features of a Merc passenger car and the comfort and practicality only an MPV can provide.
Story first published: Saturday, February 1, 2014, 8:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark