ಜಸ್ಟ್ 34.65 ಲಕ್ಷ ರು.ಗಳಿಗೆ ಮಿನಿ ಕೂಪರ್ ಎಸ್ ಬಿಡುಗಡೆ

By Nagaraja

ಬ್ರಿಟನ್‌ನ ಐಷಾರಾಮಿ ಹಾಗೂ ಕ್ಲಾಸಿಕ್ ಕಾರು ತಯಾರಿಕ ಸಂಸ್ಥೆಯಾಗಿರುವ ಮಿನಿ, ಭಾರತೀಯ ವಾಹನ ಮಾರುಕಟ್ಟೆಗೆ ಮಗದೊಂದು ಐಷಾರಾಮಿ ಕಾರನ್ನು ಪರಿಚಯಿಸಿದೆ. ಅದುವೇ ಮಿನಿ ಕೂಪರ್ ಎಸ್.

ಇದರ ಬೆಲೆ ಎಷ್ಟು ಗೊತ್ತೇ?
ಬರೋಬ್ಬರಿ 34.65 ಲಕ್ಷ ರುಪಾಯಿಗಳು (ಎಕ್ಸ್ ಶೋ ರೂಂ ಬೆಲೆ).

ಇದರಿಂದಲೇ ಆಡಂಬರ ಕಾರು ಇಷ್ಟಪಡುವವರಿಗೆ ಮಾತ್ರ ಈ ಕಾರು ಮೀಸಲು ಎಂಬುದು ಸ್ಪಷ್ಟವಾಗುತ್ತಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಇದು ಭಾರತ ಮಾರುಕಟ್ಟೆಯನ್ನು ತಲುಪುತ್ತಿದೆ. ಇದರಿಂದಾಗಿ ಮಿನಿ ಕೂಪರ್ ಎಸ್ ದುಬಾರಿಯೆನಿಸಿಕೊಳ್ಳಲು ಕಾರಣವಾಗಿದೆ.

ಮಿನಿ ಕೂಪರ್ ಎಸ್ ಐಷಾರಾಮಿ ಹ್ಯಾಚ್ ಬ್ಯಾಕ್ ಕಾರು ಭಾರತದಲ್ಲಿ ಬಿಡುಗಡೆ

ಕಳೆದ ವರ್ಷವೇ ಮಿನಿ ಕೂಪರ್ ಡಿ ಭಾರತ ಮಾರುಕಟ್ಟೆಯನ್ನು ತಲುಪಿತ್ತು. ಐದು ಹಾಗೂ ಮೂರು ಬಾಗಿಲುಗಳ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರು ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇದರ ಮುಂದುವರಿದ ಭಾಗವೆಂಬಂತೆ ಮಿನಿ ಕೂಪರ್ ಎಸ್ ಮೂರು ಬಾಗಿಲುಗಳ ಪೆಟ್ರೋಲ್ ಕ್ರೀಡಾ ಆವೃತ್ತಿಯ ಪ್ರವೇಶವಾಗಿದೆ.

ಮುಂಭಾಗ

ಮುಂಭಾಗ

ಎಲ್ಲ ಹೊಸತನದ ಮಿನಿ ಕೂಪರ್ ಎಸ್ ಕಾರಿನ ಮುಂಭಾಗದಲ್ಲಿ ಅಂಡಾಕಾರದ ಗ್ರಿಲ್ ಕೊಡಲಾಗಿದೆ. ಇನ್ನು ಪ್ರೊಜೆಕ್ಟರ್ ಹೆಡ್ ಲೈಟ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಕಾರಿಗೆ ಕ್ರೀಡಾತ್ಮಕ ನೋಟ ಪ್ರದಾನ ಮಾಡುತ್ತಿದೆ. ಅಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಕ್ರೋಮ್ ಸ್ಪರ್ಶವನ್ನು ನೋಡಬಹುದಾಗಿದ್ದು, ಮುಂಭಾಗದಲ್ಲಿ 'ಎಸ್' ಲಾಂಛನ ಕೂಡಾ ಪ್ರತಿಬಿಂಬಿಸಲಿದೆ.

ಬದಿಯ ನೋಟ

ಬದಿಯ ನೋಟ

ಬದಿಯಿಂದ ನೋಡಿದಾಗ ತನ್ನ ಹಿಂದಿನ ಮಾದರಿಗೆ ಮಿನಿ ಕೂಪರ್ ಎಸ್ ಸಾಮತ್ಯೆಯನ್ನು ಪಡೆದುಕೊಂಡಿದೆ. ಇಲ್ಲಿ ಕಾರಿನ ಬಾಗಿಲಿನಲ್ಲಿ ಕ್ರೋಮ್ ಹ್ಯಾಂಡಲ್, ಇಂಧನ ತುಂಬಿಸುವ ಟೋಪಿ ಜೊತೆಗೆ ಡ್ಯುಯಲ್ ಟೋನ್ ಬಣ್ಣವನ್ನು ಅನುಭವಿಸಬಹುದಾಗಿದೆ.

ಹಿಂಬದಿ ನೋಟ

ಹಿಂಬದಿ ನೋಟ

ಕಾರಿನ ಹಿಂಬದಿಯಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಅನುಗುಣವಾಗಿ ಎರಡು ಹೊಗೆ ರಂಧ್ರಗಳನ್ನು ಇರಲಿದೆ. ಇನ್ನು ಸಾಂಪಾದ್ರಾಯಿಕ ಶೈಲಿಯೊಂದಿಗೆ ವಿಶಿಷ್ಟ ಮಿನಿ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ.

ಅಲಾಯ್ ವೀಲ್ಸ್

ಅಲಾಯ್ ವೀಲ್ಸ್

16 ಇಂಚುಗಳ ಕ್ರೀಡಾತ್ಮಕ ಶೈಲಿಯ ಅಲಾಯ್ ವೀಲ್ ಗಳನ್ನು ಮಿನಿ ಕೂಪರ್ ಎಸ್ ಪಡೆದುಕೊಂಡಿದೆ. ಇನ್ನು ಮಿನಿ ಕೂಪರ್ ಎಸ್ ಫ್ರಂಟ್ ವೀಲ್ ಡ್ರೈವ್‌ನಲ್ಲಿ ಚಲಿಸಲಿದೆ.

ಡ್ಯಾಶ್ ಬೋರ್ಡ್

ಡ್ಯಾಶ್ ಬೋರ್ಡ್

ಎಲ್ಲ ಕಪ್ಪು ವರ್ಣದಿಂದ ಕೂಡಿರುವ ಡ್ಯಾಶ್ ಬೋರ್ಡ್ ಅನ್ನು ಮಿನಿ ಕೂಪರ್ ಎಸ್ ಪಡೆದುಕೊಂಡಿದೆ. ಇಲ್ಲಿ ಕಾರ್ಬನ್ ಫೈಬರ್ ಬಳಕೆಯು ಕಾರಿನ ಒಟ್ಟಾರೆ ಭಾರವನ್ನು ಕಡಿತಗೊಳಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ. ಅಂತೆಯೇ ಒಳಮೈಯಲ್ಲಿನ ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲೂ ಕ್ರೋಮ್ ಸ್ಪರ್ಶ ಕಂಡುಬರಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಮಿನಿ ಕೂಪರ್ ಎಸ್ ಐಷಾರಾಮಿ ಹ್ಯಾಚ್ ಬ್ಯಾಕ್ ಕಾರು, ಫೋರ್ ಸಿಲಿಂಡರ್ 2.0 ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಇದು 300 ತಿರುಗುಬಲದಲ್ಲಿ 189 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಭಾರತದಲ್ಲಿ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡಾ ಇರಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಮೊದಲ ನೋಟದಲ್ಲೇ ದೇಶದಲ್ಲಿ ಮಿನಿ ಕೂಪರ್ ಎಸ್ ಬೆಲೆ ದುಬಾರಿಯಾದಿತೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ಐಕಾನಿಕ್ ಕ್ಲಾಸಿಕ್ ಕಾರುಗಳಲ್ಲಿ ಒಂದಾಗಿರುವ ಮೂರು ಬಾಗಿಲುಗಳ ಮಿನಿ ಕೂಪರ್ ಎಸ್ ಭಾರತದಲ್ಲಿ 34.65 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ...

Most Read Articles

Kannada
English summary
Mini Cooper S has been launched in India for a price of INR 34,65,000 ex-showroom, India. 
Story first published: Monday, March 16, 2015, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X