ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

Written By:

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಟಾಟಾ ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ ತನ್ನ ನಿಕಟ ಪ್ರತಿಸ್ಪರ್ಧಿಗಳಿಗಿಂತ ಹೇಗೆ ಭಿನ್ನವಾಗಿದೆ? ಚಿಂತೆ ಬೇಡ ಈ ಬಗ್ಗೆ ಟಾಟಾ ನ್ಯಾನೋ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಟಾಟಾ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಕಾರು ಭರ್ಜರಿ ಲಾಂಚ್

ಪವರ್ ಸ್ಟೀರಿಂಗ್‌ ನ್ಯಾನೋ ಕಾರನ್ನು ಟ್ವಿಸ್ಟ್ ಎಂದು ಹೆಸರಡಿಲಾಗಿತ್ತು. ಇದು ಟಾಪ್ ಎಂಡ್ ಎಕ್ಸ್‌ಟಿ ವೆರಿಯಂಟ್‌ನಲ್ಲಿ ಮಾತ್ರು ಆಗಮನವಾಗಿತ್ತು. ಪ್ರಸ್ತುತ ಕಾರನ್ನು ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಎಂಟ್ರಿ ಲೆವೆಲ್ ಮಾರುತಿ ಆಲ್ಟೊ 800 ಹಾಗೂ ಹ್ಯುಂಡೈ ಇಯಾನ್ ಜತೆ ಹೋಲಿಸಲಾಗಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಕಂಪನಿಯ ಪ್ರಕಾರ ಹೊಸತಾದ ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ ವೆರಿಯಂಟ್ ಪ್ರತಿ ಲೀಟರ್‌ಗೆ 25.35 ಕೀ.ಮೀ. ಮೈಲೇಜ್ ನೀಡಲಿದೆ. ಅದೇ ಹೊತ್ತಿಗೆ ಆಲ್ಟೊ 800 ವಿಎಕ್ಸ್‌ಐ ಮತ್ತು ಎಲ್‌ಎಕ್ಸ್‌ಐ ವೆರಿಯಂಟ್‌ಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 22.74 ಕೀ.ಮೀ. ಮತ್ತು 22.74 ಕೀ.ಮೀ. ಮೈಲೇಜ್ ನೀಡಲಷ್ಟೇ ಶಕ್ತವಾಗಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಇನ್ನು ನ್ಯಾನೋ ನಾಲ್ಕು ವರ್ಷ ಸೇರಿದಂತೆ 60,000 ಕೀ.ಮೀ. ವಾರಂಟಿಯೊಂದಿಗೆ ಆಗಮನವಾಗಿದ್ದರೆ ಆಲ್ಟೊಗೆ 2 ವರ್ಷ ಅಥವಾ 40,000 ಕೀ.ಮೀ. ವರೆಗೆ ಮಾತ್ರ ವಾರಂಟಿ ಸೌಲಭ್ಯವಿರುತ್ತದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಇಲ್ಲಿ ನ್ಯಾನೋ ಟರ್ನಿಂಗ್ ರೇಡಿಯಸ್ ಬಗ್ಗೆಯೂ ವಿಶೇಷವಾಗಿ ಉಲ್ಲೇಖಿಸಲಾಗಿದೆ. ನ್ಯಾನೋ 4.0 ಮೀಟರ್ ಟರ್ನಿಂಗ್ ರೇಡಿಂಸ್ ಹೊಂದಿದ್ದರೆ ಆಲ್ಟೊ 4.6 ಮೀಟರನ್ನು ಹೊಂದಿದೆ. ಅದೇ ರೀತಿ ಗ್ರೌಂಡ್ ಕ್ಲಿಯರನ್ಸ್‌ನಲ್ಲೂ ಆಲ್ಟೊಗಿಂತ (160ಎಂಎಂ) ನ್ಯಾನೋ (180 ಎಂಎಂ) ಮುನ್ನಡೆ ಕಾಯ್ದುಕೊಂಡಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಇನ್ನು ಫಾಗ್ ಲ್ಯಾಂಪ್, ಸಹ ಚಾಲಕ ಬದಿಯ ರಿಯರ್ ವ್ಯೂ ಮಿರರ್, ಡಿಸ್ಟಾನ್ಸ್ ಟು ಫ್ಯೂಯಲ್ ಟ್ಯಾಂಕ್ ಎಮ್ಟಿ, ಸರಾಸರಿ ಇಂಧನ ಎಕಾನಮಿ ಡಿಸ್‌ಪ್ಲೇ, ಡಿಜಿಟಲ್ ಕ್ಲಾಸ್ ಮತ್ತು ರಿಮೋಟ್ ಕೀಲೆಸ್ ವಿಚಾರದಲ್ಲಿ ಆಲ್ಟೊಕ್ಕಿಂತ ಹೆಚ್ಚಿನ ಸೌಲಭ್ಯ ಪಡೆಯುವಲ್ಲಿ ನ್ಯಾನೋ ಯಶಸ್ವಿಯಾಗಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಇನ್ನೊಂದೆಡೆ ಹ್ಯುಂಡೈ ಇಯಾನ್ ಜತೆಗೂ ಹೋಲಿಕೆ ಮಾಡಲಾಗಿದ್ದು, ನ್ಯಾನೋ ಟ್ವಿಸ್ಟ್ ಪ್ರತಿ ಲೀಟರ್‌ಗೆ 25.35 ಕೀ.ಮೀ. ಮೈಲೇಜ್ ಹೊಂದಿದ್ದರೆ ಇಯಾನ್ ಇರಾ ಪ್ಲಸ್ ಪ್ರತಿ ಲೀಟರ್‌ಗೆ 21.1 ಕೀ.ಮೀ.ಗಳಷ್ಟೇ ಮೈಲೇಜ್ ಹೊಂದಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಇನ್ನು ವಾರಂಟಿ ವಿಚಾರದಲ್ಲೂ ಇಯಾನ್ ಹಿಮ್ಮೆಟ್ಟಿಸುವಲ್ಲಿ ನ್ಯಾನೋ ಯಶಸ್ಸನ್ನು ಕಂಡಿದೆ. ಹಾಗೆಯೇ ಗರಿಷ್ಠ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ನ್ಯಾನೋ ಯಶಸ್ಸನ್ನು ಕಂಡಿದೆ.

ಆಲ್ಟೊ, ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೇಗೆ ಭಿನ್ನ?

ಈ ಎಲ್ಲದರ ಮುಖಾಂತರ ಆಲ್ಟೊ ಹಾಗೂ ಇಯಾನ್‌ಗಿಂತ ನ್ಯಾನೋ ಟ್ವಿಸ್ಟ್ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಟಾಟಾ ನಿರೂಪಿಸಿದೆ.

Story first published: Thursday, January 16, 2014, 7:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark