ಬೆಂಗಳೂರು ಪ್ರವೇಶಿಸಿದ ಹೊಸ ತಲೆಮಾರಿನ ಸ್ಕಾರ್ಪಿಯೊ; ಬೆಲೆ ಎಷ್ಟು?

By Nagaraja

ಕಳೆದ ದಿನ ರಾಷ್ಟ್ರೀಯ ಬಿಡುಗಡೆ ಕಂಡಿದ್ದ ಬಹುನಿರೀಕ್ಷಿತ ಹೊಸ ತಲೆಮಾರಿನ ಸ್ಕಾರ್ಪಿಯೊ ಇಂದು (2014, ಸೆಪ್ಟೆಂಬರ್ 26, ಶುಕ್ರವಾರ) ಸ್ಥಳೀಯ ಲಾಂಚ್ ಅಂಗವಾಗಿ ಬೆಂಗಳೂರು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ದರ 8.31 ಲಕ್ಷ ರು. (ಎಸ್2 ವೆರಿಯಂಟ್)

ಎಲ್ಲ ಹೊಸತನದ ತಲಹದಿಯಲ್ಲಿ ನಿರ್ಮಾಣವಾಗಿರುವ ಹೊಸ ಸ್ಕಾರ್ಪಿಯೊ ಸಮಕಾಲೀನ, ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಐಷಾರಾಮಿ ಬ್ಲೂ-ಗ್ರೇ ಒಳಮೈ ಮತ್ತು ಮುಂದುವರಿದ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಬೆಂಗಳೂರು ಪ್ರವೇಶಿಸಿದ ಹೊಸ ತಲೆಮಾರಿನ ಸ್ಕಾರ್ಪಿಯೊ

ನ್ಯೂ ಜನರೇಷನ್ ಸ್ಕಾರ್ಪಿಯೊ ಎಂಹಾಕ್ (mHawk) ಎಂಜಿನ್‌ನಿಂದ (120 ಪಿಎಸ್ ಪವರ್, 280 ಎನ್ಎಂ ಟಾರ್ಕ್) ನಿಯಂತ್ರಿಸಲ್ಪಡುತ್ತದೆ. ಇದು ಎಲ್ಲ ರೀತಿಯ ಭೂತಲದಲ್ಲೂ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಬೆಂಗಳೂರು ಪ್ರವೇಶಿಸಿದ ಹೊಸ ತಲೆಮಾರಿನ ಸ್ಕಾರ್ಪಿಯೊ

ಇನ್ನು ದಣಿವು ರಹಿತ ಗೇರ್ ಶಿಫ್ಟ್‌ಗಾಗಿ ನ್ಯೂ ಜನರೇಷನ್ ಟ್ರಾನ್ಸ್‌ಮಿಷನ್ ಆಳವಡಿಸಲಾಗಿದೆ. ಇವೆಲ್ಲದರ ಜೊತೆಗೆ ನ್ಯೂ ಜನರೇಷನ್‌ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ 2014 ಸ್ಕಾರ್ಪಿಯೊ ಹೊಸತಾದ ಕುಷನ್ ಸಸ್ಪೆಷನ್ ತಂತ್ರಜ್ಞಾನ, ಆ್ಯಂಟಿ-ರೋಲ್ ತಂತ್ರಜ್ಞಾನ ಪಡೆದುಕೊಂಡಿದ್ದು, ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಬೆಂಗಳೂರು ಪ್ರವೇಶಿಸಿದ ಹೊಸ ತಲೆಮಾರಿನ ಸ್ಕಾರ್ಪಿಯೊ

ಆಕ್ರಮಣಕಾರಿ ಹೊರಮೈ ಮತ್ತು ಪ್ರೀಮಿಯಂ ಇಂಟಿರಿಯರ್ ಹೊಸ ತಲೆಮಾರಿನ ಸ್ಕಾರ್ಪಿಯೊದ ಹೊಸ ಆಯಾಮಕ್ಕೆ ಕಾರಣವಾಗಿದೆ. ದಶಕಗಳ ಹಿಂದೆ ಅಂದರೆ 2002ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಸ್ಕಾರ್ಪಿಯೊ ಇದೀಗ ಹೊಸ ರೂಪದಲ್ಲಿ ಆಗಮಿಸಿದ್ದು, ಇನ್ನಷ್ಟು ಗ್ರಾಹಕರನ್ನು ಸೆಳೆಯುವ ನಿರೀಕ್ಷೆ ಹೊಂದಿದೆ.

ಬೆಂಗಳೂರು ಪ್ರವೇಶಿಸಿದ ಹೊಸ ತಲೆಮಾರಿನ ಸ್ಕಾರ್ಪಿಯೊ

ನ್ಯೂ ಜನರೇಷನ್ ಸ್ಕಾರ್ಪಿಯೊ ಅನೇಕ ಆಸನ ಸಂರಚನೆಗಳನ್ನು (7,8 ಮತ್ತು 9) ಪಡೆದುಕೊಂಡಿದೆ. ಅಲ್ಲದೆ ಏಳು ಆಕರ್ಷಕ ವೆರಿಯಂಟ್ (ಎಸ್2, ಎಸ್4, ಎಸ್4 ಪ್ಲಸ್, ಎಸ್6, ಎಸ್6 ಪ್ಲಸ್, ಎಸ್8, ಎಸ್10) ಮತ್ತು ಐದು ಬಣ್ಣಗಳ ಆಯ್ಕೆಗಳಲ್ಲಿ (ಡೈಮಂಡ್ ವೈಟ್, ಫಿಯರಿ ಬ್ಲ್ಯಾಕ್, ಮಿಸ್ಟ್ ಸಿಲ್ವರ್, ನ್ಯೂ ಮಾಲ್ಟನ್ ರೆಡ್ ಮತ್ತು ನ್ಯೂ ರಿಗಲ್ ಬ್ಲೂ) ಲಭ್ಯವಾಗಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಎಸ್2 - 8.30 ಲಕ್ಷ ರು.

ಎಸ್4 - 8.95 ಲಕ್ಷ ರು.

ಎಸ್4 (4 ವೀಲ್ ಡ್ರೈವ್) - 10.11 ಲಕ್ಷ ರು.

ಎಸ್6 - 10.14 ಲಕ್ಷ ರು.

ಎಸ್6 ಪ್ಲಸ್ - 10.43 ಲಕ್ಷ ರು.

ಎಸ್8 - 11.28 ಲಕ್ಷ ರು.

ಎಸ್10 - 11.92 ಲಕ್ಷ ರು.

ಎಸ್10 (4 ವೀಲ್ ಡ್ರೈವ್) - 13.05 ಲಕ್ಷ ರು.

ವೈಶಿಷ್ಟ್ಯಗಳು - ನಿರ್ವಹಣೆ, ಚಾಲನೆ ಮತ್ತು ಹ್ಯಾಂಡ್ಲಿಂಗ್

ವೈಶಿಷ್ಟ್ಯಗಳು - ನಿರ್ವಹಣೆ, ಚಾಲನೆ ಮತ್ತು ಹ್ಯಾಂಡ್ಲಿಂಗ್

ಕುಷನ್ ಸಸ್ಫಷನ್ ಮತ್ತು ಆ್ಯಂಟಿ-ರಾಲ್ ತಂತ್ರಜ್ಞಾನ

ಎಂಹಾಕ್ ಎಂಜಿನ್

ನ್ಯೂ ಜನರೇಷನ್ ಟ್ರಾನ್ಸ್‌ಮಿಷನ್

ಶಿಫ್ಟ್ ಆನ್ ಫ್ಲೈ 4 ವೀಲ್ ಡ್ರೈವ್

ಶಾರ್ಟ್ ಟರ್ನಿಂಗ್ ರೇಡಿಯಸ್

ಸಮಕಾಲೀನ ಹೊರಮೈ

ಸಮಕಾಲೀನ ಹೊರಮೈ

ಆಕ್ರಮಣಕಾರಿ ನೋಟ,

ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್,

ಸ್ಟ್ರೈಕಿಂಗ್ ಎಲ್‌ಇಡಿ ಐಬ್ರೋ,

ಸಿಗ್ನೇಚರ್ ಗ್ರಿಲ್ ಜೊತೆ ಪ್ರೀಮಿಯಂ ಕ್ರೋಮ್ ಅಸೆಂಟ್,

ಹೈ ಟೆಕ್ ಎಲ್‌ಇಡಿ ಟೈಲ್ ಲ್ಯಾಂಪ್

ಸ್ಟೈಲಿಷ್ 2 ಟೋನ್ ರಿಯರ್ ಅಪ್ಲಿಕ್ಯೂ

17 ಇಂಚಿನ ಅಲಾಯ್ ವೀಲ್

ಸಿಲ್ವರ್ ಫಿನಿಶ್ಡ್ ಫೆಂಡರ್ ಬಿಜಲ್

ಸ್ಟೈಲಿಷ್ ಬೊನೆಟ್

ರೋಡ್ ಆರ್ಮರ್ ಬಂಪರ್

ಫಾಗ್ ಲ್ಯಾಂಪ್

ಸೈಡ್ ಕ್ಲಾಡಿಂಗ್

ಮುಂದುವರಿದ ತಂತ್ರಜ್ಞಾನ

ಮುಂದುವರಿದ ತಂತ್ರಜ್ಞಾನ

ಹೈಟೆಕ್ 6 ಇಂಚಿನ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ,

ಇನ್ ಬಿಲ್ಟ್ ಜಿಪಿಎಸ್/ನೇವಿಗೇಷನ್/ಬ್ಲೂಟೂತ್/ಸಿಡಿ/ಡಿವಿಡಿ/ಯುಎಸ್‌ಬಿ/ಆಕ್ಸ್

ಸಂಪೂರ್ಣವಾಗಿಯೂ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ,

ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ,

ಸ್ಮಾರ್ಟ್ ರೈನ್ ಆಂಡ್ ಲೈಟ್ ಸೆನ್ಸಾರ್

ಟೈರ್ ಟ್ರಾನಿಕ್ಸ್

ಇಂಟೆಲ್ಲಿಪಾರ್ಕ್ (ರಿವರ್ಸ್ ಅಸಿಸ್ಟ್)

ವಾಯ್ಸ್ ಅಸಿಸ್ಟ್ ಸಿಸ್ಟಂ

ಐಷಾರಾಮಿ ಒಳಮೈ

ಐಷಾರಾಮಿ ಒಳಮೈ

ಬ್ರಾಂಡ್ ನ್ಯೂ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ,

ಐಷಾರಾಮಿ ಹೊಸ ಬ್ಲೂ ಗ್ರೇ ಇಂಟಿರಿಯರ್,

ಆನ್ ನ್ಯೂ ಸ್ಪೋರ್ಟಿ ಸ್ಟೀರಿಂಗ್ ವೀಲ್,

ನ್ಯೂ ಕ್ರೋಮ್ ಫಿನಿಶ್ಡ್ ಎಸಿ ವೆಂಟ್ಸ್,

ನ್ಯೂ ಸೆಂಟ್ರಲ್ ಕನ್ಸೋಲ್,

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್,

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

ಕ್ರಾಶ್ ಪ್ರೊಟೆಕ್ಷನ್,

ಎಂಜಿನ್ ಇಂಮೊಬಿಲೈಜರ್,

ನ್ಯೂ ಪ್ಯಾನಿಕ್ ಬ್ರೇಕ್ ಇಂಡಿಕೇಷನ್,

ಹೊಸ ಆಟೋ ಡೋರ್ ಲಾಕ್ (ಚಾಲನೆ ವೇಳೆ)

ನ್ಯೂ ಆ್ಯಂಟಿ ಥೆಫ್ಟ್ ವಾರ್ನಿಂಗ್

ಸ್ಪೀಡ್ ಅಲರ್ಟ್ ವಾರ್ನಿಂಗ್

ಆ್ಯಂಟಿ ಪಿಂಚ್ ಸ್ಮಾರ್ಟ್ ವಿಂಡೋ

ಆರಾಮ ಮತ್ತು ಅನುಕೂಲತೆ

ಆರಾಮ ಮತ್ತು ಅನುಕೂಲತೆ

ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,

ನ್ಯೂ ಹೈಡ್ರಾಲಿಕ್ ಅಸಿಸ್ಟಡ್ ಬೊನೆಟ್,

ಪವರ್ ವಿಂಡೋ ಕಂಟ್ರೋಲ್,

ರಿಯರ್ ಎಸಿ ವೆಂಟ್ಸ್,

ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,

ಎಲೆಕ್ಟ್ರಿಕ್ ಔಟ್‌ಸೈಡ್ ವ್ಯೂ ಮಿರರ್

ಹೆಡ್‌ಲ್ಯಾಂಪ್ ಜೊತೆ ಫಾಲೋ ಮಿ ಮತ್ತು ಲೀಡ್ ಮಿ

Most Read Articles

Kannada
English summary
Mahindra & Mahindra Ltd. (M&M Ltd.), India’s leading SUV manufacturer, today launched the New Generation Scorpio in Bengaluru Competitively priced at Rs. 8.31 lakhs (ex-showroom Bengaluru, for S2 variant).
Story first published: Friday, September 26, 2014, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X