ದೀಪಾವಳಿ ಸಂಭ್ರಮ ಹೆಚ್ಚಿಸಲು ನಿಸ್ಸಾನ್ ಇವಾಲಿಯಾ ರಿ ಎಂಟ್ರಿ

Written By:

ನಮಗೆಲ್ಲರಿಗೂ ತಿಳಿದಿರುವ ಹಾಗೆ ವಿದೇಶದಲ್ಲಿ ಅದರಲ್ಲೂ ಪ್ರಮುಖವಾಗಿಯೂ ಯುರೋಪ್‌ ಖಂಡದಲ್ಲಿ ಹೆಚ್ಚಿನ ಯಶ ಸಾಧಿಸಿದ್ದ ಜಪಾನ್ ಮೂಲದ ನಿಸ್ಸಾನ್‌ನ ಬಹುನಿರೀಕ್ಷಿತ ಇವಾಲಿಯಾ ಮಲ್ಟಿ ಪರ್ಪಸ್ ವೆಹಿಕಲ್ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಕಾಣುವಲ್ಲಿ ವಿಫಲವಾಗಿತ್ತು.

ಸಾಕಷ್ಟು ನಿರೀಕ್ಷೆಗಳೊಂದಿಗೆ ದೇಶಕ್ಕೆ ನಿಸ್ಸಾನ್ ಇವಾಲಿಯಾ ಎಂಟ್ರಿ ಕೊಟ್ಟಿತ್ತು. ಆದರೆ ಅದ್ಯಾಕೊ ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಕಂಪನಿ ವಿಫಲವಾಗಿತ್ತು. ಒಂದು ಕೌಟುಂಬಿಕ ವಾಹನದ ಬದಲಾಗಿ ಪ್ರಯಾಣಿಕ ವಾಣಿಜ್ಯ ವಾಹನದಂತೆ ಗೋಚರವಾಗಿರುವುದು ದೇಶದಲ್ಲಿ ಇವಾಲಿಯಾ ವೈಫಲ್ಯಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಆದರೆ ಇದರಿಂದ ಎದೆಗುಂದದ ಕಂಪನಿಯು ಇವಾಲಿಯಾ ನೂತನ ಅವತಾರ ಪ್ರದರ್ಶಿಸಲು ಸಜ್ಜಾಗುತ್ತಿದ್ದಾರೆ.

ಒಂದೆಡೆ ಟೊಯೊಟಾ ಇನ್ನೋವಾ ಮಾರುಕಟ್ಟೆಯನ್ನು ಕೊಳ್ಳೆ ಹೊಡೆಯುತ್ತಿದ್ದರೆ ಅತ್ತ ಇವಾಲಿಯಾಗೆ ಹಾದಿ ತೋಚದಂತಾಗಿದೆ. ಇವುಗಳ ಸೇಲ್ಸ್ ಅಂಕಿಅಂಶಗಳೇ ಇದನ್ನು ಬಹಿರಂಗ ಪಡಿಸುತ್ತದೆ. ಇನ್ನೋವಾ ಪ್ರತಿ ತಿಂಗಳು 5,670 ಯುನಿಟ್ ಮಾರಾಟವಾಗುತ್ತಿದ್ದರೆ ಇವಾಲಿಯಾ ಸಂಖ್ಯೆ 177 ಯುನಿಟ್‌ಗಳಿಗೆ ಮಾತ್ರ ಸೀಮಿತವಾಗಿದೆ.

ಇವೆಲ್ಲವನ್ನು ಮೆಟ್ಟಿ ನಿಲ್ಲಲು ಇವಾಲಿಯಾ ಹೊಸ ತಂತ್ರ ರೂಪಿಸುತ್ತಿದೆ. ಅದೇನು ಅಂತೀರಾ? ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ತಿರುವಿರಿ...

Nissan Evalia Facelift

ಹೌದು, ತನ್ನ ವೈಫಲ್ಯವನ್ನು ಚೆನ್ನಾಗಿ ಗುರುತಿಸಿಕೊಂಡಿರುವ ಇವಾಲಿಯಾ, ಪರಿಷ್ಕೃತ ವಿನ್ಯಾಸದೊಂದಿಗೆ ದೇಶಕ್ಕೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

Nissan Evalia Facelift

ಮೂಲಗಳ ಪ್ರಕಾರ ಮುಂದಿನ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಇವಾಲಿಯಾ ಫೇಸ್‌ಲಿಫ್ಟ್ ಎಂಪಿವಿ ವರ್ಷನ್ ಮಾರುಕಟ್ಟೆಗೆ ಅಪ್ಪಳಿಸಲಿದೆ.

Nissan Evalia Facelift

ಇದೇ ಕಾರಣಕ್ಕಾಗಿ ಪ್ರಮುಖ ಬದಲಾವಣೆಗಳನ್ನು ಕಂಪನಿ ಗೌಪ್ಯವಾಗಿಟ್ಟುಕೊಂಡಿದೆ. ಇದು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರಗು ತುಂಬಲಿದೆ.

Nissan Evalia Facelift

ನೂತನ ವೆರಿಯಂಟ್‌ನಲ್ಲಿ ಪವರ್ ವಿಂಡೋ ಕೊರತೆಯನ್ನು ನೀಗಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಆ ಮೂಲಕ ಹೆಚ್ಚು ಭಾರತೀಯ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ.

Nissan Evalia Facelift

ಇನ್ನು ಕಾರಿಗೆ ಪ್ರೀಮಿಯಂ ಟಟ್ ನೀಡುವ ಪ್ರಯತ್ನ ಮಾಡಲಾಗುವುದು. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆಯೇ ಎಂಬುದು ಗ್ರಾಹಕರನ್ನು ಕಾಡುತ್ತಿರುವ ಪ್ರಶ್ನೆ.

English summary
According to reports Nissan Evalia, with a premium interior, will be launched during the festival of lights. Following are some the reported changes that will appear in future Evalia models
Story first published: Monday, July 1, 2013, 19:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark