ಟಾಟಾ ಇಂಡಿಕಾ-ಇಂಡಿಗೊ ಇಮ್ಯಾಕ್ಸ್ ಸಿಎನ್‌ಜಿ ಲಾಂಚ್

By Nagaraja

ಟಾಟಾ ಸಿಎನ್‌ಜಿ ಕಾರುಗಳನ್ನು ನಿರೀಕ್ಷೆ ಮಾಡುತ್ತಿದ್ದ ಗ್ರಾಹಕರು ಇನ್ನೂ ಹೆಚ್ಚು ದಿನ ಕಾಯಬೇಕಾಗಿಲ್ಲ. ಯಾಕೆಂದರೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಬಹುನಿರೀಕ್ಷಿತ ಇಂಡಿಗೊ ಇಮ್ಯಾಕ್ಸ್ ಸಿಎನ್‌ಜಿ (eMax) ಮತ್ತು ಇಂಡಿಕಾ ಇಮ್ಯಾಕ್ ಸಿಎನ್‌ಜಿ ವೆರಿಯಂಟ್‌ಗಳನ್ನು ಬಿಡುಗಡೆಗೊಳಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದು ಟಾಟಾ ಪಾಲಿಗೆ ನೂತನ ಮೈಲುಗಲ್ಲಾಗಿದೆ. ಯಾಕೆಂದರೆ ಟಾಟಾ ಸಾಮರ್ಥ್ಯದ ಬಗ್ಗೆ ತಗಾದೆ ಎತ್ತಿದವರಿಗೆ ಇಂಡಿಕಾ ಹ್ಯಾಚ್‌ಬ್ಯಾಕ್ ಸಿಎನ್‌ಜಿ ಮತ್ತು ಇಂಡಿಗೊ ಕಾಂಪಾಕ್ಟ್ ಸೆಡಾನ್ ಸಿಎನ್‌ಜಿ ಕಾರುಗಳ ಮೂಲಕ ತಕ್ಕ ಉತ್ತರ ನೀಡಿದೆ.

ಪುಟಿದೆದ್ದ ಟಾಟಾ; ಭವಿಷ್ಯದಲ್ಲಿ ವಿಶ್ವದ ನಂ.1 ಕಂಪನಿ?

ನಾವು ಈ ಹಿಂದೆ ತಿಳಿಸಿರುವಂತೆಯೇ ಟಾಟಾ ಸಿಎನ್‌ಜಿ ವೆರಿಯಂಟ್‌ಗಳು ಹೊಸ ವರ್ಷದಲ್ಲಿ ನೂತನ ಕಾರು ಖರೀದಿ ಮಾಡಲು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿರಲಿದೆ. ಇಂಧನ ಬೆಲೆ ಗಗನಕ್ಕೇರುತ್ತಿರುವಂತೆಯೇ ಸಿಎನ್‌ಜಿ ಕಾರುಗಳ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ. ಅಂದ ಹಾಗೆ ನೂತನ ಟಾಟಾ ಕಾರುಗಳು ವಿಶಿಷ್ಟ ವಿನ್ಯಾಸ ಪಡೆದುಕೊಂಡಿರಲಿದೆ. ಹಾಗಿದ್ದರೆ ಬನ್ನಿ ಟಾಟಾ ಇಂಡಿಗೊ ಹಾಗೂ ಇಂಡಿಕಾ ಸಿಎನ್‌ಜಿ ವೇರಿಯಂಟ್‌ಗಳ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಎಂಜಿನ್

ಎಂಜಿನ್

ಇಂಡಿಕಾ ಇಮ್ಯಾಕ್ಸ್ ಮತ್ತು ಇಂಡಿಗೊ ಇಮ್ಯಾಕ್ಸ್‌ಗಳಲ್ಲಿ 1.2 ಲೀಟರ್ 4 ಸಿಲಿಂಡರ್ ಬೈ ಫ್ಯೂಯೆಲ್ ಎಂಜಿನ್ (ಸಿಎನ್‌ಜಿ ಮತ್ತು ಪೆಟ್ರೋಲ್) ಆಳವಡಿಸಲಾಗಿದ್ದು, ಇದು 64 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಇಂಡಿಕಾ ಇಮ್ಯಾಕ್ಸ್

ಇಂಡಿಕಾ ಇಮ್ಯಾಕ್ಸ್

ಟಾಟಾ ಹೇಳುವ ಪ್ರಕಾರ ಇಂಡಿಕಾ ಇಮ್ಯಾಕ್ಸ್ ಸಿಎನ್‌ಜಿ ವೆರಿಯಂಟ್ ಪ್ರತಿ ಕೆ.ಜಿ.ಗೆ 23.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಸಿಎನ್‌ಜಿಯಲ್ಲಿ 230 ಹಾಗೇನೇ ಪೆಟ್ರೋಲ್‌ನಲ್ಲಿ 600 ಕೀ.ಮೀ. ರೇಂಜ್ ವರೆಗೂ ಚಲಿಸಬಹುದಾಗಿದೆ ಎಂದಿದೆ.

ಇಂಡಿಕಾ ಇಮ್ಯಾಕ್ಸ್ ದರ (ದೆಹಲಿ ಎಕ್ಸ್‌ ಶೋ ರೂಂ)

ಇಂಡಿಕಾ ಇಮ್ಯಾಕ್ಸ್ ದರ (ದೆಹಲಿ ಎಕ್ಸ್‌ ಶೋ ರೂಂ)

  • ಇಂಡಿಕಾ ಇಮ್ಯಾಕ್ಸ್ ಜಿಎಲ್‌ಎಸ್ ವೆರಿಯಂಟ್ ಪ್ರಾರಂಭಿಕ ದರ 3.99 ಲಕ್ಷ ರು.
  • ಇಂಡಿಕಾ ಇಮ್ಯಾಕ್ಸ್ ಜಿಎಲ್‌ಎಕ್ಸ್ ವೆರಿಯಂಟ್ ಪ್ರಾರಂಭಿಕ ದರ 4.26 ಲಕ್ಷ ರು.

  • (ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ)

    ಇಂಡಿಗೊ ಇಮ್ಯಾಕ್ಸ್

    ಇಂಡಿಗೊ ಇಮ್ಯಾಕ್ಸ್

    ಇನ್ನು ಇಂಡಿಗೊ ಸಿಎನ್‌ಜಿ ವೆರಿಯಂಟ್ ಪ್ರತಿ ಕೆ.ಜಿ.ಗೆ 24.6 ಕೀ.ಮೀ. ಮೈಲೇಜ್ ನೀಡಲಿದೆ. ಹಾಗೆಯೇ ಇದರ ಸಿಎನ್‌ಜಿ ವೆರಿಯಂಟ್ 230 ಹಾಗೇನೇ ಪೆಟ್ರೋಲ್ ವೆರಿಯಂಟ್ 650 ಕೀ.ಮೀ. ವರೆಗೂ ಮೈಲೇಜ್ ನೀಡಲಿದೆ.

    ಇಂಡಿಗೊ ಇಮ್ಯಾಕ್ಸ್ ದರ (ದೆಹಲಿ ಎಕ್ಸ್‌ ಶೋ ರೂಂ)

    ಇಂಡಿಗೊ ಇಮ್ಯಾಕ್ಸ್ ದರ (ದೆಹಲಿ ಎಕ್ಸ್‌ ಶೋ ರೂಂ)

    • ಇಂಡಿಗೊ ಇಮ್ಯಾಕ್ಸ್ ಜಿಎಲ್‌ಎಸ್ ಪ್ರಾರಂಭಿಕ ದರ 4.99 ಲಕ್ಷ ರು.
    • ಇಂಡಿಗೊ ಜಿಎಲ್‌ಎಕ್ಸ್ ಪ್ರಾರಂಭಿಕ ದರ 5.27 ಲಕ್ಷ ರು.

    • (ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ)

      ಟಾಟಾ ಇಂಡಿಕಾ-ಇಂಡಿಗೊ ಇಮ್ಯಾಕ್ಸ್ ಸಿಎನ್‌ಜಿ ಲಾಂಚ್

      ಸಿಎನ್‌ಜಿ ಸೀಮಿತ ರಾಜ್ಯಗಳಲ್ಲಿ ಮಾತ್ರ ಲಭ್ಯವಿರುವುದರಿಂದ ಪ್ರಸ್ತುತ ಟಾಟಾ ಸಿಎನ್‌ಜಿ ಕಾರುಗಳು ದೆಹಲಿ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ತ್ರಿಪುರಾದಲ್ಲಿ ಮಾತ್ರ ಲಭ್ಯವಿರಲಿದೆ.

      (ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ)

Most Read Articles

Kannada
English summary
Tata Motors has launched the CNG variants of its Indica hatchback and Indigo eCS compact sedan. Tata adds the suffix eMax to all its CNG variants, meaning the new cars will be Indica eMax and Indigo eMax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X