ಪುಟಿದೆದ್ದ ಟಾಟಾ; ಭವಿಷ್ಯದಲ್ಲಿ ವಿಶ್ವದ ನಂ.1 ಕಂಪನಿ?

Written By:

ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳೆದು ಬರುತ್ತಿರುವ ಕಾರು ಕಂಪನಿಗಳ ಪೈಕಿ ಸ್ಥಾನ ಪಡೆದಿರುವ ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಶಿಪ್ರ ಗತಿಯಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅಧ್ಯಯನ ವರದಿಯೊಂದು ವರದಿ ಮಾಡಿದೆ.

ಇದರೊಂದಿಗೆ ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ವಿರುದ್ಧ ತಗಾದೆ ಎತ್ತಿದವರು ಮಂಡಿಯೂರಿ ಶರಣಾಗುವಂತಾಗಿದೆ.

ಈ ನಡುವೆಯೂ ಹಲವಾರು ವಿಮರ್ಶಕರು ಟಾಟಾ ಮೋಟಾರ್ಸ್ ಗುಣಮಟ್ಟತೆ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ 2016ರಲ್ಲಿ ಆಗಮನವಾಗಲಿರುವ ನೂತನ ಫ್ಲ್ಯಾಟ್‌ಫಾರ್ಮ್ ತಕ್ಕ ಉತ್ತರವನ್ನು ನೀಡುವ ನಿರೀಕ್ಷೆಯಿದೆ.

ಮುಂಬರುವ ಟಾಟಾ ಕಾರುಗಳು ನೂತನ ಫ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಗೊಳ್ಳಲಿದೆ. ಈ ಎಲ್ಲ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ದೇಶದ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ.

ಜಗತ್ತಿನಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಕಾರು ಕಂಪನಿಗಳು

ಜಗತ್ತಿನ ಮುಂಚೂಣಿಯ ವಾಹನೋದ್ಯಮದ ಅಧಿಕಾರಿಗಳು ನಡೆಸಿರುವ ಕೆಎಪಿಜಿ 14ನೇ ವಾರ್ಷಿಕ ಆಟೋಮೋಟಿವ್ ಎಕ್ಸಿಕ್ಯೂಟಿವ್ ಅಧ್ಯಯನ ವರದಿಯಲ್ಲಿ ವಿಶ್ವದಲ್ಲಿ ಶಿಪ್ರಗತಿಯಲ್ಲಿ ಬೆಳೆದು ಬರುತ್ತಿರುವ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಸ್ಥಾನ ಪಡೆದುಕೊಂಡಿದೆ. ನಿರೀಕ್ಷೆಯಂತೆಯೇ ಬಹುತೇಕ ಕಾರು ಕಂಪನಿಗಳು ಏಷ್ಯಾ ಖಂಡವನ್ನು ಅದರಲ್ಲೂ ವಿಶೇಷವಾಗಿಯೂ ಚೀನಾ ದೇಶವನ್ನು ಪ್ರತಿನಿಧಿಸುತ್ತಿದೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಭಾರತ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಈಗಾಗಲೇ ವಿಶ್ವದ ಅಗ್ಗದ ಕಾರಾದ ನ್ಯಾನೋ ಪರಿಚಯಿಸಿತ್ತು. ಅದೇ ಹೊತ್ತಿಗೆ ಲ್ಯಾಂಡ್ ರೋವರ್ ಹಾಗೂ ಜಾಗ್ವಾರ್‌ಗಳಂತಹ ಪ್ರತಿಷ್ಠಿತ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಧ್ಯಯನ ವರದಿಯ ಪ್ರಕಾರ 2018ರ ವೇಳೆಗೆ ಟಾಟಾ ತನ್ನ ಗತ ಕಾಲದ ವೈಭವವನ್ನು ಮರುಕಳಿಸಲಿದೆ.

ನಿಸ್ಸಾನ್

ನಿಸ್ಸಾನ್

ಜಪಾನ್‌ನ ಬಹುರಾಷ್ಟ್ರೀಯ ವಾಹನ ಸಂಸ್ಥೆಯಾಗಿರುವ ನಿಸ್ಸಾನ್, ಸ್ಥಿರತೆಯ ಮಾರಾಟವನ್ನು ಕಾಯ್ದುಕೊಂಡಿದೆ. ಲಗ್ಷುರಿ ಬ್ರಾಂಡ್ ಕೂಡಾ ಹೊಂದಿರುವ ನಿಸ್ಸಾನ್ ಕೂಡಾ ಟಾಟಾ ಸಾಲಿಗೆ ಸೇರಿಕೊಂಡಿದೆ.

ಗೀಲಿ ಆಟೋಮೋಟಿವ್ (Geely)

ಗೀಲಿ ಆಟೋಮೋಟಿವ್ (Geely)

ನಿಮ್ಮ ಮಾಹಿತಿಗಾಗಿ, ಚೀನಾದ ಆಟೋಮೋಟಿವ್ ಮಾತೃಸಂಸ್ಥೆ ವೋಲ್ವೋ ಆಗಿದೆ. ಕೆಎಪಿಜಿ ಪ್ರಕಾರ ಗೀಲಿ ಸಹ 2018ರ ವೇಳೆಗೆ ಉತ್ತಮ ಶೇರು ಪಡೆದುಕೊಳ್ಳುವ ಸಾಧ್ಯತೆಯಿದೆ.

ಫಾ ಸಂಸ್ಥೆ (Faw)

ಫಾ ಸಂಸ್ಥೆ (Faw)

ಚೀನಾದ ಅತಿ ಪುರಾತನ ಕಾರು ಕಂಪನಿಗಳಲ್ಲಿ ಒಂದಾಗಿರುವ ಫಾ, ಈಗಲೂ ಮಾರುಕಟ್ಟೆಯಲ್ಲಿ ಶೇರು ವಶಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ನಿಮ್ಮ ಮಾಹಿತಿಗಾಗಿ, ಫಾ ಸಂಸ್ಥೆಯು ಫೋಕ್ಸ್‌ವ್ಯಾಗನ್ ಜತೆ ಪಾಲುದಾರಿಕೆ ಹೊಂದಿದೆ.

ಸೈಕ್ ಮೋಟಾರ್ (saic)

ಸೈಕ್ ಮೋಟಾರ್ (saic)

ಚೀನಾದಿಂದಲೇ ಗುರುತಿಸಿಕೊಂಡಿರುವ ಇನ್ನೊಂದು ಆಟೋ ಕಂಪನಿಯೆಂದರೆ ಸೈಕ್ ಮೋಟಾರ್. ಇದು ಚೀನಾದ ನಾಲ್ಕು ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲೂ ಒಂದಾಗಿದೆ. ಜನರಲ್ ಮೋಟಾರ್ಸ್ ಜತೆ ಹೊಂದಾಣಿಕೆಯನ್ನು ಹೊಂದಿರುವ ಸೈಕ್, ಚೀನಾದಲ್ಲಿ ಷೆವರ್ಲೆ ಮಾರಾಟಗೈಯುತ್ತಿದೆ.

ಹ್ಯುಂಡೈ

ಹ್ಯುಂಡೈ

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ದೇಶದ ನಂ.2 ಸಂಸ್ಥೆಯಾಗಿರುವ ಹ್ಯುಂಡೈ ಮೂಲತ: ಕೊರಿಯಾ ಬ್ರಾಂಡ್ ಆಗಿದೆ. ಹಾಗಿದ್ದರೂ ಹ್ಯುಂಡೈ ಬೆಳವಣಿಗೆ ಭಾರತೀಯರ ಪಾಲಿಗೆ ಶುಭವೆನಿಸಿದೆ.

ಕಿಯಾ

ಕಿಯಾ

ಹ್ಯುಂಡೈನ ಇನ್ನೊಂದು ಬ್ರಾಂಡ್ ಆಗಿರುವ ಕಿಯಾ ಕೂಡಾ ಮುಂದಿನ ದಿನಗಳಲ್ಲಿ ಉತ್ತಮ ಪ್ರಗತಿ ಕಾಣುವ ನಿರೀಕ್ಷೆ ಹೊಂದಿದೆ.

ಟೊಯೊಟಾ

ಟೊಯೊಟಾ

ನಿಮಗೆಲ್ಲರಿಗೂ ಹೆಚ್ಚು ಪರಿಚಿತವಿರುವ ಹಾಗೂ ಜನಪ್ರಿಯ ಬ್ರಾಂಡ್ ಟೊಯೊಟಾ. ಈ ಜಪಾನ್‌ನ ವಾಹನ ತಯಾರಕ ಸಂಸ್ಥೆಯು ಸಹ ಕೆಪಿಎಂಜಿ ವರದಿಯ ಮನ್ನಣೆಗೆ ಪಾತ್ರವಾಗಿದೆ. ಇದು ಸಹ ಭಾರತೀಯರ ವಾಹನ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಬೈಕ್ (BAIC)

ಬೈಕ್ (BAIC)

ಬೀಜಿಂಗ್‌ನ ವಾಹನ ಸಂಸ್ಥೆಯಾಗಿರುವ ಬೈಕ್ ಸಹ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದು ಭವಿಷ್ಯದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕಾರು ಕಂಪನಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸಲಿರುವ ಕಾರು ಕಂಪನಿಗಳ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಪೋಕ್ಸ್‌ವ್ಯಾಗನ್ ಸಂಸ್ಥೆ

ಪೋಕ್ಸ್‌ವ್ಯಾಗನ್ ಸಂಸ್ಥೆ

ಹಾಗೆಯೇ ಬಿಎಂಡಬ್ಲ್ಯು‌ಗಳಂತಹ ಐಷಾರಾಮಿ ಕಾರುಗಳನ್ನು ಹಿಂದಿಕ್ಕಿರುವ ಫೋಕ್ಸ್‌ವ್ಯಾಗನ್ ಪಟ್ಟಿನಲ್ಲಿ ಅಗ್ರಸ್ಥಾನದಲ್ಲಿದೆ. ಕೆಪಿಎಂಜಿ ಸದಸ್ಯರ ಪೈಕಿ ಶೇಕಡಾ 80ರಷ್ಟು ಮಂದಿ 2018ರ ವೇಳೆಗೆ ಫೋಕ್ಸ್‌ವ್ಯಾಗನ್ ಅತಿ ಹೆಚ್ಚು ಪ್ರಗತಿ ಸಾಧಿಸಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

English summary
KMPG's 14th Annual Automotive Executive Survey listed Tata Motors In the World's Fastest Growing Car Companies.
Story first published: Wednesday, October 23, 2013, 16:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark