ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

By Nagaraja

ನಾವು ಪ್ರತಿ ಬಾರಿಯೂ ಟಾಪ್ 10 ಕಾರು, ಟಾಪ್ 10 ಬೈಕ್ ಹೀಗೆ ವಾಹನ ಲೋಕದ ಹಲವು ವಿಧದ ಸಕರಾತ್ಮಕ ಅಂಶಗಳ ಬಗ್ಗೆ ಚರ್ಚಿಸಿರುತ್ತೇವೆ. ಆದರೆ ಎಂದಾದರೂ ಅತ್ಯಂತ ಕೆಟ್ಟ ಕಾರಿನ ಬಗ್ಗೆ ಮಾತನಾಡಿರಬಹುದೇ? ಈ ಬಗ್ಗೆ ಚರ್ಚಿಸುವಾಗ ಭಾರತ ಮೂಲದ ವಾಹನ ತಯಾರಕ ಸಂಸ್ಥೆಯೊಂದು ಅತ್ಯಂತ ಕೆಟ್ಟ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ನಿಜಕ್ಕೂ ಬೇಸರ ಮೂಡಿಸಿದೆ.

ಬ್ರಿಟನ್‌ನ ಪ್ರಖ್ಯಾತ ವೆಬ್ ಸೈಟ್ 'ಆಟೋ ಎಕ್ಸ್‌ಪ್ರೆಸ್' ಬಿಡುಗಡೆ ಮಾಡಿರುವ ಕಳೆದ 25 ವರ್ಷಗಳಲ್ಲೇ ಅತ್ಯಂತ ಕೆಟ್ಟ ಕಾರುಗಳಲ್ಲಿ ಟಾಟಾ ಇಂಡಿಕಾದ ಬ್ರಿಟನ್ ವರ್ಷನ್ ಆಗಿರುವ ರೋವರ್ ಸಿಟಿರೋವರ್ ಕಾಣಿಸಿಕೊಂಡಿದೆ. ಕಾರಿನ ವಿನ್ಯಾಸ, ಚಲನೆ, ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಸುರಕ್ಷತೆಗಳಂತಹ ಪ್ರಮುಖ ವೈಶಿಷ್ಟ್ಯಗಳ ಮಾನದಂಡಗಳ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನಿಂದ ಅಭಿವೃದ್ಧಿಪಡಿಸಲಾದ ಟಾಟಾ ಇಂಡಿಕಾ ರಿ ಬ್ಯಾಡ್ಜ್ ಉತ್ಪನ್ನವಾಗಿರುವ ಸಿಟಿ ರೋವರ್, ಬ್ರಿಟಿಷ್ ಕಾರು ಉತ್ಪಾದಕ ಸಂಸ್ಥೆಯಾದ ಎಂಜಿ ರೋವರ್‌ನಿಂದ ಮಾರಾಟವಾಗುತ್ತಿತ್ತು.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ರೋವರ್ ಸಿಟಿ ರೋವರ್ ಕಾರು 2003ನೇ ಇಸವಿಯಲ್ಲಿ ಲಾಂಚ್ ಆಗಿತ್ತು. ಇದು ಉತ್ತಮ ಇಂಟಿರಿಯರ್ ಸ್ಪೇಸ್ ಹಾಗೂ ನಿರ್ವಹಣೆ ಹೊಂದಿದ್ದರೂ ಗುಣಮಟ್ಟದ ಅಭಾವ ಹಾಗೂ ಕಳಪೆ ಹ್ಯಾಂಡ್ಲಿಂಗ್‌ನಿಂದಾಗಿ ನಿರೀಕ್ಷಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಆಟೋ ಎಕ್ಸ್‌ಪ್ರೆಸ್ ಮಾತ್ರವಲ್ಲದೆ ಬ್ರಿಟನ್‌ನ ಇನ್ನೊಂದು ಪ್ರಖ್ಯಾತ ಮ್ಯಾಗಜಿನ್ ಆಗಿರುವ ಪಾರ್ಕರ್‌ನ ಕಾರು ರೇಟಿಂಗ್‌ನಲ್ಲೂ ಐದರಲ್ಲಿ ಕೇವಲ 2 ಅಂಕ ಮಾತ್ರ ದಾಖಲಿಸಿಕೊಂಡಿದ್ದ ರೋವರ್ ಸಿಟಿ ರೋವರ್ ಮಗದೊಮ್ಮೆ ಅತ್ಯಂತ ಕೆಟ್ಟ ಕಾರೆಂಬ ಅಪಖ್ಯಾತಿಗೆ ಒಳಗಾಗಿತ್ತು.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಅಂದ ಹಾಗೆ ಸಿಟಿರೋವರ್ ಪ್ಯೂಜೆಟ್ 1.4 ಲೀಟರ್ 4 ಸಿಲಿಂಡರ್ 8 ವಾಲ್ವೆ ಎಂಜಿನ್ ಮಾನದಂಡಗಳಲ್ಲಿ ಲಭ್ಯವಿದೆ. ಇದು 11.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಟಾಟಾ ಮೋಟಾರ್ಸ್‌ನ ಪುಣೆ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ಸಿಟಿರೋವರ್ ಬ್ರಿಟನ್‌ನಲ್ಲಿ ಬಂಪರ್, ರೋವರ್ ಬ್ಯಾಡ್ಜ್ ಗ್ರಿಲ್ ಹಾಗೂ ಅಲಾಯ್ ವೀಲ್‌ಗಳು ಬದಲಾವಣೆಗೊಳ್ಳುತ್ತಿದ್ದವು.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಅಂತಿಮವಾಗಿ ಕಳಪೆ ಮಾರಾಟ ಹಾಗೂ ದರ ದುಬಾರಿಯಾದ (7 ಲಕ್ಷ ರು.) ಹಿನ್ನಲೆಯಲ್ಲಿ 2005ನೇ ಇಸವಿಯಲ್ಲಿ ಸಿಟಿ ರೋವರ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕಳೆದ 25 ವರ್ಷಗಳಲ್ಲೇ ಟಾಟಾ ಇಂಡಿಕಾ ಅತ್ಯಂತ ಕೆಟ್ಟ ಕಾರು?

ಒಟ್ಟಿನಲ್ಲಿ ಬ್ರಿಟನ್‌ನಲ್ಲಿ ಉತ್ಪಾದನೆ ಸ್ಥಗಿತಗೊಂಡರೂ ಭಾರತದಲ್ಲಿ ಟಾಟಾ ಇಂಡಿಕಾ ಮಾರಾಟ ಇದೀಗಲೂ ಮುಂದುವರಿದಿದೆ. ಇದು ಅಷ್ಟೊಂದು ಕಳಪೆ ಗುಣಮಟ್ಟವನ್ನು ಹೊಂದಿದೆಯೇ ಎಂಬುದಕ್ಕೆ ಟಾಟಾ ಮಾಲಿಕರೇ ಉತ್ತರಿಸಬೇಕಾಗಿದೆ.

Most Read Articles

Kannada
English summary
Auto Express takes a look at the worst cars over the last 25 years.
Story first published: Tuesday, October 1, 2013, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X