ಏಕ್ ದಿನ್ ಕಾ ಸುಲ್ತಾನ್; ಭಾರತದಲ್ಲಿ ಮುಗ್ಗರಿಸಿದ ಟಾಪ್ 10 ಕಾರುಗಳು

ನಿರ್ದಿಷ್ಟ ಕಾರು ಮಾದರಿಯೊಂದರ ಯಶಸ್ಸಿನಲ್ಲಿ ಸಮಯ ಹಾಗೂ ಗುಣಮಟ್ಟತೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಂದ ಮಾತ್ರಕ್ಕೆ ದೇಶದಲ್ಲಿ ಬಿಡುಗಡೆಯಾದ ಪ್ರತಿಯೊಂದು ಕಾರುಗಳು ಯಶ ಸಾಧಿಸಬೇಕೆಂದಿಲ್ಲ.

ಕೆಲವು ಮಾದರಿಗಳು ಸ್ವಲ್ಪ ಸಮಯ ಉತ್ತಮವೆನಿಸಿಕೊಂಡರೆ ದೀರ್ಘ ದೂರದ ಓಟದಲ್ಲಿ ವೈಫಲ್ಯ ಅನುಭವಿಸುತ್ತದೆ. ಭಾರತದಲ್ಲಿ ಮುಖ್ಯವಾಗಿಯೂ ಮಾರಾಟದ ಆಧಾರದಲ್ಲಿ ಕಾರೊಂದರ ಯಶಸ್ಸು ಹಾಗೂ ವೈಫಲ್ಯವನ್ನು ಮನಗಾನಲಾಗುತ್ತದೆ. ಕಲವೊಂದು ಬಾರಿ ಉತ್ತಮ ಗುಣಮಟ್ಟವನ್ನು ಹೊಂದಿದ್ದರೂ ಕೆಲವು ಮಾದರಿಗಳು ವೈಫಲ್ಯವನ್ನು ಅನುಭವಿಸುತ್ತದೆ. ಹೀಗೆ ಭಾರತ ವಾಹನ ಮಾರುಕಟ್ಟೆಯಲ್ಲಿ ಮುಗ್ಗರಿಸಿದ ಅಗ್ರ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

ಭಾರತದಲ್ಲಿ ವೈಫಲ್ಯ ಅನುಭವಿಸಿದ ಅಗ್ರ 10 ಕಾರುಗಳು

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ವೈಫಲ್ಯ ಅನುಭವಿಸಿದ ಟಾಪ್ 10 ಪಟ್ಟಿಯಲ್ಲಿ ಕೆಲವು ಜನಪ್ರಿಯ ಮಾದರಿಗಳು ಸೇರಿವೆ ಎಂದರೆ ನಂಬಬಹುದೇ? ಮುಂದಕ್ಕೆ ಓದಿ...

ಪ್ಯೂಜೊ 309

ಪ್ಯೂಜೊ 309

ಯಾವಾಗ ನಿರ್ಮಾಣ: 1994ರಿಂದ 1997

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.4 ಲೀಟರ್, 70 ಅಶ್ವಶಕ್ತಿ, 110 ತಿರುಗುಬಲ, 960 ಕೆ.ಜಿ. ಡೀಸೆಲ್ 1.5 ಲೀಟರ್, 57 ಅಶ್ವಶಕ್ತಿ, 97 ತಿರುಗುಬಲ, 990 ಕೆ.ಜಿ

ನೀವು ಹಿರಿಯ ನಾಗರಿಕರಾಗಿದ್ದಲ್ಲಿ 90ರ ದಶಕದ ಪ್ಯೂಜೊ ಕಾರಿನ ಬಗ್ಗೆ ನೆನಪಿಸಿಕೊಳ್ಳಬಹುದು. ಒಂದು ಉತ್ತಮ ಕಾರು ಆಗಿರುವ ಹೊರತಾಗಿಯೂ ಭಾರತೀಯ ರಸ್ತೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಪ್ಯೂಜೊ 309 ವಿಫಲವಾಗಿತ್ತು. ಕಳಪೆ ಸರ್ವಿಸ್, ಡೀಲರ್ ಜಾಲ ಹಾಗೂ ಹೆಚ್ಚುವರಿ ಬಿಡಿಭಾಗದ ಕೊರತೆಯಿಂದಾಗಿ ಪ್ಯೂಜೊ 309 ಈಗ ವೈಫಲ್ಯದ ಕಾರಣಕ್ಕಾಗಿ ಇತಿಹಾಸ ಪುಟ ಸೇರಿ ಬಿಟ್ಟಿದೆ.

ಮಾರುತಿ ಬಲೆನೊ ಅಲ್ಟುರಾ

ಮಾರುತಿ ಬಲೆನೊ ಅಲ್ಟುರಾ

ಯಾವಾಗ ನಿರ್ಮಾಣ: 1999ರಿಂದ 2007

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.6 ಲೀಟರ್, 94 ಅಶ್ವಶಕ್ತಿ, 130 ತಿರುಗುಬಲ, 1020 ಕೆ.ಜಿ

ಆಗಿನ ಕಾಲದಲ್ಲಿ ಲಭ್ಯವಾಗಿದ್ದ ಕೆಲವೇ ಕೆಲವು ಎಸ್ಟೇಟ್ ಕಾರುಗಳಲ್ಲಿ ಅಲ್ಟುರಾ ಒಂದಾಗಿದೆ. ಗರಿಷ್ಠ ಸ್ಥಳಾವಕಾಶ ಹಾಗೂ ನೈಜತೆಯನ್ನು ಹೊಂದಿರುವ ಹೊರತಾಗಿಯೂ ಅಲ್ಟುರಾ ಎಸ್ಟೇಟ್ ಮಾದರಿಗೆ ದೇಶದಲ್ಲಿ ನಿರೀಕ್ಷಿದಷ್ಟು ಯಶ ಕಂಡುಬಂದಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಬಲೆನೊ ಅಲ್ಟುರಾ ಸುಜುಕಿ ಮೊದಲ ಸ್ಟೇಷನ್ ವ್ಯಾಗನ್ ಮಾದರಿಯಾಗಿತ್ತು ಎಂಬುದು ಅಷ್ಟೇ ಮುಖ್ಯವೆನಿಸುತ್ತದೆ.

ಓಪೆಲ್ ವೆಕ್ಟ್ರಾ

ಓಪೆಲ್ ವೆಕ್ಟ್ರಾ

ಯಾವಾಗ ನಿರ್ಮಾಣ: 2003-2005

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 2.2 ಲೀಟರ್, 146 ಅಶ್ವಶಕ್ತಿ, 203 ತಿರುಗುಬಲ

ಅದ್ಭುತ ರಸ್ತೆ ಸಾನಿಧ್ಯವನ್ನು ಹೊಂದಿರುವ ಹೊರತಾಗಿಯೂ ಓಪೆಲ್ ವೆಕ್ಟ್ರಾ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ವೈಫಲ್ಯ ಅನುಭವಿಸಿತ್ತು. ಇದರಿಂದಾಗಿ ದೇಶಕ್ಕೆ ಎಂಟ್ರಿ ಕೊಟ್ಟ ಎರಡು ವರ್ಷದೊಳಗಡೆಯೇ ಇದನ್ನು ಹಿಂಪಡೆಯಲು ಸಂಸ್ಥೆ ನಿರ್ಧರಿಸಿತ್ತು. ಜನರಲ್ ಮೋಟಾರ್ಸ್‌ನಿಂದ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದಡಿಯಲ್ಲಿ ದೇಶಕ್ಕೆ ಕಾಲಿಟ್ಟಿದ್ದ ವೆಕ್ಟ್ರಾ ನಿರ್ವಹಣಾ ವೆಚ್ಚ ಅಧಿಕವಾಗಿರುವುದು ಭಾರಿ ವೈಫಲ್ಯಕ್ಕೆ ಕಾರಣವಾಗಿತ್ತು.

ಷೆವರ್ಲೆ ಎಸ್‌ಆರ್‌ವಿ

ಷೆವರ್ಲೆ ಎಸ್‌ಆರ್‌ವಿ

ಯಾವಾಗ ನಿರ್ಮಾಣ: 2006-2009

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.6 ಲೀಟರ್ (ಟರ್ಬೊಚಾರ್ಜ್ಡ್) 100 ಅಶ್ವಶಕ್ತಿ, 140 ತಿರುಗುಬಲ

ಷೆವರ್ಲೆ ಎಸ್‌ಆರ್‌ವಿ ಭಾರತೀಯ ಮಾರುಕಟ್ಟೆಯಲ್ಲಿ ಮುಗ್ಗರಿಸಿದ ಮಗದೊಂದು ಕಾರಾಗಿದೆ. ಇಲ್ಲಿ ಸಂಸ್ಥೆ ಮಾಡಿರುವ ಏಕ ಮಾತ್ರ ತಪ್ಪು ಏನೆಂದರೆ ಪವರ್ ಫುಲ್ ಹ್ಯಾಚ್‌ಬ್ಯಾಕ್ ಕಾರು ನಿರ್ಮಿಸಿರುವುದು. ಇನ್ನು ಬೆಲೆ ಕೂಡಾ ಸ್ವಲ್ಪ ದುಬಾರಿಯಾಗಿರುವುದು ಗ್ರಾಹಕರು ಇತ್ತ ಕಣ್ಣೆತ್ತಿಯೂ ನೋಡುವ ಪರಿಸ್ಥಿತಿ ಉಂಟಾಗಿರಲಿಲ್ಲ. ಪ್ರಸ್ತುತ ಷೆವಿ ಎಸ್‌ಆರ್‌ವಿ ಕಾರು 12.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿತ್ತು.

ಫೋರ್ಡ್ ಫ್ಯೂಶನ್

ಫೋರ್ಡ್ ಫ್ಯೂಶನ್

ಯಾವಾಗ ನಿರ್ಮಾಣ: 2006-2010

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.6 ಲೀಟರ್, 101 ಅಶ್ವಶಕ್ತಿ, 146 ತಿರುಗುಬಲ, ಡೀಸೆಲ್ 1.4 ಲೀಟರ್, 68 ಅಶ್ವಶಕ್ತಿ, 160 ತಿರುಗುಬಲ

ಫಿಯೆಸ್ಟ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಈ ಎಸ್ಟೇಟ್ ಆಲಿಯಾಸ್ ಎಂಪಿವಿ ಶೈಲಿಯ ಫೋರ್ಡ್ ಫ್ಯೂಶನ್ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಕಾಪಾಡಿಕೊಂಡಿತ್ತು. ಆದರೆ ದೇಶದ ವಾಹನ ಪ್ರಿಯರ ಪಾಲಿಗಿದು ದಬ್ಬಾ ಮಾದರಿಯಾಗಿತ್ತು ಅಂದರೆ ತಪ್ಪಾಗಲಾರದು. ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್ (200 ಎಂಎಂ), ಚಾಲನೆ ಹಾಗೂ ಸುರಕ್ಷತೆ ವೈಶಿಷ್ಟ್ಯತೆ ಹೊಂದಿರುವ ಹೊರತಾಗಿಯೂ ಫೋರ್ಡ್ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು.

ಟಾಟಾ ಸುಮೋ ಗ್ರಾಂಡ್/ಮೂವಸ್

ಟಾಟಾ ಸುಮೋ ಗ್ರಾಂಡ್/ಮೂವಸ್

ಯಾವಾಗ ನಿರ್ಮಾಣ: 2008ರಿಂದ ಇಂದಿಗೂ...

ಎಂಜಿನ್ ತಾಂತ್ರಿಕತೆ: ಡೀಸೆಲ್ 2.2 ಲೀಟರ್, 118 ಅಶ್ವಶಕ್ತಿ, 250 ತಿರುಗುಬಲ

ನೀವೆಲ್ಲರೂ ಟಾಟಾ ಗ್ರಾಂಡ್ ಕಾರಿನ ಬಗ್ಗೆ ಕೇಳಿರಬಹುದು. ಇದೇ ಕಾರು ಮರು ಬ್ರಾಂಡ್ ಪಡೆಯುವ ಮೂಲಕ ಈಗ ಮೂವಸ್ ರೂಪದಲ್ಲಿ ಮಾರಾಟದಲ್ಲಿದೆ. ಆದರೆ ಮೂವಸ್ ಯಶಸ್ಸಿಗೆ ಟಾಟಾ ನಡೆಸಿದ ಪ್ರಯತ್ನಗಳೆಲ್ಲ ಸಂಪೂರ್ಣ ವಿಫಲವಾಗಿದೆ. ಬಹುಶ: ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ವೈಶಿಷ್ಟ್ಯದ ಕೊರತೆಯು ಟಾಟಾ ಸುಮೋ ಗ್ರಾಂಡ್ ಕಾರನ್ನು ಹಿಂದಕ್ಕೆ ತಳ್ಳುವಂತಾಗಿದೆ.

ಸ್ಕೋಡಾ ಫ್ಯಾಬಿಯಾ

ಸ್ಕೋಡಾ ಫ್ಯಾಬಿಯಾ

ಯಾವಾಗ ನಿರ್ಮಾಣ: 2008-2012

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.2 ಲೀಟರ್/1.4 ಲೀಟರ್, 75/85 ಅಶ್ವಶಕ್ತಿ, 110/132 ತಿರುಗುಬಲ, ಡೀಸೆಲ್ 1.4 ಲೀಟರ್, 68 ಅಶ್ವಶಕ್ತಿ, 155 ತಿರುಗುಬಲ

ಜಾಗತಿಕವಾಗಿ ಅತ್ಯುತ್ತಮ ಮನ್ನಣೆಗೆ ಪಾತ್ರವಾಗಿರುವ ಹೊರತಾಗಿಯೂ ಸ್ಕೋಡಾ ಫ್ಯಾಬಿಯಾ ಭಾರತದಲ್ಲಿ ದೊಪ್ಪನೆ ಕೆಳಕ್ಕೆ ಜಾರಿ ಬಿದ್ದಿರುವುದನ್ನು ನಾವು ಕಣ್ಣಾರೆ ನೋಡಿರುತ್ತೇವೆ. ಸ್ಕೋಡಾ ನೀತಿಯೇ ಇದರ ಹಿಂದಿರುವ ಪ್ರಮುಖ ಕಾರಣ ಎಂಬುದನ್ನು ಮೊದಲ ನೋಟದಲ್ಲೇ ಮೆಲುಕು ಹಾಕಬಹುದಾಗಿದೆ. ಕಳಪೆ ಮಾರಾಟ ಸೇವೆ ಹಾಗೂ ಪ್ರೀಮಿಯಂ ದರ ನಿಗದಿಪಡಿಸಿರುವುದು ಫ್ಯಾಬಿಯಾ ಹಿನ್ನಡೆಗೆ ಕಾರಣವಾಗಿತ್ತು.

ಸುಜುಕಿ ಕಿಜಾಶಿ

ಸುಜುಕಿ ಕಿಜಾಶಿ

ಯಾವಾಗ ನಿರ್ಮಾಣ: 2011-2014

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 2.4 ಲೀಟರ್, 175 ಅಶ್ವಶಕ್ತಿ, 230 ತಿರುಗುಬಲ, 1460 ಕೆ.ಜಿ

ಕಿಜಾಶಿ ಎಂಬುದು ಲಗ್ಷುರಿ ಸೆಡಾನ್ ವಿಭಾಗಕ್ಕೆ ಎಂಟ್ರಿ ಕೊಡುವ ಮಾರುತಿಯ ಮೊದಲ ಹಾಗೂ ಬಹುಶ: ಕೊನೆಯ ಪ್ರಯತ್ನವಾಗಿರಬಹುದು. ಕಾಲು ಜಾರಿದರೆ ಆನೆಯೂ ಬೀಳುವುದು ಎಂಬುದು ಇಲ್ಲಿ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ದೇಶದ ನಂ.1 ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹೊರತಾಗಿಯೂ ಮಾರುತಿ ಸುಜುಕಿಯ ಕಿಜಾಶಿ ಭಾರತದಲ್ಲಿ ಯಶ ಕಂಡಿರಲಿಲ್ಲ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಯಾವಾಗ ನಿರ್ಮಾಣ: 2012ರಿಂದ ಇಂದಿಗೂ...

ಎಂಜಿನ್ ತಾಂತ್ರಿಕತೆ: ಡೀಸೆಲ್ 1.5 ಲೀಟರ್, 100 ಅಶ್ವಶಕ್ತಿ, 240 ತಿರುಗುಬಲ, 1640 ಕೆ.ಜಿ

ಮಹೀಂದ್ರ ಕ್ಸೈಲೋದಿಂದ ಪ್ರೇರಿತಗೊಂಡು ನಿರ್ಮಾಣವಾದ ಮಾದರಿ ಕ್ವಾಂಟೊ ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಆದರೆ ಮಾರಾಟದ ವಿಚಾರದಲ್ಲಿ ಇದು ಪ್ರತಿಫಲಿಸಿಲ್ಲ ಎಂಬುದು ಅಷ್ಟೇ ಸತ್ಯ. ಕೆಲವು ನಿರ್ದಿಷ್ಟ ಗ್ರಾಹಕರನ್ನು ಹೊರತುಪಡಿಸಿದರೆ ಕ್ವಾಂಟೊಗೆ ಸ್ಕಾರ್ಪಿಯೊ ತರಹನೇ ಯಶ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಭರವಸೆ ಕೈಬಿಡದ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಸಂಸ್ಥೆಯು ನಿಕಟ ಭವಿಷ್ಯದಲ್ಲೇ ಕ್ವಾಂಟೊ ಎಎಂಟಿ ವರ್ಷನ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಕಾದು ನೋಡೋಣ...

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಯಾವಾಗ ನಿರ್ಮಾಣ: 2013ರಿಂದ ಇಂದಿಗೂ...

ಎಂಜಿನ್ ತಾಂತ್ರಿಕತೆ: ಡೀಸೆಲ್ 1.5 ಲೀಟರ್, 64 ಅಶ್ವಶಕ್ತಿ, 160 ತಿರುಗುಬಲ

'ಏನೋ ಮಾಡಲು ಹೋಗಿ ಏನೋ ಆಯ್ತು ಅಂತಾರಲ್ಲ' ಇದು ಮಹೀಂದ್ರ ವೆರಿಟೊ ವೈಬ್ ಮಾದರಿಗೆ ಹೆಚ್ಚು ಸೂಕ್ತವೆನಿಸುತ್ತದೆ. ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಕಾಣಿಸಿಕೊಂಡಿರುವ ಹೊರತಾಗಿ ಹ್ಯುಂಡೈ ಎಕ್ಸ್‌ಸೆಂಟ್ ಹಾಗೂ ಹೋಂಡಾ ಅಮೇಜ್ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಲಿಲ್ಲ.

ಭಾರತದಲ್ಲಿ ವೈಫಲ್ಯ ಅನುಭವಿಸಿದ ಅಗ್ರ 10 ಕಾರುಗಳು

ಈಗ ಭಾರತದಲ್ಲಿ ಮುಗ್ಗರಿಸಿದ ಅಗ್ರ 10 ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
English summary
We take a look at 10 cars that have failed to make an impression in the country's automobile market over the years. That some of these cars saw poor success came as a surprise even to industry experts-let's get right into the (black)list.
Story first published: Wednesday, March 11, 2015, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X