ಜಿನೆವಾದಲ್ಲಿ ಪ್ರದರ್ಶನ ಕಂಡ ಅಗ್ರ ಕಾನ್ಸೆಪ್ಟ್ ಕಾರುಗಳು

Written By:

ವಾಹನೋದ್ಯಮದ ಅಸ್ತಿತ್ವದ ದೃಷ್ಟಿಕೋನದಲ್ಲಿ ಕಾನ್ಸೆಪ್ಟ್ ಕಾರುಗಳು ಅಥವಾ ಭವಿಷ್ಯದ ವಾಹನ ಪರಿಕಲ್ಪನೆಗಳು ಅತ್ಯಂತ ಮಹತ್ವಪೂರ್ಣವೆನಿಸುತ್ತದೆ.

ಭವಿಷ್ಯದ ಕಾರು ಹೇಗೆ ಇರಬೇಕು? ಪರಿಸರ ಸ್ನೇಹಿ ವಾಹನಗಳ ರಚನೆಯತ್ತ ಅವಿಷ್ಕರಿಸಿರುವ ಹೊಸ ತಂತ್ರಜ್ಞಾನವೇನು? ಇವೆಲ್ಲಕ್ಕೂ ವಾಹನ ಪ್ರದರ್ಶನ ಮೇಳದಲ್ಲಿ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಹಾಗಿದ್ದರೆ ಬನ್ನಿ 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶಿಸಲ್ಪಟ್ಟ ಆಕರ್ಷಕ ಕಾನ್ಸೆಪ್ಟ್ ಕಾರುಗಳತ್ತ ಒಂದು ಮೆಲುಕು ಹಾಯಿಸೋಣವೇ...

ಜಿನೆವಾದಲ್ಲಿ ಪ್ರದರ್ಶನ ಕಂಡ ಅಗ್ರ ಕಾನ್ಸೆಪ್ಟ್ ಕಾರುಗಳು

ಜಗತ್ತಿನ ಅಗ್ರ ವಾಹನ ಪ್ರದರ್ಶನ ಮೇಳಗಳಲ್ಲಿ ಸ್ವಿಜರ್ಲೆಂಡ್‌ನಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಜಿನೆವಾ ಮೋಟಾರು ಶೋ ಕೂಡಾ ಒಂದಾಗಿದೆ. ಇಲ್ಲಿ ಹಲವು ನೂತನ ಕಾನ್ಸೆಪ್ಟ್ ಕಾರುಗಳು ಪ್ರದರ್ಶನಗೊಂಡಿದ್ದವು.

ಸಿಯಾಟ್ 20ವಿ20

ಸಿಯಾಟ್ 20ವಿ20

ಫೋಕ್ಸ್‌ವ್ಯಾಗನ್ ಎಂಕ್ಯೂಬಿ ತಳಹದಿಯಲ್ಲಿ ಸಿಯಾಟ್ 20ವಿ20 ಕಾನ್ಸೆಪ್ಟ್ ಕಾರು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ವಾಹನವು 2020ನೇ ಇಸವಿಯ ವೇಳೆ ರಸ್ತೆ ಪ್ರವೇಶಿಸುವ ಸಾಧ್ಯತೆಯಿದೆ. ಇದ ಸ್ಪಷ್ಟ ಗೋಚರತೆಯ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣವಾಗಲಿದೆ.

ಫೋಕ್ಸ್‌ವ್ಯಾಗನ್ ಸ್ಪೋರ್ಟ್ ಕೂಪೆ ಕಾನ್ಸೆಪ್ಟ್ ಜಿಟಿಇ

ಫೋಕ್ಸ್‌ವ್ಯಾಗನ್ ಸ್ಪೋರ್ಟ್ ಕೂಪೆ ಕಾನ್ಸೆಪ್ಟ್ ಜಿಟಿಇ

ಭವಿಷ್ಯದ ವಾಹನಗಳತ್ತ ಸ್ಪಷ್ಟ ದೃಷ್ಟಿಕೋನ ಹೊಂದಿರುವ ಫೋಕ್ಸ್‌ವ್ಯಾಗನ್ ನೂತನ ಸ್ಪೋರ್ಟ್ ಕೂಪೆ ಕಾನ್ಸೆಪ್ಟ್ ಜಿಟಿಇ ಮಾದರಿಯನ್ನು ಪ್ರದರ್ಶನಗೊಳಿಸಿದೆ. ಸ್ಪೋರ್ಟ್ ಕೂಪೆ ಶೈಲಿಯ ಈ ಕಾರು ಬಹು ಕ್ರಿಯಾತ್ಮಕೆಗಳನ್ನು ಪಡೆದುಕೊಂಡಿದೆ.

ಆಡಿ ಪ್ರೊಲಾಗ್ ಅವಂತ್ ಕಾನ್ಸೆಪ್ಟ್

ಆಡಿ ಪ್ರೊಲಾಗ್ ಅವಂತ್ ಕಾನ್ಸೆಪ್ಟ್

ಆಡಿ ಸಂಪೂರ್ಣ ಎಸ್‌ಯುವಿ ಎಂಬ ಬಿರುದಿಗೆ ಪ್ರೊಲಾಗ್ ಅವಂತ್ ಪಾತ್ರವಾಗಲಿದೆ. ಇದರಲ್ಲೂ ಆಡಿ ನಾವೀನ್ಯತೆಯ ತಂತ್ರಜ್ಞಾನ ಆಳವಡಿಸಲಾಗಿದೆ.

ಬೆಂಟ್ಲಿ ಇಎಕ್ಸ್‌ಪಿ 10 ಸ್ಪೀಡ್ 6

ಬೆಂಟ್ಲಿ ಇಎಕ್ಸ್‌ಪಿ 10 ಸ್ಪೀಡ್ 6

ಎರಡು ಸೀಟುಗಳ ಬೆಂಟ್ಲಿ ನಿರ್ವಹಣಾ ಕಾರು ಇದಾಗಿದೆ. ಇದು ಬೆಂಟ್ಲಿ ಸ್ಪೋರ್ಟ್ಸ್ ಕಾರುಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

 ನಿಸ್ಸಾನ್ ಸ್ವೇ

ನಿಸ್ಸಾನ್ ಸ್ವೇ

ನೆಕ್ಸ್ಟ್ ಜನರೇಷನ್ ಮೈಕ್ರಾ ಎಂದೇ ಕರೆಯಲ್ಪಡುವ ನಿಸ್ಸಾನ್ ಸ್ವೇ ವಿಶೇಷವಾಗಿಯೂ ಯುರೋಪ್ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ.

ಲೆಕ್ಸಸ್ ಎಲ್‌ಎಸ್-ಎಫ್‌ಎ

ಲೆಕ್ಸಸ್ ಎಲ್‌ಎಸ್-ಎಫ್‌ಎ

25ನೇ ವಾರ್ಷಿಕೋತ್ಸವ ಅಂಗವಾಗಿ ಲೆಕ್ಸಸ್ ಸಂಸ್ಥೆಯು 85ನೇ ಜಿನೆವಾ ಮೋಟಾರು ಶೋದಲ್ಲಿ ಅಲ್ಟ್ರಾ ಕಾಂಪಾಕ್ಟ್ ವಾಹನವನ್ನು ಪ್ರದರ್ಶಿಸಿತ್ತು. ಈ ಬ್ಯೂಟಿಫುಲ್ ಕಾರಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಗೆ ಪಯಣಿಸಬಹುದಾಗಿದೆ.

ನ್ಯಾನೋಫ್ಲೋಸೆಲ್ ಕ್ವಾಂಟ್ ಎಫ್ ಮತ್ತು ಕ್ವಾಂಟಿನೊ ಕಾನ್ಸೆಪ್ಟ್

ನ್ಯಾನೋಫ್ಲೋಸೆಲ್ ಕ್ವಾಂಟ್ ಎಫ್ ಮತ್ತು ಕ್ವಾಂಟಿನೊ ಕಾನ್ಸೆಪ್ಟ್

ಸಾಮಾನ್ಯ ಎಲೆಕ್ಟ್ರಿಕ್ ಕಾರುಗಿಂತಲೂ ವಿಭಿನ್ನವಾಗಿರುವ ನ್ಯಾನೋಫ್ಲೋಸೆಲ್ ಕ್ವಾಂಟ್ ಎಫ್ ಮತ್ತು ಕ್ವಾಂಟಿನೊ ಕಾನ್ಸೆಪ್ಟ್‌ ಭವಿಷ್ಯದತ್ತ ದಿಟ್ಟ ಸಂದೇಶವನ್ನು ರವಾನಿಸುತ್ತದೆ.

ಮರ್ಸಿಡಿಸ್ ಬೆಂಝ್ ಜಿ500 4x4 ಕಾನ್ಸೆಪ್ಟ್

ಮರ್ಸಿಡಿಸ್ ಬೆಂಝ್ ಜಿ500 4x4 ಕಾನ್ಸೆಪ್ಟ್

ಬೆಂಝ್ ಜಿ500 ಫೋರ್ ವೀಲ್ ಕಾನ್ಸೆಪ್ಟ್ ವಾಹನವು ವಾಹನ ಪ್ರಿಯರಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇದು ನೈಜ ಆಫ್ ರೋಡ್ ಹೊರತಾಗಿ ಕ್ರೀಡಾ ಬಳಕೆಯ ವಾಹನದ ಅನುಭವ ನೀಡಲಿದೆ.

ಟಾಟಾ ಹೆಕ್ಸಾ ಕಾನ್ಸೆಪ್ಟ್

ಟಾಟಾ ಹೆಕ್ಸಾ ಕಾನ್ಸೆಪ್ಟ್

ನಾವು ಈಗಾಗಲೇ ಮಾಹಿತಿ ಕೊಟ್ಟಿರುವಂತೆಯೇ ಟಾಟಾ ಹೆಕ್ಸಾ ಎಸ್‌ಯುವಿ ಕಾನ್ಸೆಪ್ಟ್ ಹೆಚ್ಚಿನ ನಿರೀಕ್ಷೆಗಳಿಗೆ ಕಾರಣವಾಗಿದೆ. ಇದು ಜಾಗತಿಕವಾಗಿ ಟಾಟಾ ಸಂಸ್ಥೆಯ ಪ್ರತಿಷ್ಠೆಯನ್ನು ಎತ್ತಿ ಹಿಡಿಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
The 2015 Geneva Motor Show was a feast to auto enthusiasts. Car manufacturers had everything lined up from the latest car launches to concepts.
Story first published: Monday, March 9, 2015, 14:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark