ಚೊಚ್ಚಲ ಕ್ರಾಸೋವರ್; ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಲಾಂಚ್

Written By:

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಸಂಸ್ಥೆಯು, ತನ್ನ ಮೊತ್ತ ಮೊದಲ ಎಟಿಯೋಸ್ ಕ್ರಾಸ್, ಕ್ರಾಸೋವರ್ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 5.76 ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ ದರ 7.40 ಲಕ್ಷ ರು.ಗಳ ವರೆಗಿದೆ.

ಇವನ್ನೂ ಓದಿ: ಬಂದಿದೆ ಷೆವರ್ಲೆ ವಾರ್ಷಿಕ ಎಡಿಷನ್

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿದ್ದ ಟೊಯೊಟಾ ಎಟಿಯೋಸ್ ಕ್ರಾಸ್, ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಮೂಲಕ ಎಟಿಯೋಸ್ ಹಾಗೂ ಲಿವಾ ಕುಟುಂಬಕ್ಕೆ ಇನ್ನೊಂದು ಕಾರಿನ ಸೇರ್ಪಡೆಯಾಗಿದೆ.

ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಲಾಂಚ್

ಬ್ರೆಜಿಲ್‌ನಲ್ಲಿ ಈಗಾಗಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಟೊಯೊಟಾ ಎಟಿಯೋಸ್ ಕ್ರಾಸ್, ಪ್ರಮುಖವಾಗಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದು ಸುಲಭ ಚಾಲನೆ, ಇಂಧನ ದಕ್ಷತೆ ಹಾಗೂ ವಿಶ್ವಸಾರ್ಹತೆಯನ್ನು ಪ್ರತಿಬಿಂಬಿಸಲಿದೆ.

ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಲಾಂಚ್

ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿರುವ ಟೊಯೊಟಾ ಎಟಿಯೋಸ್ ಕ್ರಾಸ್, ಇತರ ಮಾದರಿಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಿದೆ. ಇದರಲ್ಲಿ 1.5 ಲೀಟರ್ ಹಾಗೂ 1.2 ಲೀಟರ್ ಪೆಟ್ರೋಲ್ ಅಂತೆಯೇ 1.4 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ವಿನ್ಯಾಸ - ಹೊರಮೈ ವೈಶಿಷ್ಟ್ಯಗಳು

ವಿನ್ಯಾಸ - ಹೊರಮೈ ವೈಶಿಷ್ಟ್ಯಗಳು

 • ದೃಢವಾದ ಶೈಲಿ,
 • ದಿಟ್ಟವಾದ ಫ್ರಂಟ್ ಗ್ರಿಲ್,
 • ಸೈಡ್ ಕ್ಲಾಡಿಂಗ್,
 • ಸ್ಟೈಲಿಷ್ ಡೈಮಂಡ್ ಕಟ್ ಅಲಾಯ್,
 • ಸ್ಟರ್ಡಿ ಆಂಡ್ ಸ್ಟೈಲಿಷ್ ರೂಫ್ ರೈಲ್
 • ಡೈನಾಮಿಕ್ ರಿಯರ್ ಕ್ಲಾಡಿಂಗ್ ಜತೆಗೆ ಬ್ಯಾಡ್ಜಿಂಗ್ ಮತ್ತು ರೂಫ್ ಸ್ಪಾಯ್ಲರ್
ವಿನ್ಯಾಸ - ಹೊರಮೈ ವೈಶಿಷ್ಟ್ಯಗಳು

ವಿನ್ಯಾಸ - ಹೊರಮೈ ವೈಶಿಷ್ಟ್ಯಗಳು

 • ಫಾಗ್ ಲ್ಯಾಂಪ್ ಜತೆ ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್,
 • ಔಟ್‌ಸೈಡ್ ರಿಯರ್ ವ್ಯೂ ಮಿರರ್ ಜತೆ ಟರ್ನ್ ಇಂಡಿಕೇಟರ್,
 • ರಿಯರ್ ಡಿಫಾಗರ್ ಜತೆ ವೈಪರ್
ವಿನ್ಯಾಸ - ಒಳಮೈ ವೈಶಿಷ್ಟ್ಯಗಳು

ವಿನ್ಯಾಸ - ಒಳಮೈ ವೈಶಿಷ್ಟ್ಯಗಳು

 • ಪಿಯಾನೊ ಬ್ಲ್ಯಾಕ್ ಇಂಟಿರಿಯರ್,
 • ಸ್ಪೋರ್ಟಿ ಸೀಟ್ ಫ್ಯಾಬ್ರಿಕ್ ಜತೆ ವೈಟ್ ಸ್ಟಿಚ್ ಮತ್ತು ಲೊಗೊ,
 • 2 ಡಿನ್ ಆಡಿಯೋ ಜತೆ ಬ್ಲೂಟೂತ್, ಯುಎಸ್‌ಬಿ, ಆಕ್ಸ್-ಇನ್ ಮತ್ತು ರಿಮೋಟ್,
 • ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್‌ನಲ್ಲಿ ಆಡಿಯೋ ಕಂಟ್ರೋಲ್
ನಿರ್ವಹಣೆ

ನಿರ್ವಹಣೆ

ಒಟ್ಟು ಮೂರು ಎಂಜಿನ್

 • 1.5 ಲೀ. ಪೆಟ್ರೋಲ್ (ಡಿಒಎಚ್‌ಸಿ) - 66ಕೆಡಬ್ಲ್ಯು (90 ಪಿಎಸ್) @ 5600 ಆರ್‌ಪಿಎಂ
 • 1.2 ಲೀ. ಪೆಟ್ರೋಲ್ (ಡಿಒಎಚ್‌ಸಿ) - 59ಕೆಡಬ್ಲ್ಯು (80 ಪಿಎಸ್) @ 5600 ಆರ್‌ಪಿಎಂ
 • 1.4 ಲೀ. ಡೀಸೆಲ್ (ಡಿ4ಡಿ) - 50ಕೆಡಬ್ಲ್ಯು (68 ಪಿಎಸ್) @ 3800 ಆರ್‌ಪಿಎಂ
ಆರಾಮ ಹಾಗೂ ಅನುಕೂಲತೆ

ಆರಾಮ ಹಾಗೂ ಅನುಕೂಲತೆ

 • ಎಸಿ ನಿರ್ವಹಣೆಯಲ್ಲಿ ಬೆಸ್ಟ್ ಇನ್ ಕ್ಲಾಸ್,
 • ಭಾರತೀಯ ರಸ್ತೆಗೆ ತಕ್ಕಂತಹ ಅತ್ಯುತ್ತಮ ಸಸ್ಪೆಷನ್,
 • ಡ್ರೈವರ್ ಸೀಟು ಎತ್ತರ ಹೊಂದಾಣಿಕೆ,
 • ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
 • ರಿಯರ್ ವಿಂಡೋ ಡಿಫಾಗರ್, ಟ್ಯಾಕೋಮೀಟರ್ ಜತೆ ಡಿಜಿಟಲ್ ಕ್ಲಾಕ್,
 • ಒಆರ್‌ವಿಎಂ ಜತೆ ಟರ್ನ್ ಇಂಡಿಕೇಟರ್
ಸುರಕ್ಷತೆ ಹಾಗೂ ಗುಣಮಟ್ಟತೆ

ಸುರಕ್ಷತೆ ಹಾಗೂ ಗುಣಮಟ್ಟತೆ

 • ಎಬಿಎಸ್ ಜತೆ ಇಬಿಡಿ,
 • ಘರ್ಷಣೆ ಹೀರಿಕೊಳ್ಳುವಂತಹ ದೇಹ ವಿನ್ಯಾಸ,
 • ಚಾಲಕ ಹಾಗೂ ಪ್ರಯಾಣಿಕ ಏರ್ ಬ್ಯಾಗ್,
 • ತುಕ್ಕು ಹಿಡಿಯುವ ಭಾಗಗಳಲ್ಲಿ ತುಕ್ಕು ವಿರೋಧಿ ಉಕ್ಕಿನ ಲೋಹದ ಹಾಳೆಯ ಬಳಕೆ,
 • ದೇಹದ ಅಡಿಯಲ್ಲಿ ಲೇಪನ,
 • ಆ್ಯಂಟಿ ಚಿಪ್ ಕೋಟಿಂಗ್,
ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

ನಾಲ್ಕು ದರ್ಜೆಗಳಲ್ಲಿ ನೂತನ ಟೊಯೊಟಾ ಎಟಿಯೋಸ್ ಕ್ರಾಸ್ ಲಭ್ಯವಾಗಲಿದೆ.

ಪೆಟ್ರೋಲ್

 • ವಿ (1.5 ಲೀಟರ್ ಎಂಜಿನ್) - ರು. 7,35,000
 • ಜಿ (1.2 ಲೀಟರ್ ಎಂಜಿನ್) - ರು. 5,76,000

ಡೀಸೆಲ್

 • ವಿಡಿ (1.4 ಲೀಟರ್ ಎಂಜಿನ್) - ರು. 7,40,640
 • ಜಿಡಿ (1.4 ಲೀಟರ್ ಎಂಜಿನ್) - ರು. 6,90,432

ಬಣ್ಣಗಳು

ಬಣ್ಣಗಳು

 • ಇನ್ಫೆರ್ನೊ ಓರೆಂಜ್,
 • ಅಲ್ಟ್ರಾಮರೈನ್ ಬ್ಲೂ,
 • ಕ್ಲಾಸಿಕ್ ಗ್ರೇ,
 • ಸಿಂಫನಿ ಸಿಲ್ವರ್,
 • ಸೆಲೆಸ್ಟ್ರಿಯಲ್ ಬ್ಲ್ಯಾಕ್,
 • ವೈಟ್,
 • ವೆರ್ಮಿಲಿಯನ್ ರೆಡ್,
 • ಹಾರ್ಮನಿ ಬೀಜ್.
English summary
Toyota Kirloskar Motor Pvt. Ltd. (TKM) today announced the launch of New Etios Cross, marking the commencement of sales. The new vehicle was Available in three different engine options (2 petrol and 1 diesel) and four grades.
Story first published: Thursday, May 8, 2014, 6:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark