ಮುಂಬರುವ ಹ್ಯುಂಡೈ ಕಾರುಗಳು; ಒಂದು ಪಕ್ಷಿನೋಟ

ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮಾಡೆಲ್‌ಗಳಿಗೆ ಭಾರಿ ಬೇಡಿಕೆಯಿದೆ. ದೇಶದ ಎಲ್ಲ ನಗರಗಳಲ್ಲೂ ಅತ್ಯುತ್ತಮ ಬೇಡಿಕೆ ಕಾಯ್ದುಕೊಂಡಿರುವ ಹ್ಯುಂಡೈ ಸಮಯಕ್ಕೆ ತಕ್ಕಂತೆ ಪರಿಷ್ಕೃತ ಮಾಡೆಲ್‌ಗಳನ್ನು ಪರಿಚಯಿಸುತ್ತಲೇ ಇದೆ.

ಹ್ಯುಂಡೈ ಪೈಕಿ ಐ10 ಹಾಗೂ ಐ20 ಅತ್ಯಂತ ಜನಪ್ರಿಯ ಆವೃತ್ತಿಗಳಾಗಿವೆ. ಇದರಂತೆ ಇನ್ನಷ್ಟೇ ಆಗಮನವಾಗಲಿರುವ ಗ್ರಾಂಡ್ ಐ10 ಆವೃತ್ತಿ ಹ್ಯಾಚ್‌ಬ್ಯಾಕ್ ಕಾರು ಸಹ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಅಂದ ಹಾಗೆ ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಮಾರುತಿ (47%) ಬಳಿಕ ಶೇಕಡಾ 23ರಷ್ಟು ಶೇರುಗಳನ್ನು ಹೊಂದಿರುವ ಹ್ಯುಂಡೈನಿಂದ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಯಾವುವು? ಈ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್ ಮಾಹಿತಿ ಕಲೆ ಹಾಕಿದ್ದು, ಈ ಲೇಖನದ ಮುಖಾಂತರ ಚುಟುಕಾಗಿ ವಿವರಿಸಲಿದ್ದೇವೆ.

2020ರ ವೇಳೆಗೆ ದೇಶದ ನಂ.1 ಕಾರು ಸಂಸ್ಥೆ ಎನಿಸಿಕೊಳ್ಳುವ ಮಹತ್ತರ ಗುರಿಯಿರಿಸಿಕೊಂಡಿರುವ ಹ್ಯುಂಡೈ ಮುಂದಿನ ಒಂದು ವರೆ ವರ್ಷಗಳಲ್ಲಿ ಮೂರು ನೂತನ ಕಾರುಗಳನ್ನು ಲಾಂಚ್ ಮಾಡುವುದಾಗಿ ಖಚಿತಪಡಿಸಿದ್ದು, ಇನ್ನು ಮೂರು ಕಾರುಗಳು ಅಭಿವೃದ್ಧಿ ಹಂತದಲ್ಲಿದೆ. ಈ ಎಲ್ಲ ಬೆಳವಣಿಗೆಗಳು ನಂ.1 ಮಾರುತಿಗೆ ಆಂತಕದ ಪರಿಸ್ಥಿತಿ ಸೃಷ್ಟಿಮಾಡುವಂತಾಗಿದೆ. ಹಾಗಿದ್ದರೆ ಇನ್ಯಾಕೆ ತಡ ಮುಂದಿನ 18 ತಿಂಗಳಲ್ಲಿ ಹ್ಯುಂಡೈನಿಂದ ಬಿಡುಗಡೆಯಾಗಲಿರುವ ಕಾರುಗಳು ಯಾವುದೆಲ್ಲ? ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ನಾವು ಈ ಮೊದಲೇ ತಿಳಿಸಿರುವಂತೆಯೇ ಹ್ಯುಂಡೈ ಗ್ರಾಂಡ್ ಐ10 ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿದೆ. ಪ್ರಸ್ತುತ ಹ್ಯಾಚ್‌ಬ್ಯಾಕ್ ಕಾರು ಐ10 ಹಾಗೂ ಐ20 ನಡುವೆ ಕಾಣಿಸಿಕೊಳ್ಳಲಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.1 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದು ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿಯೆನಿಸಲಿದೆ.

ಲಾಂಚ್ ಸಮಯ: ಸೆಪ್ಟೆಂಬರ್ 2013
ಹ್ಯುಂಡೈ ಎಂಪಿವಿ

ಹ್ಯುಂಡೈ ಎಂಪಿವಿ

ಕಳೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಹ್ಯುಂಡೈ ನೂತನ ಎಂಪಿವಿ ಕಾರು ಮುಂದಿನ ವರ್ಷ ಆಗಮನವಾಗುವ ನಿರೀಕ್ಷೆಯಿದ್ದು, ಮಾರುತಿ ಸುಜುಕಿ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಆವೃತ್ತಿಗಳಿಗೆ ಪೈಪೋಟಿ ನೀಡಲಿದೆ. ಹೆಕ್ಸಾ ಸ್ಪೇಸ್ ಕಾನ್ಸೆಪ್ಟ್‌ನಲ್ಲಿ ಈ ಏಳು ಸೀಟಿನ ಕಾರು ನಿರ್ಮಾಣವಾಗಲಿದೆ.

ಲಾಂಚ್ ಸಮಯ: 2014 ಮಧ್ಯಂತರ ಅವಧಿ

ಹ್ಯುಂಡೈ ಸಾಂಟಾಫೆ

ಹ್ಯುಂಡೈ ಸಾಂಟಾಫೆ

ಹೊಸ ಲುಕ್ ಪಡೆಯಲಿರುವ ಹ್ಯುಂಡೈ ಸಾಂಟಾ ಫೆ ಕೂಡಾ ಮುಂದಿನ ವರ್ಷಾರಂಭದಲ್ಲಿ ಲಾಂಚ್ ಆಗುವ ಎಲ್ಲ ಸಾಧ್ಯತೆಗಳಿವೆ. ಹ್ಯುಂಡೈ ಫ್ಲೂಯಿಡಿಸ್ ಡಿಸೈನ್ ಕಾನ್ಸೆಪ್ಟ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರೀಮಿಯಂ ಎಸ್‌ಯುವಿ 25 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಲಾಂಚ್ ಸಮಯ: 2014 ವರ್ಷಾರಂಭದಲ್ಲಿ
ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ

ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ

ಹೆಕ್ಸಾ ಸ್ಪೇಸ್ ಫಾರ್ಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2014ರಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಇದು ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದೆ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ಹ್ಯುಂಡೈ ಕಾಂಪಾಕ್ಟ್ ಕಾರು 2014 ವರ್ಷಾಂತ್ಯದಲ್ಲಿ ಪ್ರವೇಶಿಸಿದರೂ ಅಚ್ಚರಿಯೇನಿಲ್ಲ.

ಲಾಂಚ್ ಸಮಯ: 2014
ಹ್ಯುಂಡೈ ಗ್ರಾಂಡ್ ಐ10 ಕಾಂಪಾಕ್ಟ್ ಸೆಡಾನ್

ಹ್ಯುಂಡೈ ಗ್ರಾಂಡ್ ಐ10 ಕಾಂಪಾಕ್ಟ್ ಸೆಡಾನ್

ಅದೇ ಹೊತ್ತಿಗೆ ಹ್ಯುಂಡೈ ಐ10 ಕಾಂಪಾಕ್ಟ್ ಸೆಡಾನ್ ಕಾರು ಭಾರತಕ್ಕೆ ಲಗ್ಗೆಯಿಡಲು ತೆರೆಮರೆಯಲ್ಲಿ ಸಜ್ಜಾಗುತ್ತಿದೆ. ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಹಾಗೂ ಮಾರುತಿ ಡಿಜೈರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ.

ಲಾಂಚ್ ಸಮಯ: ಜುಲೈ 2014

ಹ್ಯುಂಡೈ ವೆಲೊಸ್ಟೆರ್

ಹ್ಯುಂಡೈ ವೆಲೊಸ್ಟೆರ್

2012ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹ್ಯುಂಡೈನಿಂದ ಪರಿಚಯವಾಗಿರುವ ಇನ್ನೊಂದು ಪ್ರೀಮಿಯಂ ಎಸ್‌ಯುವಿ ಕಾರು ವೆಲೊಸ್ಟರ್, ಮುಂದಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭಿಸಿಲ್ಲ.

ಲಾಂಚ್ ಸಮಯ: ಅಧಿಕೃತವಾಗಿಲ್ಲ

Most Read Articles

Kannada
English summary
Over the next One and half years Hyundai has plans to bring in at least three confirmed launches and three more are in the pipeline. Here’s a look at what to expect from Hyundai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X