ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

By Nagaraja

ಕೇವಲವೊಂದು ಮೃದುವಾದ ಪುಟ್ಟ ಹಕ್ಕಿಯೊಂದು ಢಿಕ್ಕಿ ಹೊಡೆದ ಮಾತ್ರಕ್ಕೆ ದೈತ್ಯಕಾರಾದ ವಿಮಾನ ಪತನವಾಗುವುದಾದರೂ ಹೇಗೆ? ಇದು ನಮ್ಮ ನಿಮ್ಮಲ್ಲೆರಲ್ಲೂ ಮೂಡುವ ಸಹಜವಾದ ಪ್ರಶ್ನೆ. ಇದರ ಇಂದಿರುವ ತಾಂತ್ರಿಕ ದೋಷಗಳೇನು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ.

Also Read: ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರಂತ

ಆಕಾಶವೆಂಬ ನಿಸರ್ಗದ ಮಡಿಲಲ್ಲಿ ಸ್ವಚ್ಚಂದವಾಗಿ ವಿಹರಿಸುವ ಹಕ್ಕಿಗಳ ಪ್ರದೇಶವನ್ನು ಮಾನವನು ತನ್ನ ಸ್ವಾರ್ಥಕ್ಕಾಗಿ ವಶಪಡಿಕೊಂಡಿದ್ದಾನೆ. ಆಕಸ್ಮಿಕವಾಗಿ ನಡೆಯುವ ಇಂತಹ ಘಟನೆಯಿಂದಾಗಿ ವಿಮಾನಗಳು ಪತನದಂತಹ ದುರಂತ ಘಟನೆಗಳು ಹಲವಾರು ಬಾರಿ ಘಟಿಸಿ ಹೋಗಿವೆ. ಅಷ್ಟಕ್ಕೂ ಇದರ ಹಿಂದಿರುವ ವರ್ಮವೇನು ಬನ್ನಿ ಓದೋಣ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ದೂರ ಸಂಚಾರದ ಅಗತ್ಯಗಳಿಗಾಗಿ ಮಾನವ ನಿರ್ಮಿತ ವಿಮಾನಗಳನ್ನು ಬಳಸಲಾಗುತ್ತದೆ. ಹೀಗೆ ಹಾರಾಡಲು ಅಥವಾ ನಿಲುಗಡೆಗೊಳ್ಳಲು ಸಜ್ಜಾಗಿರುವ ವಿಮಾನಗಳಿಗೆ ಸಾಮಾನ್ಯವಾಗಿ ಹಕ್ಕಿಗಳು ಆಕಸ್ಮಿಕವಾಗಿ ಢಿಕ್ಕಿಯಾಗುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ವಿಮಾನ ಭದ್ರತೆಗಳಿಗೆ ಹಕ್ಕಿ ಢಿಕ್ಕಿ ಪ್ರಕರಣವು ಭಾರಿ ಪ್ರಮಾಣದ ಅಪಾಯವನ್ನುಂಟು ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಕಾರಣಕ್ಕಾಗಿ ಆಧುನಿಕ ವಿಮಾನಗಳಲ್ಲಿ ಅತಿ ಹೆಚ್ಚು ಭದ್ರತೆಯನ್ನು ಅನುಸರಿಸಲಾಗುತ್ತದೆ. ಇದರಿಂದಾಗಿ ಹಕ್ಕಿಗಳ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವುದರ ಜೊತೆಗೆ ವಿಮಾನ ಪತನವಾಗುವ ಭೀತಿಯೂ ಎದುರಾಗುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಆಧುನಿಕ ಯುಗದಲ್ಲಿ ಹಕ್ಕಿ ಢಿಕ್ಕಿ ಪ್ರಕರಣದಲ್ಲಿ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಗಿದೆ. ಇದಕ್ಕಿರುವ ಪ್ರಮುಖ ಕಾರಣ ಭದ್ರತೆಯಲ್ಲಿ ಅನುಸರಿಸಲಾಗಿರುವ ನಾವೀನ್ಯ ತಂತ್ರಗಾರಿಕೆಯಾಗಿದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಬಹುತೇಕ ಪ್ರಕರಣಗಳಲ್ಲಿ ಶರವೇಗದಲ್ಲಿ ಸಂಚರಿಸುವ ವಿಮಾನಗಳ ರೆಕ್ಕೆಗಳಿಗೆ ಢಿಕ್ಕಿಯಾದಾಗ ದುರಂತಗಳು ಸಂಭವಿಸುತ್ತದೆ. ಇದರಿಂದಾಗಿ ವಿಮಾನಗಳ ಎಂಜಿನ್ ಪ್ರವೇಶ ದ್ವಾರಗಳಿಗೆ ತಾಂತ್ರಿಕ ದೋಷವನ್ನುಂಟು ಮಾಡುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಸಾಮಾನ್ಯವಾಗಿ ಕಡಿಮೆ ಎತ್ತರದಲ್ಲಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆ ಹಕ್ಕಿ ಢಿಕ್ಕಿ ಪ್ರಕರಣ ಕಂಡುಬರುತ್ತದೆ. ಹಾಗಿದ್ದರೂ ಸಮುದ್ರ ತಲದಿಂದ 6000ದಿಂದ 9000 ಮೀಟರ್ ಎತ್ತರದಲ್ಲೂ ಇಂತಹ ಘಟನೆ ಸಂಭವಿಸಿರುವುದಕ್ಕೆ ನಿದರ್ಶನಗಳಿವೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಐವರಿ ಕೋಸ್ಟ್ ವಾಯು ವಲಯದಲ್ಲಿ 11,300 ಮೀಟರ್ ಎತ್ತರದಲ್ಲಿ ಸಂಚರಿಸುತ್ತಿದ್ದ ವಿಮಾನವೊಂದು Rüppell's vulture ಎಂಬ ಹಕ್ಕಿಗೆ ಢಿಕ್ಕಿಯಾದ ಪರಿಣಾಮ ಸಂಭವಿಸಿದ ದುರಂತವು ಇದುವರೆಗಿನ ಅತಿ ಎತ್ತರದಲ್ಲಿ ದಾಖಲಾಗಿರುವ ಹಕ್ಕಿ ಢಿಕ್ಕಿ ಪ್ರಕರಣವಾಗಿದೆ. ಹಾಗಿದ್ದರೂ ಶೇಕಡಾ 90ರಷ್ಟು ಪ್ರಕರಣಗಳು ವಿಮಾನ ನಿಲ್ದಾಣದ ಸಮೀಪವೇ ಸಂಭವಿಸುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಹಕ್ಕಿ ಢಿಕ್ಕಿಯಿಂದಾಗಿ ವಿಮಾನ ಹೇಗೆ ಪತನವಾಗುತ್ತದೆ ಎಂಬುದರ ಕುರಿತಾಗಿ ನಿಖರವಾಗಿ ತಿಳಿಯಬೇಕಾದರೆ ನಾವು ಭೌತಶಾಸ್ತ್ರದಲ್ಲಿ ಕಂಡುಬರುವ ಕೈನಾಟಿಕ್ ಸಿದ್ಧಾಂತದ ಮೊರೆ ಹೋಗಬೇಕಾಗುತ್ತದೆ. ವಿಮಾನ ಟೇಕ್ ಆಫ್ ಆಗುವಾಗ ಗಂಟೆಗೆ 275 ಕಿ.ಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಆಕ್ಸಿಲೇಟರ್ ನೀಡಬೇಕಾಗುತ್ತದೆ. ಇದರಿಂದಾಗಿ ಗತಿ ವರ್ಧಿಸಲು ಭಾರಿ ಪ್ರಮಾಣದ ಚೈತನ್ಯವನ್ನು ಉತ್ಪಾದಿಸಲಾಗುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಈ ಸಂದರ್ಭದಲ್ಲಿ ಜೆಟ್ ವಿಮಾನದ ಎಂಜಿನ್ ಫ್ಯಾನ್ ಬ್ಲೇಡ್ ಗಳು ಒಂದು ನಿಮಿಷಕ್ಕೆ 3000ದಿಂದ 4000ದಷ್ಟು ವೇಗದಲ್ಲಿ ತಿರುಗುತ್ತದೆ. ಅಲ್ಲದೆ ತುದಿಯಲ್ಲಿರುವ ಟರ್ಬೊಫ್ಯಾನ್ ಬ್ಲೇಡ್ ಇನ್ನು ವೇಗವಾಗಿ ಅಂದರೆ ಗಂಟೆಗೆ 1000ಕ್ಕೂ ಹೆಚ್ಚೂ ವೇಗದಲ್ಲಿ ತಿರುಗುತ್ತದೆ. ಈ ಸಂದರ್ಭದಲ್ಲಿ ಫ್ಯಾನ್ ಬ್ಲೇಡ್ ಗಳಿಗೆ ಹಕ್ಕಿಯೊಂದು ಢಿಕ್ಕಿಯಾದಾಗ ಭಾರಿ ಪ್ರಮಾಣದ ಶಕ್ತಿ ವರ್ಗಾವಣೆಯಾಗುವ ಕಾರಣ ವಿಮಾನದ ಎಂಜಿನ್ ಗಳಿಗೆ ದೋಷವುಂಟಾಗುವ ಸಾಧ್ಯತೆ ಜಾಸ್ತಿಯಾಗುತ್ತದೆ. ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿಯು ಹೊತ್ತಿಕೊಳ್ಳುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಕೆಲವೊಂದು ಪ್ರಕರಣಗಳಲ್ಲಿ ಹಕ್ಕಿ ಢಿಕ್ಕಿ ಪ್ರಕರಣದಿಂದಾಗಿ ವಿಮಾನ ಸಮತೋಲವು ತಪ್ಪುತ್ತದೆ. ಇದು ಕೆಲ ಹೊತ್ತು ಆತಂಕದ ಕ್ಷಣಗಳನ್ನು ಸೃಷ್ಟಿ ಮಾಡುತ್ತದೆ. ಎವಿಯೇಷನ್ ಸೇಫ್ಟಿ ನೆಟ್ ವರ್ಕ್ ವರದಿಯ ಪ್ರಕಾರ 1955ರಿಂದ 2007ರ ವರೆಗೆ 51 ಹಕ್ಕಿ ಢಿಕ್ಕಿ ಪ್ರಕರಣಗಳು ದಾಖಲಾಗಿವೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಇನ್ನೊಂದೆಡೆ ಅಂತರಾಷ್ಟ್ರೀಯ ಹಕ್ಕಿ ಢಿಕ್ಕಿ ಸಮಿತಿಯ ವರದಿಯ ಪ್ರಕಾರ 1959ರಿಂದ 1999ರ ಅವಧಿಯಲ್ಲಿ ಹಕ್ಕಿ ಢಿಕ್ಕಿಯಿಂದಾಗಿ 283ರಷ್ಟು ಮಿಲಿಟರಿ ವಿಮಾನಗಳು ಪತನಗೊಂಡಿವೆ. ಅಂದರೆ ರಕ್ಷಣಾ ವಲಯಕ್ಕೆ ಅತಿ ಹೆಚ್ಚಿನ ನಷ್ಟವನ್ನುಂಟು ಮಾಡಿದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಇನ್ನು ಆಧುನಿಕ ಜೆಟ್ ವಿಮಾನಗಳಲ್ಲಿ ಹಕ್ಕಿ ಢಿಕ್ಕಿ ಪ್ರಕರಣವನ್ನು ತಡೆಯಲು ರಾಸಾಯನಿಕ ಸಿಂಪಡನೆಯನ್ನು ಮಾಡಲಾಗುತ್ತದೆ. ಇನ್ನು ಹಕ್ಕಿಗಳನ್ನು ದೂರವಿಡಲು ದೊಡ್ಡ ಮಟ್ಟದ ಶಬ್ದದ ಬಳಕೆಯನ್ನು ಮಾಡಲಾಗುತ್ತದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಫೆಡರಲ್ ಎವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ ಹಕ್ಕಿ ಢಿಕ್ಕಿ ಪ್ರಕರಣದಿಂದಾಗಿ ಅಮೆರಿಕ ವಿಮಾನಯಾನ ಸಂಸ್ಥೆಗೆ ವಾರ್ಷಿಕವಾಗಿ 4000 ಮಿಲಿಯನ್ ಅಮೆರಿಕನ್ ಡಾಲರ್ ಗಳ ನಷ್ಟವುಂಟಾಗುತ್ತಿದೆ. ಅಲ್ಲದೆ 1988ರ ಬಳಿಕ ಜಾಗತಿಕವಾಗಿ 200 ಜೀವಗಳ ಬಲಿ ತೆಗೆದುಕೊಂಡಿದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಇತಿಹಾಸದತ್ತ ಗಮನ ಹಾಯಿಸಿದಾಗ ಹಕ್ಕಿ ಢಿಕ್ಕಿ ಪ್ರಕರಣವು ಮೊದಲ ಬಾರಿಗೆ 1905ರಲ್ಲಿ ವ್ರೈಟ್ ಬದರ್ಸ್ ಮೇಲಾಗಿತ್ತು. ತದಾ ಬಳಿಕ ಇಂತಹ ಹಲವಾರು ಘಟನೆಗಳು ಆಗಿ ಹೋಗಿವೆ.

ವಿಮಾನಕ್ಕೆ ಹಕ್ಕಿ ಢಿಕ್ಕಿ - ವಿಡಿಯೋ ವೀಕ್ಷಿಸಿ

Most Read Articles

Kannada
Read more on ವಿಮಾನ plane
English summary
Bird strike: Why are birds such a threat to aircraft?
Story first published: Saturday, November 28, 2015, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X