Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿರುಬಿಸಿಲಿನಲ್ಲಿ ಕಾರುಗಳ ಎಸಿ ಚೆನ್ನಾಗಿ ಕಾರ್ಯನಿರ್ವಹಿಸಲು ಈ ಟಿಪ್ಸ್ ಅನುಸರಿಸಿ ನೋಡಿ..!
ದೇಶಾದ್ಯಂತ ಬಿಸಿಲಿನ ತಾಪಮಾನವು ಗರಿಷ್ಠಮಟ್ಟದಲ್ಲಿ ದಾಖಲಾಗುತ್ತಿದ್ದು, ಎಸಿ ಇಲ್ಲದೇ ವಾಹನಗಳಲ್ಲಿ ಸವಾರಿ ಬೇಡವೇ ಬೇಡ ಎನ್ನಿಸುತ್ತೆ. ಇನ್ನು ಕೆಲವು ಕಾರುಗಳಲ್ಲಿ ಎಸಿ ಇದ್ದರೂ ಸಹ ಸರಿಯಾಗಿ ಕಾರ್ಯನಿರ್ವಹಣೆ ಸಾಧ್ಯವಾಗದ್ದಿದ್ದಾಗ ವಾಹನ ಸವಾರಿಯಲ್ಲಿ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಎಸಿ ಸೌಲಭ್ಯವನ್ನು ಪರಿಣಾಮಕಾರಿ ಬಳಕೆ ಮಾಡುವುದು ಹೇಗೆ ಅನ್ನುವುದನ್ನು ನಾವು ಇಲ್ಲಿ ಚರ್ಚಿಸಿದ್ದೇವೆ.

ಜಾಗತಿಕ ತಾಪಮಾನದಿಂದ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಗರಿಷ್ಠ ಪ್ರಮಾಣದ ಉಷ್ಠಾಂಶ ದಾಖಲಾಗುತ್ತಿದ್ದು, ಎಸಿ ಸೌಲಭ್ಯವಿಲ್ಲದೆ ವಾಹನ ಪ್ರಯಾಣ ಕಷ್ಟಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಇನ್ನು ಕೆಲವು ಕಾರುಗಳಲ್ಲಿ ಎಸಿ ಇದ್ದರೂ ಸರಿಯಾಗಿ ಕಾರ್ಯನಿರ್ವಹಣೆ ಮಾಡುವುದೇ ಇಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಕಾರಿನ ಎಸಿ ಯುನಿಟ್ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಈ ಪ್ರಶ್ನೆಗೆ ಇಂದಿನ ಈ ಲೇಖನದಲ್ಲಿ ಕೆಲವು ಟಿಪ್ಸ್ ಹಂಚಿಕೊಳ್ಳಲಾಗಿದೆ.

ನೆರಳಿನಡಿ ಪಾರ್ಕ್ ಮಾಡಿ..!
ನಿಮ್ಮ ಕಾರನ್ನು ಸಾಧ್ಯವಾದಷ್ಟು ತಣ್ಣಗಿರಿಸಲು ನೆರಳು ಇರುವ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಯಾಕೆಂದ್ರೆ ಮರದ ಅಡಿಯಲ್ಲಿ ಅಥವಾ ಬೆಸ್‌ಮೆಂಟ್ ಪಾರ್ಕಿಂಗ್ ಸ್ಲಾಟ್‌ನಲ್ಲಿ ಪಾರ್ಕ್ ಮಾಡುವುದರಿಂದ ಕಾರು ತಪ್ಪಾಗಿರುವುದಲ್ಲದೇ ಎಸಿ ಮೇಲೆ ಹೆಚ್ಚು ಒತ್ತಡ ಬೀಳಲಾರದು.

ಇದರಿಂದ ಕಾರು ಸ್ಟಾರ್ಟ್ ಮಾಡಿದ ತಕ್ಷಣ ಕಾರಿನ ಒಳಭಾಗವು ಕೆಲವೇ ನಿಮಿಷಗಳಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗುತ್ತೆ. ಇಲ್ಲವಾದಲ್ಲಿ ಬಿಸಿಲಿನಲ್ಲಿ ಕಾಯ್ದ ಕಾರಿನಲ್ಲಿ ಎಸಿಯನ್ನು ಎಷ್ಟೇ ಜೋರಾಗಿ ಇಟ್ಟರೂ ತಣ್ಣನೆಯ ಗಾಳಿ ಬರಲು ಧೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ.

ವಿಂಡ್ ಸ್ಕ್ರೀನ್ ರಿಪ್ಲೆಕ್ಟರ್‍ಗಳನ್ನು ಬಳಸಿ..!
ಈ ಹಿಂದಿನಿಂದಲೂ ಬಹುತೇಕ ಕಾರು ಮಾಲೀಕರು ಈ ಸಲಹೆಯನ್ನು ಪಾಲಿಸುತ್ತಿದ್ದರು. ಕಾರಿನ ಮುಂಭಾಗ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ವಿಂಡ್ ಸ್ಕ್ರೀನ್‌ಗಳಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‍ಗಳನ್ನು ಅಂಟಿಸುವುದು ಕೂಡಾ ಬಿಸಿಲ ತಾಪವನ್ನು ಕಡಿಮೆ ಮಾಡಬಹುದಾಗಿದೆ.

ಹೀಗಾಗಿ ಶಾಖವನ್ನು ತಡೆಯಲು ವಿಂಡ್ ಸ್ಕ್ರೀನ್‌ಗಳಿಗೆ ರಿಫ್ಲೆಕ್ಟರ್‍ಗಳನ್ನು ಬಳಕೆ ಮಾಡಬಹುದಾಗಿದ್ದು, ಇವು ಸೂರ್ಯ ಶಾಖವನ್ನು ಕಾರಿನ ಒಳಭಾಗಕ್ಕೆ ಬಿಡದಂತೆ ತಡೆಯುವುದಲ್ಲದೇ ಎಸಿ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಮಾಡುತ್ತದೆ.

ಕಿಟಕಿ ಪೂರ್ತಿ ಮುಚ್ಚುವುದು ಬೇಡ..!
ಬಹುತೇಕ ಕಾರು ಮಾಲೀಕರು ಕಾರ್ ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಬಿಸಿಯಾಗಿ ಮಾರ್ಪಾಡುತ್ತದೆ.

ಹೀಗಾಗಿ ಬಿಸಿಲು ಇರುವ ಜಾಗದಲ್ಲಿ ಪಾರ್ಕ್ ಮಾಡಿ ಅಲ್ಲಿಯೇ ಇರುವುದಾದರೇ ಪೂರ್ತಿಯಾಗಿ ವಿಂಡ್ ಮುಚ್ಚದೇ ತುಸು ತೆರೆಯುವುದು ಒಳಿತು. ಇಲ್ಲವಾದಲ್ಲಿ ಕಾರ್ ಪಾರ್ಕ್ ಬೇರೆಯಡೆ ಹೋಗುವುದಾದರೇ ನೆರಳಿನಡಿಯೇ ಪಾರ್ಕ್ ಮಾಡಿಬಿಡುವುದು ಸೂಕ್ತ.
MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಎಸಿ ಆನ್ ಮಾಡುವ ಮುನ್ನ..!
ಹೆಚ್ಚಿನ ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಈ ಟಿಪ್ಸ್ ತಪ್ಪದೇ ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಬಿಸಿಲಿನಲ್ಲಿ ಪಾರ್ಕ್ ಮಾಡಿ ತಕ್ಷಣವೇ ಕಾರು ಪ್ರಯಾಣ ಮಾಡುವ ಸಂದರ್ಭವಿದ್ದಾಗ ಎಸಿ ಆನ್ ಮಾಡುವ ಪೂರ್ತಿಯಾಗಿ ಕಿಟಿಕಿಗಳನ್ನು ಕ್ಲೋಸ್ ಮಾಡಲೇಬೇಡಿ.

ಯಾಕೆಂದ್ರೆ, ಕಾರು ಚಾಲನೆ ಶುರು ಮಾಡಿದ ತಕ್ಷಣವೇ ಎಸಿ ಆನ್ ಮಾಡಿದಲ್ಲಿ ಒಳಭಾಗವನ್ನು ತಣ್ಣಗಾಗಿಸಲು ಎಸಿಗೆ ಹೆಚ್ಚಿನ ಸಮಯಬೇಕಾಗುತ್ತದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನವೇ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕೆ ಇಳಿಸಿ ಕೆಲವು ನಿಮಿಷ ಹೊರಗಿನ ಗಾಳಿಯಲ್ಲಿ ಕಾರಿನ ಒಳಭಾಗವನ್ನು ತಣ್ಣಗಾಗಲು ಬೀಡಿ. ತದನಂತರವಷ್ಟೇ ಕಿಟಿಕಿ ಮುಚ್ಚಿ ಎಸಿ ಆನ್ ಮಾಡಿ ನೋಡಿ.
MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಿ
ಬೇಸಿಗೆ ಶುರುವಾಗುವುದಕ್ಕೂ ಮುನ್ನ ಮನೆಗಳಲ್ಲಿ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತಿರೋ ಹಾಗೆಯೆ ಕಾರಿನ ಎಸಿಯನ್ನು ಕೂಡಾ ಕಾಲಕಾಲಕ್ಕೆ ಚೆಕ್ ಮಾಡಿಸುವುದನ್ನು ಮರೆಯಬಾರದು. ಇದರಿಂದ ದೂರ ಪ್ರಯಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.