ಕಾರಿನಲ್ಲಿ ಮಕ್ಕಳ ಕೇರ್ ಹೇಗೆ? ಇಲ್ಲಿದೆ ಸೇಫ್ಟಿ ಟಿಪ್ಸ್

ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಚಲಾಯಿಸುವಾಗ ಬಹಳ ಎಚ್ಚರ ವಹಿಸಬೇಕಾಗುತ್ತದೆ. ತುಂಟ ಮಕ್ಕಳು ತುಂಟಾಟ ಮಾಡುತ್ತಿರುವಾಗ ಅನೇಕ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಇನ್ನು ವಿರಾಮ ದಿನಗಳಲ್ಲಿ ತಮ್ಮ ಕುಟಂಬದ ಜತೆ ದೂರ ಪ್ರಯಾಣಕ್ಕೆ ತೆರಳುವುದು ನಗರ ಜೀವನದ ಸಾಮಾನ್ಯ ಪ್ರವೃತ್ತಿಯಾಗಿರುತ್ತದೆ. ಹಾಗಿರುವಾಗ ಬನ್ನಿ ಕಾರಿನಲ್ಲಿ ಚಲಿಸುವಾಗ ಮಕ್ಕಳ ಕೇರ್ ಬಗ್ಗೆ ಫೋಟೊ ಫೀಚರ್ ಮೂಲಕ ತಿಳಿಯೋಣ...

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟದ ವಿಚಾರ. ಯಾಕೆಂದರೆ ಮಕ್ಕಳಿಗೆ ಖುಷಿ ನೀಡುವ ಅಂಶಗಳು ಕೆಲವೊಂದು ಬಾರಿ ನಿಮ್ಮ ತೊಂದರೆಗೆ ಕಾರಣವಾಗಬಹುದು. ಹಾಗಾಗಿ ಹೆತ್ತವರು ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಸೀಟ್‌ ಬೆಲ್ಟ್‌ನ ಸುರಕ್ಷಾ ಕವಚ ಹಾಕಲು ಯಾವುದೇ ಕಾರಣಕ್ಕೂ ಮರೆಯಬಾರದು. ಮಕ್ಕಳು ಹಿಂದೆ ಕುಳಿತಿದ್ದಾರೆ ಎಂಬ ಕಾರಣಕ್ಕಾಗಿ ಸೀಟ್ ಬೆಲ್ಟ್ ಧರಿಸದೇ ಇರುವುದು ಅಪಾಯ ಅಹ್ವಾನಿಸಿದಂತಾಗುತ್ತದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಇಂದಿನ ಆಧುನಿಕ ಯುಗದಲ್ಲಿ ಬಹುತೇಕ ಕಾರು ಕಂಪನಿಗಳು ಮಕ್ಕಳಿಗಾಗಿ ವಿಶೇಷ ಆಕ್ಸೆಸರಿಗಳು ಪ್ರದಾನ ಮಾಡುತ್ತಿವೆ. ಇವುಗಳಲ್ಲಿ ಚೈಲ್ಡ್ ಸೇಫ್ಟಿ ಸೀಟ್‌ಗಳು ಪ್ರಮುಖವಾಗಿವೆ. ಇದನ್ನು ಆಳವಡಿಸುವುದು ಕೂಡಾ ತುಂಬಾನೇ ಸರಳವಾಗಿದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಕಾರಿನೊಳಗೆ ಕೂತುಕೊಂಡ ಮಗು ಬಾಹ್ಯ ಪ್ರದೇಶದತ್ತ ತಕ್ಷಣ ಆಕರ್ಷಿತವಾಗುತ್ತವೆ. ಹಾಗಾಗಿ ವಿಂಡೋ ಸ್ವಲ್ಪ ತೆರೆದಿರಿಸಬಹುದು. ಇದರಿಂದ ವೆಂಟಿಲೇಷನ್ ಕೂಡಾ ಸಿಗಲಿದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಕಾರಿನೊಳಗೆ ಸಂಚರಿಸುವಾಗ ಹಿಂದುಗಡೆ ಇಬ್ಬರು ಮಕ್ಕಳಿರುವಾಗ ದೊಡ್ಡವನಲ್ಲಿ ಚಿಕ್ಕವನ ಗಮನ ವಹಿಸುವಂತೆ ತಿಳಿಸಬೇಕು. ಆದರೆ ಇಬ್ಬರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಳ್ಳಬೇಕು.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಇನ್ನು ಕೆಲವು ಬಾರಿ ಕಾರಿನಲ್ಲಿ ಚಲಿಸುವ ತಾಯಿಯಂದಿರಗೆ ಒಂದು ಅಭ್ಯಾಸವಿರುತ್ತದೆ. ಮಕ್ಕಳನ್ನು ಸೀಟ್‌ನಲ್ಲಿ ಕುರಿಸುವ ಬದಲು ತಮ್ಮ ಮಡಿಲಲ್ಲಿ ಕೂರಿಸುತ್ತಾರೆ. ಆದರೆ ತಜ್ಞರ ಪ್ರಕಾರ ಹೀಗೆ ಮಾಡುವುದು ತಪ್ಪಾಗಿದ್ದು, ಅಪಘಾತದ ವೇಳೆ ಮಗು ಸೇರಿದಂತೆ ತಾಯಿಗೂ ಅಪಾಯ ಎದುರಾಗಲಿದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಇನ್ನು ಕಾರಿನ ಕ್ಲಚ್, ಗೇರ್ ಅಥವಾ ಕೀಗಳಲ್ಲಿ ಮಕ್ಕಳು ತುಂಟಾಟ ಆಡದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಮಗುವನ್ನು ಕಾರಿನಲ್ಲಿ ಕೂರಿಸಿ ಒಬ್ಬರೇ ಇಳಿದು ಹೋಗಬಾರದು.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಇನ್ನು ಡ್ರೈವಿಂಗ್ ವೇಳೆ ತಂದೆ ತಾಯಿಯ ಗಮನ ಮಕ್ಕಳ ಮೇಲಿರಬೇಕು. ಹಾಗಂತ ಮಕ್ಕಳ ತುಂಟಾಟ ನೋಡಿಕೊಂಡು ಮೈ ಮರೆಯಬಾರದು. ಇದರಿಂದ ಅಪಘಾತ ಅಹ್ವಾನಿಸಿದಂತಾಗುತ್ತದೆ.

ಕಾರಿನಲ್ಲಿ ಮಕ್ಕಳ ಕೇರ್ ಹೇಗೆ?

ಮೇಲೆ ಸೂಚಿಸಲಾದ ಈ ಎಲ್ಲ ಸಣ್ಣ ಸಣ್ಣ ವಿಚಾರಗಳತ್ತವೂ ಹೆಚ್ಚು ಗಮನ ವಹಿಸಬೇಕಾಗುತ್ತದೆ. ಇದೀಗ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Safety for a child while driving is become a big responsibility for any parents. But Don't worry, here we are going to give important tips for child safety while driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X