ಅನಿವರ್ಸರಿ ಸಂಭ್ರಮದಲ್ಲಿದ್ದವನಿಗೆ ಹೆಂಡತಿ ಹೆಣ ಕಾಣಲಿಲ್ಲ!

Posted By: * ಆಟೋ ಬಾಬಾ
Do Not Ignore Road Accidents
ಅಂದು ಆತ ಸಡಗರದಲ್ಲಿದ್ದ. ಮದುವೆಯ ಅನಿವರ್ಸರಿ. ಮುದ್ದಿನ ಮಡದಿಯೊಂದಿಗೆ ಡಿನ್ನರಿಗೆ ಹೊರಕ್ಕೆ ಹೋಗಬೇಕು. ಒಂದು ಫಿಲ್ಮ್ ನೋಡಬೇಕು. ಮೊದಲ ಅನಿವರ್ಸರಿ ಮರೆಯಲು ಸಾಧ್ಯವಾಗದಂತೆ ಸೆಲೆಬ್ರೆಟ್ ಮಾಡಬೇಕು. ಹೀಗೆ ಕನಸು ಕಾಣುತ್ತ ಕಾರಿನಲ್ಲಿ ರೆಡ್ ಸರ್ಕಲ್ ಬಳಿ ಸಾಗುತ್ತಿದ್ದವನನ್ನು "ಧಡಿಲ್" ಅನ್ನೋ ಸದ್ದು ವಾಸ್ತವಕ್ಕೆ ಕರೆತಂದಿತು.

ಹಿಂತುರುಗಿ ನೋಡಿದಾಗ ಲಾರಿಯೊಂದು ಟ್ಯಾಕ್ಸಿ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಮಾಯವಾಗಿತ್ತು. ಸುತ್ತಮುತ್ತಲು ಹೆಚ್ಚು ಜನರಿರಲಿಲ್ಲ. ಕಾರು ನಿಲ್ಲಿಸಿ ಈತ ಒಂದು ಕ್ಷಣ ಯೋಚಿಸಿದ. ಈ ಅಪಘಾತ ನೋಡಿ ಮೂಡ್ ಕೆಡಿಸಿಕೊಳ್ಳುವುದೇಕೆ, ಅವರಿಗೆ ನೆರವಾಗಲು ಹೋದ್ರೆ ಅನಿವರ್ಸರಿ ಕಾರ್ಯಕ್ರಮವೇ ಹಾಳಾದೀತು. ಬೇರೆ ಯಾರಾದ್ರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ಕಾರನ್ನು ಮನೆಯತ್ತ ಚಲಾಯಿಸಿದ. ದಾರಿಯಲ್ಲಿ ಒಂದು ಬಾಟಲ್ ಕೋಕ್, ಹಣ್ಣುಹಂಪಲುಗಳನ್ನು ಖರೀದಿಸಿದ.

ಮನೆಯ ಬಾಗಿಲಿಗೆ ಬೀಗ ಹಾಕಿತ್ತು. ಪಕ್ಕದ ಮನೆಯವರಲ್ಲಿ ಕೇಳಿದಾಗ ಪತ್ನಿ ದೇವಸ್ಥಾನಕ್ಕೆ ಹೋದರೆಂದು ಹೇಳಿದ್ರು. ಪತ್ನಿ ನಂಬರಿಗೆ ನಾಲ್ಕೈದು ಬಾರಿ ಕರೆ ಮಾಡಿದಾಗ ರಿಸೀವ್ ಮಾಡಲಿಲ್ಲ. ಈಗ ಬರಬಹುದೆಂದು ಅಲ್ಲೇ ಕುಳಿತ. ಸ್ವಲ್ಪ ಸಮಯದಲ್ಲಿ ಪತ್ನಿ ಮೊಬೈಲಿನಿಂದ ಬಂದ ಪೊಲೀಸ್ ಕರೆ ಆತನನ್ನು ಬೆಚ್ಚಿಬೀಳಿಸಿತ್ತು. ಪತ್ನಿ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಳು.

ಈಗಷ್ಟೇ ರೆಡ್ ಸರ್ಕಲ್ ಬಳಿ ಅಪಘಾತವಾಗಿ ಈತನ ಪತ್ನಿ ಸಾವನ್ನಪ್ಪಿದ್ದಳು. ಹತ್ತು ನಿಮಿಷ ಮುಂಚಿತವಾಗಿ ಕರೆತಂದಿದ್ದರೆ ಬದುಕುವ ಸಾಧ್ಯತೆ ಹೆಚ್ಚಿತ್ತು ಎಂದು ಡಾಕ್ಟರ್ ಹೇಳುತ್ತಿದ್ದರು. ಆತನಿಗೆ ಈಗಷ್ಟೇ ಅರ್ಧಗಂಟೆ ಮೊದಲ ರೆಡ್ ಸಿಗ್ನಲ್ ಬಳಿ ತಾನೂ ನೋಡಿಯು ನೋಡದಂತೆ ಬಂದ ಅಪಘಾತ ನೆನಪಾಗಿ ತಲೆಮೇಲೆ ಕೈಯಿಡಿದು ಕೆಳಗೆ ಕುಸಿದ.

ಯಾರಿಗೊತ್ತು ರಸ್ತೆ ಪಕ್ಕದಲ್ಲಿ ನಡೆಯುವ ಅಪಘಾತದಲ್ಲಿ ನಮ್ಮ ಹತ್ತಿರದವರು ಇರಬಹುದು. ಅಪರಿಚಿತರಾದರೂ ಅವರಿಗೆ ಸಹಾಯ ಮಾಡುವುದು ಧರ್ಮ. ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಪೊಲೀಸ್, ಕೋರ್ಟ್ ಕಿರಿಕಿರಿ ಯಾರಿಗೆ ಬೇಕಪ್ಪ ಎಂದು ಅಪಘಾತ ನೋಡಿಯೂ ನೋಡದವರಂತೆ ಹೋಗುವ ಜನರ ಮನೋಧರ್ಮವಿಂದು ಅಪಘಾತದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ನಂಬಲೇಬೇಕು.

ಆದರೆ ಈಗ ಕಾನೂನು ಬದಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲು ಚಿಕಿತ್ಸೆ ಒದಗಿಸಬೇಕು ಎಂದು ನ್ಯಾಯಾಲಯವೇ ಆದೇಶಿಸಿದೆ. ಇಂತಹ ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಬೇಕು. ಹತ್ತಿರದಲ್ಲಿ ಸರಕಾರಿ ಆಸ್ಪತ್ರೆ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಸಾಗಿಸಿ.

ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಥವಾ ಜೀವನ್ಮರಣದ ಸ್ಥಿತಿಯಲ್ಲಿದ್ದವರಿಗೆ ಪ್ರಥಮ ಚಿಕಿತ್ಸೆ ಅತ್ಯಂತ ಅಗತ್ಯ. ತಕ್ಷಣ ಅಂಬ್ಯುಲೆನ್ಸಿಗೆ ಕರೆ ಮಾಡುವುದು, ಸುತ್ತಮುತ್ತಲಿನ ಜನರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವುದು, ವಿಪರಿತವಾಗಿ ರಕ್ತ ಸೋರುತ್ತಿದ್ದರೆ ಇರೋ ಬಟ್ಟೆಯಿಂದಲೇ ಬ್ಯಾಂಡೇಜ್ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು.

ಯಾವಾಗಲೂ ನಮ್ಮ ಫೋನಿನಲ್ಲಿ ಎಮರ್ಜೆನ್ಸಿ ನಂಬರುಗಳನ್ನು ಸೇವ್ ಮಾಡಿಡಬೇಕು. ಪ್ರಥಮಚಿಕಿತ್ಸೆ ಕಿಟ್ ವಾಹನದಲ್ಲಿರಬೇಕು. ಇದು ಇಂತಹ ತುರ್ತು ಪರಿಸ್ಥಿತಿಯಲ್ಲಿ ನೆರವಾಗುತ್ತದೆ. ಮಾನವಿಯತೆ ಪ್ರತಿಯೊಬ್ಬರಲ್ಲೂ ಇರಬೇಕು. (ದಿನಕ್ಕೊಂದು ಸಲಹೆ)

English summary
The number of deaths due to road accidents are increasing drastically and the apathy of road users can be considered as one of the major reason for the high death rate. Many people do not bother about a road accident and continue driving You can help reduce this number just by giving basic first aid to the people who have suffered injuries and by calling up responsible authorities.
Story first published: Monday, February 27, 2012, 12:00 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more