ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ತಪ್ಪಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ವಿಶ್ವದಾದ್ಯಂತ ತೈಲ ಬೆಲೆ ಹೆಚ್ಚುತ್ತಿರುವ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲೂ ವಿದೇಶಿ ಕಂಪನಿಗಳೊಂದಿಗೆ ದೇಶೀಯ ಎಲೆಕ್ಟ್ರಿಕ್‌ ವಾಹನಗಳು ಪೈಪೋಟಿಯೊಂದಿಗೆ ಮಾರಾಟಗೊಳ್ಳುತ್ತಿವೆ. ಈ ನಡುವೆ ಕೆಲ ಎಲೆಕ್ಟ್ರಿಕ್‌ ವಾಹನಗಳಲ್ಲಿ ಬೆಂಕಿ ಕಾಣುಸಿಕೊಳ್ಳುತ್ತಿರುವುದು ಗ್ರಾಹಕರನ್ನು ಚಿಂತೆಗೀಡುಮಾಡಿದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಕಳೆದ ಕೆಲವು ತಿಂಗಳುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂಬ ವರದಿಗಳು ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇದು ಎಲೆಕ್ಟ್ರಿಕ್ ವಾಹನ ಕಂಪನಿಗಳ ಮಾರಾಟದಲ್ಲಿ ನಷ್ಟವನ್ನುಂಟು ಮಾಡುವುದಲ್ಲದೆ, ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರ ವಿಶ್ವಾಸವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಇಂತಹ ಘಟನೆಗಳಿಗೆ ಮುಖ್ಯ ಕಾರಣವೇನು ಎಂಬುದರ ಬಗ್ಗೆ ಸಂಶೋಧನೆ ಮಾಡಿರುವ ಐಐಟಿ ಗುವಾಹಟಿಯ ಸಂಶೋಧನಾ ತಂಡವು, ವಿದ್ಯುತ್ ಚಾಲಿತ ವಾಹನಗಳನ್ನು ಬೆಂಕಿಯಿಂದ ರಕ್ಷಿಸಲು ವಿಶೇಷ ವಿದ್ಯುತ್ ವಾಹನವನ್ನು ವಿನ್ಯಾಸಗೊಳಿಸಿದೆ, ಇದು ಭಾರತೀಯ ಪರಿಸರದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಈ ತಂಡದ ಪ್ರಕಾರ, ಇದು ಸ್ಟ್ಯಾಂಡರ್ಡ್ ಎಲೆಕ್ಟ್ರಿಕ್ ಪವರ್‌ಟ್ರೈನ್ ಆಗಿದೆ, ಆದ್ದರಿಂದ ಇದನ್ನು ಯಾವುದೇ ದ್ವಿಚಕ್ರ ಎಲೆಕ್ಟ್ರಿಕ್ ವಾಹನದಲ್ಲಿ ಬಳಸಬಹುದು. ಐಐಟಿ ಗುವಾಹಟಿಯ ಸಂಶೋಧಕರ ತಂಡವು ವಿವಿಧ ಭಾರತೀಯ ಪರಿಸ್ಥಿತಿಗಳ ಬಗ್ಗೆ ಆಳವಾದ ಸಂಶೋಧನೆ ಮತ್ತು ಮೌಲ್ಯಮಾಪನ ಮಾಡುವ ಮೂಲಕ ಹೊಸ ಪವರ್‌ಟ್ರೈನ್ ಅನ್ನು ವಿನ್ಯಾಸಗೊಳಿಸಿದೆ. ಈ ಪವರ್‌ಟ್ರೈನ್ ದೇಶದ ಯಾವುದೇ ಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು?

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣವೆಂದರೆ, ಈಗಿರುವ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಪರಿಸರಕ್ಕೆ ಸೂಕ್ತವಾಗಿ ನಿರ್ಮಾಣವಾಗುತ್ತಿಲ್ಲ ಎಂಬುದು ಐಐಟಿಯ ಸಂಶೋಧಕರ ಅಭಿಪ್ರಾಯ. ದೇಶದ ಬಹುತೇಕ ಎಲೆಕ್ಟ್ರಿಕ್ ವಾಹನ ಕಂಪನಿಗಳು ಇತರ ದೇಶಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಳಸುವ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತವೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಈ ಸಾಧನಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸುತ್ತಿಲ್ಲ, ಆದ್ದರಿಂದ ಅವು ಬೇಗನೆ ಹಾನಿಗೊಳಗಾಗುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಪವರ್‌ಟ್ರೈನ್‌ಗಳಲ್ಲಿ ಕಳಪೆ ವೈರಿಂಗ್ ಮತ್ತು ಬ್ಯಾಟರಿ ತಂತ್ರಜ್ಞಾನವು ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ದೇಶೀಯ ತಂತ್ರಜ್ಞಾನ ಹೆಚ್ಚು ಸುರಕ್ಷಿತ

ಐಐಟಿ ಗುವಾಹಟಿಯ ತಂಡವು ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಪವರ್‌ಟ್ರೈನ್ ಇಂದಿನ ಸ್ಕೂಟರ್‌ಗಳಲ್ಲಿ ಬಳಸುವ ಪವರ್‌ಟ್ರೈನ್ ಗಿಂತ ಹೆಚ್ಚು ಸುರಕ್ಷಿತವಾಗಿದೆ. ಈ ಪವರ್ ಟ್ರೈನ್‌ನ ಕಾರ್ಯಕ್ಷಮತೆಯು ಎಲ್ಲೆಡೆಯೂ ಒಂದು ರೀತಿಯಲ್ಲಿ ಕಾರ್ಯಾಚರಿಸುತ್ತದೆ. ಸ್ಕೂಟರ್ ಹಳ್ಳಿ ಅಥವಾ ನಗರದಲ್ಲಿ ಚಲಿಸುತ್ತಿರಲಿ, ಇದು ಎಲ್ಲೆಡೆ ಒಂದೇ ಶ್ರೇಣಿ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಸಂಶೋಧಕರು ಈ ಪವರ್‌ಟ್ರೈನ್‌ ಶಕ್ತಿ ದಕ್ಷತೆಯನ್ನು ಸಹ ಹೇಳಿಕೊಂಡಿದ್ದಾರೆ, ಇದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಶ್ರೇಣಿಯನ್ನು ನೀಡಲು ಸಹಾಯ ಮಾಡುತ್ತದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಮೂಂದಿನ ದಿನಗಳಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಯೋಜನೆಯು ದ್ವಿಚಕ್ರ ವಾಹನಗಳ ಮೇಲೆ ಮಾತ್ರ ಕೇಂದ್ರೀಕರಿಸಲಾಗಿದೆ. ಗುವಾಹಟಿ ಐಐಟಿಯ ಎಲೆಕ್ಟ್ರಿಕ್ ಮೊಬಿಲಿಟಿ ಲ್ಯಾಬೊರೇಟರಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಬ್ಯಾಟರಿ ವಿನಿಮಯದಿಂದ ಅವಘಡ ಕಡಿಮೆ

ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ, ಅದರ ಉಷ್ಣತೆಯು ಹೆಚ್ಚಾಗುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡಿದ ನಂತರ ವಾಹನವನ್ನು ಚಾಲನೆ ಮಾಡುವುದರಿಂದ ಬ್ಯಾಟರಿಯು ತಣ್ಣಗಾಗಲು ಸಮಯವನ್ನು ನೀಡುವುದಿಲ್ಲ, ಇದರಿಂದಾಗಿ ಬ್ಯಾಟರಿಯು ಹೆಚ್ಚು ಬಿಸಿಯಾಗುತ್ತದೆ ಮತ್ತು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಸ್ವಾಪ್ ಗ್ರಿಡ್ ನಿಮಗೆ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಯನ್ನು ನೀಡುತ್ತದೆ, ಅದು ಸಂಪೂರ್ಣವಾಗಿ ಚಾರ್ಜ್ ಆದ ನಂತರ ಸ್ವಲ್ಪ ಸಮಯದವರೆಗೆ ಗ್ರಿಡ್‌ನಲ್ಲಿದ್ದ ನಂತರ ತಂಪಾಗುತ್ತದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಆಗಾಗ್ಗೆ ಬಳಸುವುದರಿಂದ ಎಲೆಕ್ಟ್ರಿಕ್ ವಾಹನದ ಡಿಸ್ಚಾರ್ಜ್ಡ್ ಬ್ಯಾಟರಿ ಕೂಡ ಬಿಸಿಯಾಗುತ್ತದೆ. ಅದನ್ನು ರೀಚಾರ್ಜ್ ಮಾಡಲು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗೆ ಹಿಂತಿರುಗಿಸಿದಾಗ, ಸ್ವಲ್ಪ ಸಮಯದ ನಂತರ ಅದರ ಉಷ್ಣತೆಯು ಕಡಿಮೆಯಾಗುತ್ತದೆ. ಇದು ಬ್ಯಾಟರಿಯಲ್ಲಿ ಬೆಂಕಿಯ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ವಿವಿಧೆಡೆ ಸ್ಕೂಟರ್‌ಗಳಲ್ಲಿ ಬೆಂಕಿ

ಇತ್ತೀಚೆಗೆ ವಿತರಣೆಗೊಂಡ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದು ಬೆಂಕಿ ಅವಘಡದಲ್ಲಿ ಸುಟ್ಟು ಕರಲಾಗಿದ್ದು, ನೋಡನೋಡುತ್ತಿದ್ದಂತೆ ಸ್ಕೂಟರಿನ ಬ್ಯಾಟರಿ ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯು ಸಂಪೂರ್ಣವಾಗಿ ಸ್ಕೂಟರ್ ಆವರಿಸಿಕೊಂಡು ಆತಂಕ ಸೃಷ್ಠಿಸಿತ್ತು.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಅದೃಷ್ಟವಶಾತ್ ಸ್ಕೂಟರಿನಲ್ಲಿದ್ದ ರೈಡರ್ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಕೂಟರ್ ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಾಣಾಪಾಯದಿಂದ ಪಾರಾಗಿದ್ದು, ಪುಣೆ ನಗರದಲ್ಲಿ ನಡೆದ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಒಂದೇ ಘಟನೆಯಲ್ಲ, ಶಿವಮೊಗ್ಗದಲ್ಲೂ ಮಾರ್ಚ್‌ 16ರಂದು ಚಾರ್ಜ್‌ ಹಾಕಿದ್ದ ಇವಿ ಸ್ಕೂಟರ್ ಬೆಂಕಿಹೊತ್ತಿಕೊಂಡು ಮನೆಯ ವಸ್ತುಗಳೆಲ್ಲಾ ಸುಟ್ಟುಕರಕಲಾಗಿದ್ದವು.

ಇವಿ ವಾಹನಗಳನ್ನು ಬೆಂಕಿ ಅವಘಡದಿಂದ ರಕ್ಷಿಸಲು ಹೊಸ ತಂತ್ರಜ್ಞಾನ ಪರಿಚಯಿಸಿದ ಐಐಟಿ ಗುವಾಹಟಿ!

ಕಳೆದ ವರ್ಷವು ಹೈದರಾಬಾದಿನಲ್ಲಿ ಚಾಲನೆಯಲ್ಲಿದ್ದ ಇವಿ ಸ್ಕೂಟರ್‌ವೊಂದು ಹೀಟ್‌ ಹೆಚ್ಚಾಗಿ ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾಗಿತ್ತು. ಸೀಟ್‌ ಬಿಸಿಯಾಗುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೆ ಬೈಕ್‌ ಇಳಿದು ಪ್ರಾಣ ಉಳಿಸಿಕೊಂಡಿದ್ದ. ಇಂತಹ ಘಟನೆಗಳ ನಡುವೆ ಇವಿ ತಯಾರಕ ಕಂಪನಿಗಳು ಬ್ಯಾಟರಿ ಸಂಬಂಧಿತ ಸುಧಾರಣೆಗಳನ್ನು ಮಾಡುತ್ತಿದ್ದಾರಾದರೂ ಸಮಸ್ಯೆಗಳು ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ.

Most Read Articles

Kannada
English summary
IIT Guwahati introduces new technology to prevent EV vehicles from fire
Story first published: Tuesday, April 5, 2022, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X