ಎಲ್ಎಲ್: ಲರ್ನಿಂಗ್ ಲೈಸನ್ಸ್ ಪಡೆಯೋದು ಹೇಗೆ?

Posted By:
<ul id="pagination-digg"><li class="next"><a href="/how-to/steps-follow-get-learner-s-driving-license-india-aid0134.html">Next »</a></li></ul>
To Follow DriveSpark On Facebook, Click The Like Button
ಪರವಾನಿಗೆ ಪತ್ರವಿಲ್ಲದೇ ವಾಹನ ಚಾಲನೆ ಮಾಡಬಾರದು. ವಾಹನ ಚಾಲನೆ ಕಲಿಯಲು ಕಲಿಕಾ ಪರವಾನಿಗೆ ಪತ್ರ(ಎಲ್ಎಲ್) ಪಡೆಯುವುದು ಕಡ್ಡಾಯ. ಆದರೆ ಎಲ್ಎಲ್ ಪಡೆಯುವುದು ಅಂದುಕೊಂಡಷ್ಟು ಕಷ್ಟವಲ್ಲ.

ಡ್ರೈವಿಂಗ್ ಸ್ಕೂಲ್ ಅಥವಾ ಮಧ್ಯವರ್ತಿಗಳ ನೆರವಿಲ್ಲದೇ ಲರ್ನಿಂಗ್ ಲೈಸನ್ಸ್ ಪಡೆದುಕೊಳ್ಳಬಹುದಾಗಿದೆ. ಒಂದಿಷ್ಟು ಬಿಡುವು ಮಾಡಿಕೊಂಡು, ಆರ್ಟಿಒ ಕಚೇರಿಗೆ ಬಲಗಾಲಿಟ್ಟು ಪ್ರವೇಶಿಸಿದರೆ ಎಲ್ಎಲ್ ಜೊತೆ ವಾಪಸ್ ಬರಬಹುದು.

ಮಧ್ಯವರ್ತಿಗಳ ನೆರವಿನಿಂದ ಕೊಂಚ ಸಮಯ ಉಳಿಸಬಹುದು. ಆದರೆ ದುಡ್ಡು ಪಂಗನಾಮ ಹಾಕಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಆರ್ ಟಿಒ ನಿಗದಿಪಡಿಸಿದಕ್ಕಿಂತ ಎಷ್ಟೋ ಹೆಚ್ಚುಪಟ್ಟು ನಿಮ್ಮಿಂದ ಪೀಕಿಸುತ್ತಾರೆ.

ಯಾವುದೇ ಮಧ್ಯವರ್ತಿಗಳ ನೆರವಿಲ್ಲದೇ ನೀವೇ ಹತ್ತಿರದ ಆರ್ ಟಿಒ ಕಚೇರಿಗೆ ಹೋಗಿ ಅರ್ಜಿ ಫಾರಂ ಪಡೆದುಕೊಳ್ಳಿರಿ. ಪಾಸ್ ಪೋರ್ಟ್ ಗಾತ್ರದ ಇತ್ತೀಚಿನ ಮೂರು ಭಾವಚಿತ್ರಗಳು ಜೊತೆಗಿರಲಿ. ವಿಳಾಸ ಮತ್ತು ಐಡಿ ಪ್ರೂಫ್ ಒರಿಜಿನಲ್ ಮತ್ತು ನೆರಳಚ್ಚು ಪ್ರತಿ ತೆಗೆದುಕೊಂಡು ಹೋಗಲು ಮರೆಯಬೇಡಿ.

ವಿಳಾಸ ದಾಖಲೆಗಾಗಿ ಈ ಕೆಳಗಿನ ದಾಖಲೆಗಾಗಿ ಯಾವುದಾದರೊಂದನ್ನು ಸಲ್ಲಿಸಬಹುದು.

* ರೇಷನ್ ಕಾರ್ಡ್

* ಪಾಸ್ ಪೋರ್ಟ್

* ಎಲ್ಐಸಿ ಪಾಲಿಸಿ

* ಚುನಾವಣಾ ಗುರುತಿನ ಚೀಟಿ

* ಕರೆಂಟ್ ಬಿಲ್

* ದೂರವಾಣಿ ಬಿಲ್

* ವಾಟರ್ ಬಿಲ್

* ಜಾತಿ ಸರ್ಟಿಫಿಕೆಟ್(ಎಸ್/ಎಸ್ಟಿ, ಹಿಂದುಳಿದ ಪಂಗಡ, ಅಲ್ಪಸಂಖ್ಯಾತರು ಇತ್ಯಾದಿ ಮತ್ತು ಆದಾಯ ಪ್ರಮಾಣ ಪತ್ರ.

* ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಸರಕಾರಿ ಕಚೇರಿಯಿಂದ ಪಡೆದ ವೇತನ ಪಾವತಿ ಚೀಟಿ (ಪೇ ಸ್ಲಿಪ್).

ವಯಸ್ಸು ಮತ್ತು ವಿಳಾಸದ ಖಾತ್ರಿಗಾಗಿ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ತರಬೇಕು

* ಸ್ಕೂಲ್ ಸರ್ಟಿಫಿಕೆಟ್

* ಬರ್ತ್ ಸರ್ಟಿಫಿಕೆಟ್

* ಪಾನ್ ಕಾರ್ಡ್

ಎಲ್ ಎಲ್ ಪಡೆಯಲು ವಯಸ್ಸಿನ ಮಿತಿಗಳೇನು? ಮೌಖಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮಾಹಿತಿ ಮುಂದಿನ ಪುಟದಲ್ಲಿದೆ.

<ul id="pagination-digg"><li class="next"><a href="/how-to/steps-follow-get-learner-s-driving-license-india-aid0134.html">Next »</a></li></ul>
English summary
What Documents Do You Need To Get An LL. Go to the nearest RTO office and get the application. Carry three recent passport size photographs along with copies of address proof and ID proof.
Story first published: Tuesday, March 20, 2012, 14:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark