ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

By Rahul Ts

"ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ" ಎಂಬ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆಯಲ್ಲವೇ? ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಯು ಜಾಸ್ತಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಹಲವಾರು ದಶಕಗಳಿಂದ ಕಾರುಗಳ ತಂತ್ರಜ್ಞಾನಗಳಲ್ಲಿ ಭಾರಿ ಅಭಿವೃದ್ಧಿಯಾಗಿದೆ. ಆದರೆ ಇವೆಲ್ಲವನ್ನು ತಮ್ಮ ಕಪಟ ತಂತ್ರದ ಖದೀಮರು ಮೆಟ್ಟಿ ನಿಂತಿದ್ದಾರೆ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಅಷ್ಟಕ್ಕೂ ನಿಮ್ಮ ಪ್ರೇಯಸಿಗೆ ಸಮಾನವಾದ ಕಾರನ್ನು ಕಳೆದುಕೊಳ್ಳುವ ವಿಚಾರವನ್ನು ಚಿಂತಿಸಲು ಸಾಧ್ಯವೇ? ಹಾಗಾಗಿ ಕಾರು ಕಳ್ಳತನಕ್ಕಿಂತ ಮೊದಲು ಇಲ್ಲಿ ಕೊಟ್ಟಿರುವ 10 ಸರಳ ವಿಧಾನಗಳನ್ನು ಪಾಲಿಸುವುದರ ಮೂಲಕ ಸಾಧ್ಯವಾದಷ್ಟು ಕಾರು ಕಳ್ಳತನವನ್ನು ತಡೆಗಟ್ಟಬಹುದಾಗಿದೆ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಡೋರ್ ಲಾಕ್ ಮತ್ತು ಗಾಜು ಮೇಲಕ್ಕೆ ಸರಿಸುವುದು

ಇದು ಸಾಮಾನ್ಯವಾಗಿ ಮಾಡಬೇಕಾದ ಪ್ರವತ್ತಿ. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬಳಿಕ ತರಾತುರಿಯಲ್ಲಿ ಡೋರ್ ಲಾಕ್ ಮಾಡುವುದಾಗಲಿ, ಗಾಜುಗಳನ್ನು ಮೇಲಕ್ಕೆ ಸರಿಸುವುದನ್ನು ಮರೆತುಬಿಡುತ್ತೇವೆ. ಪರಿಣಾಮ ದೊಡ್ಡ ಬೆಲೆಯನ್ನೇ ತೆರಬೇಕಾಗಿತ್ತು. ರಿಮೋಟ್ ಕೀ ನಿಯಂತ್ರಿತ ಕಾರಿನಲ್ಲಿ ಒಂದೇ ಬಟನ್ ನಲ್ಲಿ ಕಾರು ಮಾಡಬಹುದಾಗಿದ್ದರೂ ಮ್ಯಾನುವಲ್ ನಲ್ಲಿ ಇಂತಹ ಅನುಕೂಲಗಳಿರುವುದಿಲ್ಲ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಸುರಕ್ಷಿತ ಪಾರ್ಕಿಂಗ್

ಯಾವತ್ತೂ ವಾಹನ ನಿಲುಗಡೆಗಾಗಿ ಅತಿ ಹೆಚ್ಚು ಸುರಕ್ಷಿತ ಪ್ರದೇಶವನ್ನು ಆಯ್ಕೆ ಮಾಡಿ. ನಿಮಗೆ ಸೇಫ್ ಎಂದು ತೋಚುವ ಪ್ರದೇಶಗಳಲ್ಲಿ ಮಾತ್ರ ವಾಹನ ನಿಲುಗಡೆಗಾಗಿ ಅವಕಾಶ ಕೊಡಿ. ರಸ್ತೆ ಬದಿ, ಅಪರಿಚಿತ ಜಾಗ ಮುಂತಾದ ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಅನುವು ಮಾಡಿಕೊಡದಿರಿ. ಇನ್ನು ಅನಿವಾರ್ಯವೆನಿಸಿದ್ದಲ್ಲಿ ಹೆಚ್ಚು ಜನ ಸಂಚಾರವಿರುವ ಪ್ರದೇಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಿ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಅಗತ್ಯ ವಸ್ತುಗಳು

ಕಾರಲ್ಲಿ ಲ್ಯಾಪ್ ಟಾಪ್, ಮೊಬೈಲ್, ಐಪ್ಯಾಡ್, ಐಫೋನ್, ಹ್ಯಾಂಡಲ್ ಬಾರ್, ಪರ್ಸ್ ಮುಂತಾದ ಬೆಲೆ ಬಾಳುವ ಡಿವೈಸ್ ಗಳನ್ನು ಇಟ್ಟುಕೊಂಡು ಪಯಣಿಸುವುದು ಬೇಡ. ಇದು ನಿಮ್ಮ ಕಾರ ಮೇಲೆ ಆಕ್ರಮಣ ಮಾಡುವ ಕಳ್ಳರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದಂತಾಗುವುದು.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಚಲಿಸದಂತೆ ಮಾಡು (Immobiliser)

ಇದು ಅತ್ಯಂತ ಪರಿಣಾಮಕಾರಿ ಆಧುನಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇತ್ತೇಚಿಗಿನ ಕಾರುಗಳನ್ನು ಕದಿಯುವುದನ್ನು ತಡೆಯಲು ಕಾರುಗಳಲ್ಲೇ ಇಂಮೊಬಿಲೈಜರ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಇದೊಂದು ಎಲೆಕ್ಟ್ರಾನಿಕ್ ಸೆಕ್ಯೂರಿಟಿ ಡಿವೈಸ್ ಆಗಿದ್ದು, ಕಳ್ಳರು ಕಾರನ್ನು ಒಡೆದು ಒಳಪ್ರವೇಶಿಸಿದರೂ ಕಾರನ್ನು ಅಪಹರಿಸುವುದು ಇನ್ನು ದೂರದ ಮಾತು. ಯಾಕೆಂದರೆ ಇದರಲ್ಲಿ ಕಂಪ್ಯೂಟರ್ ಚಿಪ್ ಹೊಂದಿದ ಕೀಯು ಎಂಜಿನ್ ಜೊತೆ ಸಂಪರ್ಕದಲ್ಲಿರುತ್ತಿದ್ದು, ನಕಲಿ ಕೀ ಬಳಸಿ ಗಾಡಿ ಸ್ಟ್ಯಾರ್ಟ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನ ಸಿಗದು.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

05. ಜಿಪಿಎಸ್ ಟ್ರ್ಯಾಕರ್

ಇನ್ನು ಸ್ವಲ್ಪ ಮುಂದಕ್ಕೆ ಯೋಚಿಸಿದರೆ ಕಾರು ಕಳ್ಳತವನ್ನು ತಡೆಯಲು ಜಿಪಿಎಸ್ ಟ್ರ್ಯಾಕರ್ ವ್ಯವಸ್ಥೆ ಲಭ್ಯವಿರುತ್ತದೆ. ಇದು ಸ್ಪಲ್ವ ದುಬಾರೆನಿಸಿದರೆ ಒಮ್ಮೆ ಹೂಡಿಕೆ ಮಾಡಿದರೆ ಮತ್ತೆ ಕಾರು ರಕ್ಷಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ನಕಲಿ ಸ್ಟಿಕ್ಕರ್

ಬಹುತೇಕ ಎಲ್ಲ ಖದೀಮರಿಗೂ ಕಾರು ಅಲರಾಂ ಹೇಗೆ ಆಫ್ ಮಾಡಿಕೊಳ್ಳಬೇಕು ಎಂಬುದು ಗೊತ್ತಿರುತ್ತದೆ. ಹಾಗಿದ್ದರೂ ಚುರುಕು ಬುದ್ಧಿವಂತಿಕೆಯಿಂದ ಕಳ್ಳರ ಹಾದಿ ತಪ್ಪಿಸಬಹುದು. ಇದಕ್ಕಾಗಿ ನಕಲಿ ಅಲರಾಂ ಸ್ಟಿಕ್ಕರ್ ಗಳನ್ನು ಕಾರಲ್ಲಿ ಅಂಟಿಸಿಕೊಳ್ಳಬಹುದಾಗಿದೆ. ನಕಲಿ ಅಲರಾಂಗಳನ್ನೇ ಜೋಡಣೆ ಮಾಡಿದರೆ ಇನ್ನು ಉತ್ತಮ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಸ್ಟೀರಿಂಗ್ ವೀಲ್ ಲಾಕ್

ಸ್ಟೀರಿಂಗ್ ವೀಲ್ ಲಾಕ್ ಮಾಡಿಟ್ಟುಕೊಳ್ಳುವ ಮೂಲಕ ಕಳ್ಳರ ಬಹುಮೂಲ್ಯ ಸಮಯವನ್ನು ವ್ಯರ್ಥ ಮಾಡಬಹುದು. ಹಾಗೆಯೇ ಬ್ರೇಕ್ ಪೆಡಲ್, ಶಿಫ್ಟರ್, ಸ್ಪೇರ್ ವೀಲ್ ಸೇರಿದಂತೆ ಇನ್ನಿತರ ಹೊರಮೈ ಆಕ್ಸೆಸರಿಗಳಿಗೂ ಇದೇ ನೀತಿ ಅನುಸರಿಸಬಹುದಾಗಿದೆ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ವಿಐಎನ್ ಸಂಖ್ಯೆ

ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದೆ. ನಿಮ್ಮ ಕಾರಿನ ವಿಐಎನ್ ಸಂಖ್ಯೆಯನ್ನು ಗಾಜು ಅಥವಾ ನಿಮಗೆ ಇಷ್ಟವಾದ ಕಡೆಗಳಲ್ಲಿ ಅಚ್ಚೊತ್ತುವ ಮೂಲಕ ಕಳ್ಳತನ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ. ಯಾಕೆಂದರೆ ಇದನ್ನು ಬದಲಾಯಿಸಿಕೊಳ್ಳಲು ಕಳ್ಳರಿಗೆ ಹೆಚ್ಚು ವೆಚ್ಚ ತಗುಲಲಿದೆ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ದಾಖಲೆ ಪತ್ರ

ಕಾರಿನ ದಾಖಲಾತಿ ಪತ್ರ, ವಿಮೆ ಅಥವಾ ಲೈಸನ್ಸ್ ಕಾಗದಗಳ ನೈಜ ಪ್ರತಿಗಳನ್ನು ಕಾರಿನಲ್ಲಿಡಬೇಡಿ. ಯಾಕೆಂದರೆ ಇದರಿಂದ ಕಾರಿನ ಮಾರಾಟ ಸುಲಭವಾಗಲಿದೆ. ಹಾಗೆಯೇ ಇತರ ಯಾವುದೇ ಅಮೂಲ್ಯ ದಾಖಲೆ ಪತ್ರಗಳನ್ನು ಕಾರಿನಲ್ಲಿಡುವ ಪ್ರವೃತ್ತಿಯಿಂದ ಈಗಲೇ ಹಿಂಜರಿಯಿರಿ.

ಕಾರು ಕಳ್ಳತನವನ್ನು ತಡೆಗಟ್ಟಲು ಸರಳ ವಿಧಾನಗಳಿವು..

ಕೊನೆಯ ಮಾತು...

ಮಹೀಂದ್ರ ಸ್ಕಾರ್ಪಿಯೊ, ಬೊಲೆರೊ, ಷೆವರ್ಲೆ ತವೆರಾ, ಹ್ಯುಂಡೈ ಸ್ಯಾಂಟ್ರೊ, ಟೊಯೊಟಾ ಕ್ವಾಲಿಸ್ ಹಾಗೂ ಹೋಂಡಾ ಸಿಟಿಗಳಂತಹ ಜನಪ್ರಿಯ ಕಾರುಗಳು ಭಾರತದಲ್ಲಿ ಅತಿ ಹೆಚ್ಚು ಕಳ್ಳತನವಾಗುತ್ತಿದೆ. ಅಷ್ಟೇ ಯಾಕೆ ಮಾರುತಿ 800, ಟಾಟಾ ಇಂಡಿಕಾ, ಅಂಬಾಸಿಡರ್, ಮಾರುತಿ ಎಸ್ಟೀಮ್ ಮತ್ತು ಪ್ರೀಮಿಯಂ ಪದ್ಮಿನಿ ಕಾರಗಳು ಸಹ ಇದರಿಂದ ಹೊರತಾಗಿಲ್ಲ. ಹಾಗಾಗಿ ನೆನಪಿಡಿ "ರೋಗ ಬರುವುದಕ್ಕೂ ಮುನ್ನ ಬರದಂತೆ ತಡೆಗಟ್ಟುವುದು ಸೂಕ್ತ".

Most Read Articles

Kannada
English summary
Prevent your car from getting stolen car theft prevention tips.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more