ಕ್ರೀ.. ಕ್ರೀ.. ಕ್ರೀ,, ಹಾರ್ನ್ ಮೆಲ್ಲಗೆ ಹಾಕ್ರಿ...

By * ಪ್ರವೀಣ ಚಂದ್ರ

Horn Sound
ನಮ್ಮ ರಸ್ತೆಯಲ್ಲಿರುವ ಹೆಚ್ಚಿನ ವಾಹನ ಚಾಲಕರು ಸಂಗೀತ ಪ್ರೇಮಿಗಳು. ಅದರಲ್ಲೂ ಅವರಿಗೆ ಕರ್ಕಶ ಸಂಗೀತವೆಂದರೆ ತುಂಬಾ ಇಷ್ಟ. ಅದಕ್ಕೆ ಅವರು ಹಾರ್ನ್ ಮೇಲಿಟ್ಟ ಕೈ ತೆಗೆಯುವದನ್ನೇ ಮರೆಯುತ್ತಾರೆ. ಟ್ರಾಫಿಕ್ ಮುಂದಕ್ಕೆ ಮೂವ್ ಆಗಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ತಾಳ್ಮೆಯಿಲ್ಲದೇ ಉರುಳಿಗೆ ಬಿದ್ದ ಹಂದಿಯಂತೆ ಹಾರ್ನ್ ಹೊಡೆಯುತ್ತಾರೆ.

ಬೆಂಗಳೂರಿನಂತ ನಗರಗಳಲ್ಲಿ ನೀರವತೆ ಅನ್ನೋದು ಅಪರೂಪದ ಪದ. ಇಲ್ಲಿ ಸದಾ ವಾಹನಗಳ ಗಿಜಿಬಿಜಿ. ಕಿವಿಗಂತೂ ಒಂಚೂರು ರೆಸ್ಟ್ ಸಿಗಲು ಸಾಧ್ಯನೇ ಇಲ್ಲ. ವಾಹನ ಚಲಿಸುವ ಸದ್ದು, ಎಂಜಿನ್ ಸದ್ದು ಸಾಲದೆಂಬಂತೆ ಅನಗತ್ಯವಾಗಿರುವ ಹಾರ್ನ್ ಸದ್ದು ಕಿವಿಗೆ ಅಪ್ಪಲಿಸುತ್ತಲೇ ಇರುತ್ತದೆ. ಮೆಲ್ಲಗೆ ಹೋಗುವ ವಾಹನಗಳು ಬಲಗಡೆ, ವೇಗವಾಗಿ ಸಾಗುವ ವಾಹನಗಳು ಬಲಗಡೆ ಸಾಗಬೇಕೆಂಬ ನೀತಿಯಿದೆ. ಆದರೆ ಇದು ನಮ್ಮ ಹೆಚ್ಚಿನ ಡ್ರೈವರ್ ಗಳಿಗೆ ತಿಳಿದಂತಿಲ್ಲ. ವಾಹನಗಳಿಗೆ ಅಳವಡಿಸುವ ಹಾರ್ನ್ ಹೆಚ್ಚು ಡೆಸಿಬಲ್ ಹೊಂದಿರಬಾರದೆಂಬ ಮಿತಿಯೂ ಇದೆ.

ವಿದೇಶಗಳಿಂದ ಬಂದವರು ಇಲ್ಲಿನ ಹಾರ್ನ್ ಸದ್ದು ಕೇಳಿ ಮೂಗಿನ ಮೇಲೆ ಬೆರಳಿಡುತ್ತಾರೆ. ನಮಗೆಲ್ಲ ಕಿವಿ ಕೇಳೋದಿಲ್ವ ಅಂತ ಅವರು ಆಶ್ಚರ್ಯ ಪಟ್ಟರೆ ಆಶ್ಚರ್ಯವಿಲ್ಲ. ಯಾಕೆಂದರೆ ಕೆಲವು ದೇಶಗಳಲ್ಲಿ ಅನಗತ್ಯವಾಗಿ ಹಾರ್ನ್ ಮಾಡುವುದು ಕೂಡ ಅಪರಾಧವಂತೆ. ನಮ್ಮಲ್ಲಿ ಕೂಡ ಕರ್ಕಶ ಹಾರ್ನ್ ಹಾಕಿದರೆ ದಂಡ ವಿಧಿಸುವ ಪದ್ದತಿಯಿದ್ದರೆ ಒಂದಿಷ್ಟು ಶಬ್ದ ಮಾಲಿನ್ಯ ಕಡಿಮೆಯಾದೀತು. ಆದರೆ ಕೆಲವೊಮ್ಮೆ ಹಾರ್ನ್ ಹಾಕೋದು ಅನಿವಾರ್ಯ. ಹಾಗಾಗಿ ಎಚ್ಚರಿಕೆಯಿಂದ ಹಾರ್ನ್ ಮಾಡುವುದು ಒಳ್ಳೆಯದು.

ಹಾರ್ನ್ ಉಂಟು ಮಾಡುವ ಆರೋಗ್ಯ ಸಮಸ್ಯೆಗಳು: 50 ಡೆಸಿಬೆಲ್ಸ್ ಗಿಂತ ಅಧಿಕವಿರುವ ಶಬ್ದ ಕಿವಿಗೆ ಅಪಾಯಕಾರಿ. ಕರ್ಕಶ ಹಾರ್ನ್ ನಿಂದಾಗಿ ಶಾಶ್ವತ ಕಿವುಡುತನ ಕೂಡ ಉಂಟಾಗಬಹುದು. ನಿದ್ರಾ ಹೀನತೆ, ಹಸಿವಿಲ್ಲದಿರುವಿಕೆ, ಹೃದಯ ಸಂಬಂಧಿ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಇತ್ಯಾದಿಗಳು ಶಬ್ದ ಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳು. ಆದರೆ ಹೆಚ್ಚಿನವರು ಇದೆಲ್ಲದರ ಅರಿವಿಲ್ಲದೇ ಹಾರ್ನ್ ಮಾಡುತ್ತ ಇರುತ್ತಾರೆ. ಇಂತವರಿಗೆ ಎಚ್ಚರಿಕೆಯ "ಹಾರ್ನ್" ಮಾಡುವ ಅಗತ್ಯವಿದೆ.

ಈಗ ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೂ ಹಾರ್ನ್ ಸದ್ದು ಕಡಿಮೆ ಮಾಡುವಂತೆ ಎಚ್ಚರಿಸುವ ಸಮುದಾಯ ಗುಂಪುಗಳಿವೆ. ಹೆಚ್ಚಿನವರು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅನಗತ್ಯವಾಗಿ ಹಾರ್ನ್ ಮಾಡಿ ಶಬ್ದ ಮಾಲಿನ್ಯ ಉಂಟು ಮಾಡುವರಿಗೆ ಶುಲ್ಕ ವಿಧಿಸಬಹುದು. ಆದರೆ ಅದಕ್ಕಿಂತ ವಾಹನ ಚಾಲಕರು ಶಬ್ದ ಮಾಲಿನ್ಯದ ತೊಂದರೆಗಳನ್ನು ತಿಳಿದುಕೊಂಡು ಹಾರ್ನ್ ಸದ್ದು ಕಡಿಮೆ ಮಾಡಲು ಸ್ವ-ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು. ದಯವಿಟ್ಟು ಮೆಲ್ಲ ಹಾರ್ನ್ ಮಾಡಿ ಪ್ಲೀಸ್.

Most Read Articles

Kannada
English summary
Amount of noise pollution happening on Indian Roads. Noise pollution disturbs our health and behavior in a number of ways including deafness causing lack of sleep, irritability, indigestion, heartburn, high blood pressure, ulcers, and heart disease. Horn not okey please.
Story first published: Tuesday, February 22, 2011, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X