ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ನೀವು ಸ್ಕೂಟರ್ ಬಳಸುತ್ತಿದ್ದೀರಾ? ಹಾಗದರೇ ಇಂದಿನ ಈ ಲೇಖನ ನಿಮಗಾಗಿಯೆ. ಸಿಗ್ನಲ್ ಹತ್ತಿರ ಅಥವಾ ಸಣ್ಣ ಕೆಲಸಗಳಿಗೆ ನಿಂತಾಗ ಸ್ಕೂಟರ್‍‍ನ ಎಂಜಿನ್ ಆನ್‍‍ನಲ್ಲಿಯೇ ಇರುತ್ತದೆ.

By Rahul Ts

ನೀವು ಸ್ಕೂಟರ್ ಬಳಸುತ್ತಿದ್ದೀರಾ? ಹಾಗದರೇ ಇಂದಿನ ಈ ಲೇಖನ ನಿಮಗಾಗಿಯೆ. ಸಿಗ್ನಲ್ ಹತ್ತಿರ ಅಥವಾ ಸಣ್ಣ ಕೆಲಸಗಳಿಗೆ ನಿಂತಾಗ ಸ್ಕೂಟರ್‍‍ನ ಎಂಜಿನ್ ಆನ್‍‍ನಲ್ಲಿಯೇ ಇರುತ್ತದೆ. ಇದನೇ ಐಡ್ಲಿಂಗ್ ಎಂದು ಕರೆಯುತ್ತಾರೆ. ಹೀಗೆ ಐಡ್ಲಿಂಗ್‍‍ನಲ್ಲಿರುವ ಸ್ಕೂಟರ್ ಹತಾಟನೇ ನಿಂತು ಹೋಗುತ್ತದೆ. ಅಷ್ಟೆ ಅಲ್ಲದೇ ರೈಡ್ ಮಾಡುತ್ತಿರುವಾಗ ಕೂಡ ಸಡನ್ ಆಗಿ ಎಂಜಿನ್ ನಿಂತು ಹೋಗುತ್ತದೆ.

ಹೀಗೆ ರನ್ನಿಂಗ್‍‍ನಲ್ಲಿದ್ದ ಸ್ಕೂಟರ್ ಇದ್ದಕ್ಕಿದ್ದ ಹಾಗೆ ಏತಕ್ಕೆ ನಿಂತು ಹೋಗುತ್ತದೆ ಎಂದು ಈ ಕೇಳಗಿನ ಸ್ಲೈಡರ್‍‍ಗಳನ್ನು ಓದಿ ತಿಳಿಯಿರಿ..

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಸ್ಕೂಟರ್‍‍ನ ಎಂಜಿನ್ ಆನ್‍‍ನಲ್ಲಿದ್ದಾಗ ಮುಂದೆ ಹೋಗಲು ಆಕ್ಸಿಲರೇಷನ್ ಮಾಡಿದರೆ ತಕ್ಷಣವೇ ನಿಂತು ಹೋಗುತ್ತದೆ. ಇಂತಹ ಅನುಭವವನ್ನು ಸ್ಕೂಟರ್ ಹೊಂದಿರುವ ಎಲ್ಲಾ ಗ್ರಾಹಕರು ಅನುಭವಿಸಿಯೆ ಇರುತ್ತಾರೆ. ಇದಕ್ಕೆ ಕಾರಣ ಫ್ಯುಯಲ್ ಬ್ಲಾಕ್ ಆಗಿರುವುದು.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಟ್ಯಾಂಕ್‍ನಿಂದ ಕಾರ್ಬೋರೇಟರ್‍‍ಗೆ ಪೆಟ್ರೋಲ್ ರವಾನೆಯಾಗುವ ಕ್ರಮದ ಮಧ್ಯದಲ್ಲಿ ಗಾಳಿ ಹೋಗುತ್ತಿರುತ್ತದೆ. ಇಂಧನವು ಖಾಲಿಯಾದ ನಂತರವಾಗಿ ಬಂದ ಗಾಳಿಯ ಮೂಲಕವೇ ಸ್ಕೂಟರ್ ನಿಂತು ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಕೂಟರ್ ಅನ್ನು ಮತ್ತೇ ಸ್ಟಾರ್ಟ್ ಮಾಡಬಹುದು.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಐಡ್ಲಿಂಗ್ ಸ್ಕ್ರೂ ಲೂಸ್ ಆಗಿರುತ್ತದೆ.

ಕಾರ್ಬೇರೇಟರ್ ಪೆಟ್ರೋಲ್ ಅನ್ನು ಗಾಳಿಯೊಂದಿಗೆ ಮಿಶ್ರಣವಾಗಿ ಎಂಜಿನ್ ಒಳಗೆ ರವಾನೆ ಮಾಡುತ್ತದೆ. ಅವಸರಕ್ಕೆ ತಕ್ಕಂತೆ ಒಂದೊಂದು ಬಾರಿ ಪೆಟ್ರೋಲ್‍‍ಗಿಂತ ಕಡಿಮೆ ಗಾಳಿ, ಪೆಟ್ರೋಲ್‍ಗಿಂತ ಹೆಚ್ಚು ಗಾಳಿಯನ್ನು ರವಾನಿಸುತ್ತದೆ. ಇದನ್ನು ಆಕ್ಸಿಲರೇಟರ್‍‍ನಿಂದ ಕಂಟ್ರೋಲ್ ಮಾಡಬಹುದು.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಸ್ಕೂಟರ್ ಚಾಲನೆಯಲ್ಲಿ ಇಲ್ಲದಿರುವಾಗ ಎಂಜಿನ್ ಆನ್‍‍ನಲ್ಲಿದ್ದು, ಸ್ಕೂಟರ್ ಸ್ಥಿರವಾಗಿ ಇರುವುದಕ್ಕಾಗಿ ನಿರ್ಣಯಿಸಲಾದ ಬೇಕಾದಷ್ಟು ಪೆಟ್ರೋಲ್ ಅನ್ನು ಮಾತ್ರ ರವಾನಿಸುತ್ತಿರುತ್ತದೆ. ಈ ಕಾರ್ಯವನ್ನು ನಿರ್ವಹಿಸಲು ಕಾರ್ಬೋರೇಟರ್‍‍ನಲ್ಲಿ ಐಡ್ಲಿಂಗ್ ಸ್ಕ್ರೂ ಒಂದು ಇರುತ್ತದೆ. ಈ ಸ್ಕ್ರೂ ಮುಖಾಂತರ ಎಷ್ಟರ ಮಟ್ಟಿಗೆ ಐಡ್ಲಿಂಗ್ ಅಚ್ಚುಕಟ್ಟಾಗಿರಬೇಕು ಎಂಬುದನ್ನು ನಿರ್ಧರಿಸಬಹುದು.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಕಾರ್ಬೋರೇಟರ್ ಸ್ಕೂ ಲೂಸ್ ಆದ ಕಾರಣ, ಎಂಜಿನ್ ಒಳಗೆ ಹೋಗುವ ಪೆಟ್ರೋಲ್ ಮತ್ತು ಗಾಳಿಯಲ್ಲಿ ಕೊಂಚ ವ್ಯತ್ಯಾಸಗಳಾಗುತ್ತದೆ. ಇದರಿಂದ ಸಿಗ್ನಲ್ ಅಥವಾ ಎಲ್ಲಿಯಾದರೂ ಸ್ಕೂಟರ್ ಅನ್ನು ನಿಲ್ಲಿಸಿದಾಗ ಇಂತಹ ಐಡ್ಲಿಂಗ್ ಸಮಸ್ಯೆಯು ಎದುರಾಗುತ್ತದೆ.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಸ್ಕೂಟರ್ ಐಡ್ಲಿಂಗ್‍‍ನಲ್ಲಿದಾಗ ಸಡನ್ ಆಗಿ ನಿಂತುಹೋಗಲು ಮಲೀನಗಳಿಂದ ಕೂಡಿದ ಪೆಟ್ರೋಲ್ ಅನ್ನು ಟ್ಯಾಂಕ್‍‍ನಲ್ಲಿ ತುಂಬಿಸುವುದು ಮತ್ತೊಂದು ಕಾರಣವಾಗಬಹುದು. ದೂಳು ಮತ್ತು ನೀರಿನಿಂದ ಮಿಶ್ರಣವಾದ ಪೆಟ್ರೋಲ್ ಎಂಜಿನ್‍‍ಗೆ ಹಾನಿಕಾರಕ.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ರನ್ನಿಂಗ್‍‍ನಲ್ಲಿದ್ದ ಸ್ಕೂಟರ್ ಎಂಜಿನ್ ಇದ್ದಕ್ಕಿದ್ದ ಹಾಗೆ ನಿಂತು ಹೋಗಲು ಈ ಲೇಖನದಲ್ಲಿ ಬರೆದ ಕಾರಣಗಳು ಪ್ರಧಾನವಾದ ಅಂಶಗಳಗದಿರಬಹುದು. ನಿಮ್ಮ ಸ್ಕೂಟರ್ ಕೂಡಾ ಎಂದಾದರು ಇದ್ದಕ್ಕಿದ್ದ ಹಾಗೆ ನಿಂತು ಹೋದಾಗ ವಾರೆಂಟಿ ಇರುವುದಾದರೆ, ಸಂಭಂದಿಸಿದ ಡೀಲರ್ ಇಲ್ಲವಾದಲ್ಲಿ ಅಧಿಕೃತ ಆ ಬ್ರ್ಯಾಂಡ್‍‍ನ ಸರ್ವೀಸ್ ಸೆಂಟರ್ ಅನ್ನು ಸಂಪರ್ಕಿಸಿ.

ರನ್ನಿಂಗ್‍‍ನಲ್ಲಿದ್ದಾಗ ನಿಮ್ಮ ಸ್ಕೂಟರ್ ತಕ್ಷಣವೆ ನಿಂತುಹೋಗುತ್ತಿದೆಯೆ.?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಳೆಗಾಲದಲ್ಲಿ ಕಾರಿನ ಕಾಯಿಲೆ ತಪ್ಪಿಸಲು ಅಮೂಲ್ಯ ಟಿಪ್ಸ್..

ಕಾರಿನ ಎಸಿ ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..?

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

Most Read Articles

Kannada
Read more on auto tips tips scooter
English summary
What is the reason behind sudden stoppage of scooter while driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X