'ರೋಲ್ಸ್ ರಾಯ್ಸ್' ಬಗ್ಗೆ ಈ 12 ವಿಚಾರಗಳನ್ನು ನೀವ್ ಕೂಡ ತಿಳ್ಕೊಳಿ !!

Written By:

ರೋಲ್ಸ್‌ ರಾಯ್ಸ್‌ ಸಂಸ್ಥೆ ತಯಾರಿಸುವ ಕಾರುಗಳ ದರ ಕೋಟಿ ರೂಪಾಯಿ ದಾಟುತ್ತದೆ, ಆದ ಕಾರಣ ವಿಶ್ವದ ದುಬಾರಿ ಕಾರು ಎಂದ ಕೂಡಲೇ 'ರೋಲ್ಸ್‌ ರಾಯ್ಸ್‌' ನೆನಪಾಗುವುದುಂಟು. ಹೆಚ್ಚಿನ ಜನಕ್ಕೆ ರೋಲ್ಸ್ ರಾಯ್ಸ್ ಕಾರಿನ ಹೆಸರು ಗೊತ್ತು ಅಷ್ಟೇ, ಆದರೆ ಕಂಪನಿಯ ಬಗ್ಗೆ ಹೆಚ್ಚಿಗೆ ಮಾಹಿತಿ ಇರುವುದಿಲ್ಲ. ಈ ವಿಚಾರವಾಗಿ ಜನರಿಗೆ ರೋಲ್ಸ್ ರಾಯ್ಸ್ ಕಂಪನಿಯ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿದೆ.

ಚಾರ್ಲ್ಸ್ ಸ್ಟೀವರ್ಟ್ ರೋಲ್ಸ್ ಮತ್ತು ಫ್ರೆಡೆರಿಕ್ ಹೆನ್ರಿ ರೊಯ್ಸ್ ಎಂಬ ಇಬ್ಬರು ವ್ಯಕ್ತಿಗಳು 1906ರಲ್ಲಿ ಸ್ಥಾಪಿಸಿದ 'ರೋಲ್ಸ್ ರಾಯ್ಸ್ ಲಿಮಿಟೆಡ್' ಕಂಪನಿ, ಕಾರು ಮತ್ತು ವಿಮಾನದ ಎಂಜಿನ್ ಉತ್ಪಾದನೆಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ.

1971ರಲ್ಲಿ ಯುಕೆ ಸರ್ಕಾರ ರೋಲ್ಸ್ ರಾಯ್ಸ್ ಕಂಪನಿಯನ್ನು ರಾಷ್ಟ್ರೀಕೃತ ಕಂಪನಿ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿತು. 2 ವರ್ಷಗಳ ನಂತರ ಕಾರು ತಯಾರಿಕೆಯ ವಿಭಾಗ 'ರೋಲ್ಸ್ ರಾಯ್ಸ್ ಮೋಟರ್ಸ್' ಎಂದು ಮರುನಾಮಕರಣಗೊಂಡಿತು.

ರೋಲ್ಸ್ ರಾಯ್ಸ್ ಲಿಮಿಟೆಡ್ ರಾಷ್ಟ್ರೀಕೃತ ಕಂಪನಿಯಾಗಿ ಮುಂದುವರೆಯಿತಾದರೂ 1987ರಲ್ಲಿ ಮತ್ತೆ ಖಾಸಗಿ ಸಂಸ್ಥೆಯಾಗಿ ಮಾಡಲಾಯಿತು.

1980ರಲ್ಲಿ ಜನಪ್ರಿಯ ವಿಕರ್ಸ್ ಸಂಸ್ಥೆಯು ರೋಲ್ಸ್-ರಾಯ್ಸ್ ಮೋಟರ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು, ನಂತರದ ಬೆಳವಣಿಗೆಯಲ್ಲಿ ಕಾರು ಉತ್ಪಾದಕ ಬಿಎಂಡಬ್ಲ್ಯೂ ಕಂಪನಿ ರೋಲ್ಸ್ ರಾಯ್ಸ್ ಮೋಟರ್ಸ್ ಕಂಪನಿಯನ್ನು 1998ರಲ್ಲಿ ಖರೀದಿ ಮಾಡಿ, ತನ್ನ ಅಂಗ ಸಂಸ್ಥೆಯನ್ನಾಗಿ ಮಾಡಿಕೊಂಡಿತು.

ರೋಲ್ಸ್ ರಾಯ್ಸ್ ಕಂಪನಿ ಉತ್ಪಾದನೆ ಮಾಡಿದ ಶೇಕಡ 65 ರಷ್ಟು ಕಾರುಗಳು ಈಗಲೂ ಸಹ ರಸ್ತೆಯ ಮೇಲೆ ರಾಜನಂತೆ ಮೆರೆಯುತ್ತಿರುವುದು ಕಾರಿನ ನಿರ್ಮಾಣ ಶ್ರೇಷ್ಠತೆ ಎಷ್ಟಿದೆ ಎಂಬುದನ್ನು ನಾವು ಊಹಿಸಬಹುದು.

ಈಗಾಗಲೇ ದೈತ್ಯಕಾರವಾಗಿ ಬೆಳೆದಿರುವ ರೋಲ್ಸ್-ರಾಯ್ಸ್ ಮೋಟರ್ಸ್ ಕಂಪನಿ ಬಗ್ಗೆ ಅತಿ ಹೆಚ್ಚು ಒಲವು ಹೊಂದಿದ್ದ ಬಿಎಂಡಬ್ಲ್ಯೂ, ಖರೀದಿ ಪ್ರಕ್ರಿಯೆಗೆ ಅತಿ ಹೆಚ್ಚು ವ್ಯಹಿಸಿ ಜಯ ತನ್ನದಾಗಿಸಿಕೊಂಡಿತ್ತು.ಖರೀದಿ ನಂತರ ಬಿಎಂಡಬ್ಲ್ಯೂ ಕಂಪನಿ ಇಂಗ್ಲೆಂಡಿನಲ್ಲಿ ರೋಲ್ಸ್-ರಾಯ್ಸ್ ಕಂಪನಿಗೆ ಪ್ರತ್ಯೇಕ ಗೋದಾಮು ನಿರ್ಮಿಸಿ ಕಾರಿನ ಅಸ್ತಿತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸಿತು.

ರೋಲ್ಸ್ ರಾಯ್ಸ್ ಮೋಟರ್ಸ್ 2003ರಲ್ಲಿ ತನ್ನ ಮೊದಲ 'ಫ್ಯಾಂಟಮ್' ಕಾರನ್ನು ಪ್ರಪಂಚಕ್ಕೆ ಪರಿಚಯಿಸಿತು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸರಿ ಸುಮಾರು 44,000 ಬಣ್ಣಗಳಲ್ಲಿ ಈ ಪ್ಯಾಂಟಮ್ ಕಾರು ಲಭ್ಯವಿದ್ದು, ಗ್ರಾಹಕ ತನಗೆ ಬೇಕಾದ ಬಣ್ಣವನ್ನು ಆರಿಸಿ ಉತ್ಪಾದನೆಗೆ ಕಳುಹಿಸಿಕೊಡಬಹುದಾಗಿದೆ.

ಪ್ರತಿಯೊಂದು ರೋಲ್ಸ್ ರಾಯ್ಸ್ ಕಾರು ಜರ್ಮನಿಯಲ್ಲಿ ನಿರ್ಮಾಣಗೊಂಡು ಪ್ರಪಂಚದ ಮೂಲೆ ಮೂಲೆ ತಲುಪಲಿವೆ. ನಿಮಗೆ ಗೊತ್ತೇ ? ಪ್ರತಿಯೊಂದು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ನಿರ್ಮಿಸಲು ಕನಿಷ್ಠ 2 ತಿಂಗಳು ಬೇಕಂತೆ.

ಬಿಎಂಡಬ್ಲ್ಯು ಕಂಪನಿಯ ಅಂಗ ಸಂಸ್ಥೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಕೇವಲ 5.9 ಸೆಕೆಂಡುಗಳಲ್ಲಿ ಗಂಟೆಗೆ ಸುಮಾರು 0 ಕಿ.ಮೀ ಇಂದ 100 ಕಿ.ಮೀ ಪಡೆದುಕೊಳ್ಳುವಷ್ಟು ಬಲಿಷ್ಠ ವಿ-12 ಎಂಜಿನ್ ಹೊಂದಿದೆ.

ಫ್ಯಾಂಟಮ್ ಕಾರಿನ ಎಲ್ಲಾ ಮಾದರಿಗಳಲ್ಲಿ ಟೆಫ್ಲಾನ್ ಕೋಟ್ ಹೊಂದಿರುವ ಛತ್ರಿಗಳನ್ನು ಕಾರಿನ ಬಾಗಿಲಿಗೆ ಇರಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ. ಪ್ರತಿಯೊಂದು ಫ್ಯಾಂಟಮ್ ಕಾರಿನ ಆಸನಗಳನ್ನು ತಯಾರಿಸಲು 75 ಚದುರ ಅಡಿಯಷ್ಟು ವಿಶೇಷ ಬಟ್ಟೆ ಬೇಕಾಗುತ್ತದೆ.

ಗ್ರಾಹಕರ ಬೇಡಿಕೆಯಂತೆ ಈ ಸಂಸ್ಥೆ ಕಾರುಗಳ ಮುಂದೆ ಉಕ್ಕು, ಬೆಳ್ಳಿ, ಚಿನ್ನ ಮತ್ತು ಬೆಲೆಬಾಳುವ ಹರಳುಗಳನ್ನು ಬಳಸಿ ‘ಫ್ಲೈಯಿಂಗ್‌ ಲೇಡಿ' ಹೆಸರಿನ ಗೊಂಬೆ ಅಳವಡಿಸುತ್ತದೆ.ಈ ಗೊಂಬೆಯ ಬೆಲೆಯೇ ₹6 ಲಕ್ಷದಿಂದ 15 ಲಕ್ಷದವರೆಗೂ ಇರುತ್ತದೆ.ಈ ಗೊಂಬೆಯನ್ನು ಯಾರೇ ಮುಟ್ಟಿದರೂ ಅದು ಬಾಯನೆಟ್‌ನ ತಳಭಾಗದಲ್ಲಿ ಅಳ ವಡಿಸಿರುವ ವಿಶೇಷ ಪೆಟ್ಟೆಗೆಯೊಳಗೆ ಹೋಗಿ ಅಡಗಿ ಕೊಳ್ಳುತ್ತದೆ.

ಇತ್ತೀಚಿಗೆ, ರೋಲ್ಸ್ ರಾಯ್ಸ್ ಕಂಪನಿ ತನ್ನ ಗೋಸ್ಟ್ ಕಾರಿಗೆ ಸರಿ ಸುಮಾರು ಒಂದು ಸಾವಿರ ವಜ್ರಗಳನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ಬಣ್ಣ ಬೆರೆಸಿ ಪೈಂಟ್ ಮಾಡಿ ಪ್ರದರ್ಶನ ಮಾಡಿತ್ತು.

ಟೆಸ್ಲಾ ಎಸ್ ಮಾದರಿ ಕಾರಿನ ಚಿತ್ರಗಳು

English summary
you can find small information regarding rolls riyce motors company with images
Please Wait while comments are loading...

Latest Photos