ವಾಹನ ಲೋಕದಲ್ಲೂ ಜಾದೂ ಮೆರೆಯುತ್ತಿರುವ 15 ಸೆಲೆಬ್ರಿಟಿಗಳು!

Written By:

ವಾಹನ ಸಂಸ್ಥೆಯೊಂದರ ಪ್ರಚಾರ ಹಾಗೂ ಬೆಳವಣಿಗೆಯಲ್ಲಿ ಸೆಲೆಬ್ರಿಟಿ ಅಥವಾ ತಾರೆಯರ ಪಾತ್ರವೂ ಅತಿ ಮುಖ್ಯವೆನಿಸುತ್ತದೆ. ಪ್ರತಿಯೊಂದು ವಾಹನ ಸಂಸ್ಥೆಗಳು ತನ್ನ ಮಾದರಿಗಳ ಪ್ರಚಾರ ಜಾಹೀರಾತಿಗಾಗಿ ಕೋಟಿಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡುತ್ತಿದೆ.

ತಾರೆಯರು ಜನ ಸಾಮಾನ್ಯರ ಮನಸ್ಸಿಗೆ ಹತ್ತಿರವಾಗಿರುವುದರಿಂದ ತನ್ಮೂಲಕ ಬಹುಬೇಗನೇ ಜನರ ಹೃದಯವನ್ನು ಗೆಲ್ಲಬಹುದೆಂಬ ಮಾರಾಟ ತಂತ್ರವನ್ನು ವಾಹನ ಸಂಸ್ಥೆಗಳು ಅನುಸರಿಸುತ್ತಿವೆ. ಹೀಗೆ ದೇಶದ ಪ್ರಮುಖ ವಾಹನ ಸಂಸ್ಥೆಗಳು ಮೊರೆ ಹೋಗಿರುವ ಕೆಲವು ಸೆಲೆಬ್ರಿಟಿಗಳ ಹೆಸರುಗಳನ್ನು ನಾವಿಲ್ಲಿ ಬಹಿರಂಗ ಮಾಡುವ ಪ್ರಯತ್ನ ಮಾಡಲಿದ್ದೇವೆ.

ಬಾಹುಬಲಿ ಪ್ರಭಾಸ್ - ಮಹೀಂದ್ರ ಟಿಯುವಿ100

ಬಾಹುಬಲಿ ಪ್ರಭಾಸ್ - ಮಹೀಂದ್ರ ಟಿಯುವಿ100

ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರದ ಅತಿ ನೂತನ ಟಿವಿಯು100 ಎಸ್‌ಯುವಿ ಕಾರಿಗೆ ಇದಕ್ಕಿಂದ ದೊಡ್ಡದಾದ ಪ್ರಚಾರ ರಾಯಭಾರಿಯೊಬ್ಬ ಸಿಗಲಾರದು. ಬಾಹುಬಲಿ ಚಿತ್ರದ ಮೂಲಕ ಜನ ಮನ ಗೆದ್ದಿರುವ ದಷ್ಟ ಪುಷ್ಟ ದೇಹಕಾಯದ ಪ್ರಭಾಸ್ ಟಿಯುವಿ100 ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ವರುಣ್ ಧವನ್ - ಮಹೀಂದ್ರ ಕೆಯುವಿ100

ವರುಣ್ ಧವನ್ - ಮಹೀಂದ್ರ ಕೆಯುವಿ100

ಪ್ರತಿಯೊಂದು ನೂತನ ಕಾರಿಗೆ ಹೊಸ ಬ್ರಾಂಡ್ ಅಂಬಾಸಿಡರ್ ನೀತಿಯನ್ನು ಅನುಸರಿಸುತ್ತಿರುವ ಮಹೀಂದ್ರ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಕೆಯುವಿ100 ಕಾರಿಗೆ ಬಾಲಿವುಡ್ ಉದಯೋನ್ಮುಖ ನಟ ವರುಣ್ ಧವನ್ ಅವರನ್ನು ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿದೆ. ಈ ಎಲ್ಲದರ ಮುಖಾಂತರ ಯುವ ಗ್ರಾಹಕರನ್ನು ತನ್ನತ್ತ ಹೆಚ್ಚೆಚ್ಚು ಸೆಳೆಯುವ ಉದ್ದೇಶವನ್ನು ಹೊಂದಿದೆ.

ಕರೀನಾ ಕಪೂರ್ - ಮಹೀಂದ್ರ ಸ್ಕೂಟರ್ಸ್

ಕರೀನಾ ಕಪೂರ್ - ಮಹೀಂದ್ರ ಸ್ಕೂಟರ್ಸ್

ತಳುಕು ಬಳುಕುವ ನಟಿಯರನ್ನು ಯಾವ ಯುವ ಮನಸ್ಕರು ತಾನೇ ಮೆಚ್ಚಲಾರರು? ಇನ್ನು ಕಾಲೇಜು ಯುವಕರ ಪಾಡಂತೂ ಹೇಳುವುದು ಬೇಡ. ಹಿಂದಿ ಚಿತ್ರರಂಗದ ಜನಪ್ರಿಯ ನಟಿಯಾಗಿರುವ ಕರೀನಾ ಕಪೂರ್, ರೊಡಿಯೊ, ಡ್ಯುರೋ ಹಾಗೂ ಫ್ಲೈಟ್ ಸೇರಿದಂತೆ ಜನಪ್ರಿಯ ಸ್ಕೂಟರ್ ಗಳ ಪ್ರಚಾರ ನಡೆಸಲಿದ್ದಾರೆ.

ರಣಬೀರ್ ಕಪೂರ್ - ರೆನೊ ಇಂಡಿಯಾ

ರಣಬೀರ್ ಕಪೂರ್ - ರೆನೊ ಇಂಡಿಯಾ

ಕಳೆದ ವರ್ಷವಷ್ಟೇ ರೆನೊ ಡಸ್ಟರ್ ಪ್ರಚಾರಕ್ಕಾಗಿ ರಣಬೀರ್ ಕಪೂರ್ ಅವರನ್ನು ನೇಮಕಗೊಳಿಸಲಾಗಿತ್ತು. ಇದಕ್ಕೂ ಮೊದಲು ರೆನೊ ಪಲ್ಸ್ ಹ್ಯಾಚ್ ಬ್ಯಾಕ್ ಕಾರಿನ ಪ್ರಚಾರಕ್ಕಾಗಿ ಅನಿಲ್ ಕಪೂರ್ ಅವರಿಗೆ ಜವಾಬ್ದಾರಿ ವಹಿಸಿಕೊಟ್ಟಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಲಿಯೊನೆಲ್ ಮೆಸ್ಸಿ - ಟಾಟಾ ಮೋಟಾರ್ಸ್

ಲಿಯೊನೆಲ್ ಮೆಸ್ಸಿ - ಟಾಟಾ ಮೋಟಾರ್ಸ್

ಜಾಗತಿಕ ಮಾರುಕಟ್ಟೆಯಲ್ಲೂ ತನ್ನ ಸಾನಿಧ್ಯವನ್ನು ಸುಭದ್ರಪಡಿಸುವ ಇರಾದೆಯಲ್ಲಿರುವ ಟಾಟಾ ಮೋಟಾರ್ಸ್ ಇದಕ್ಕಾಗಿ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿದೆ. ಈ ನಿಟ್ಟಿನಲ್ಲಿ #madeofgreat ಎಂಬ ಟ್ಯಾಗ್ ಉಪಯೋಗಿಸಿಕೊಂಡು ಪ್ರಚಾರವನ್ನು ನಡೆಸಿದೆ. ಟಾಟಾದ ಮುಂಬರುವ ಝಿಕಾ ಕಾರಿನ ಪ್ರಚಾರದಲ್ಲೂ ಮೆಸ್ಸಿ ಮುಖ್ಯ ಅಸ್ತ್ರವಾಗಲಿದ್ದಾರೆ.

ಶಾರೂಕ್ ಖಾನ್ - ಹ್ಯುಂಡೈ

ಶಾರೂಕ್ ಖಾನ್ - ಹ್ಯುಂಡೈ

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ಸ್ ಬಹಳ ಹಿಂದಿನಿಂದಲೇ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಜೊತೆ ಜೊತೆಗಾರಿಕೆಯನ್ನು ಹೊಂದಿದೆ. ಸರಿ ಸುಮಾರು ಎರಡು ದಶಕಗಳಷ್ಟು ಹಿಂದೆ 1998ರಲ್ಲಿ ಸ್ಯಾಂಟ್ರೊ ಬಿಡುಗಡೆಯೊಂದಿಗೆ ಶಾರೂಕ್ ಜೊತೆಗೆ ಜೊತೆಗಾರಿಕಯೆನ್ನು ಆರಂಭಿಸಿರುವ ಹ್ಯುಂಡೈ ಈಗಲೂ ಸಂಬಂಧ ಅಳಿಸಿ ಹೋಗದಂತೆ ನೋಡಿಕೊಂಡಿದೆ.

ಅಕ್ಷಯ್ ಕುಮಾರ್ - ಹೋಂಡಾ ಮೋಟಾರುಸೈಕಲ್

ಅಕ್ಷಯ್ ಕುಮಾರ್ - ಹೋಂಡಾ ಮೋಟಾರುಸೈಕಲ್

ಹೀರೊದ ಎಲ್ಲ ಶ್ರೇಣಿಯ ದ್ವಿಚಕ್ರ ವಾಹನಗಳ ಪ್ರಚಾರವನ್ನು 49ರ ಹರೆಯದ ಅಕ್ಷಯ್ ಕುಮಾರ್ ನಡೆಸಿಕೊಳ್ಳುತ್ತಿದ್ದಾರೆ. ಈ ಪೈಕಿ ಹೀರೊ ಡ್ರೀಮ್ ಸಿರೀಸ್ ಜಾಹೀರಾತು ಎಲ್ಲರ ಮನೆಮಾತಾಗಿದೆ. ಸಂಸ್ಥೆಯ ಪ್ರಕಾರ ಅಕ್ಷಯ್ ಯುವ ಸೇರಿದಂತೆ ಹಳೆಯ ತಲೆಮಾರಿನ ಜನರು ಸಹ ಮೆಚ್ಚಿಕೊಳ್ಳಲಿದ್ದಾರೆ.

ತಾಪ್ಸಿ ಪನ್ನು

ತಾಪ್ಸಿ ಪನ್ನು

ತಮಿಳು, ತೆಲುಗು ಚಿತ್ರರಂಗದ ಮುಂಚೂಣಿ ನಾಯಕಿ ತಾಪ್ಸಿ ಪನ್ನು ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಟು ವೀಲರ್ಸ್ ಪ್ರಚಾರ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫರ್ಹಾನ್ ಅಖ್ತರ್ - ಫೋರ್ಡ್ ಫಿಗೊ ಆಸ್ಪೈರ್

ಫರ್ಹಾನ್ ಅಖ್ತರ್ - ಫೋರ್ಡ್ ಫಿಗೊ ಆಸ್ಪೈರ್

ಕೆಲವು ಸಮಯಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಫೋರ್ಡ್ ಫಿಗೊ ಆಸ್ಪೈರ್ ಪ್ರಚಾರವನ್ನು ಭಾಗ್ ಮಿಲ್ಖಾ ಭಾಗ್ ಸಿನೆಮಾ ಮೂಲಕ ಹೆಚ್ಚು ಜನಪ್ರಿಯವಾಗಿರುವ ಫರ್ಹಾನ್ ಅಖ್ತರ್ ನಿರ್ವಹಿಸುತ್ತಿದ್ದಾರೆ.

ಅಮಿತಾಬ್ ಬಚ್ಚನ್ - ಟಿವಿಎಸ್ ಜೂಪಿಟರ್

ಅಮಿತಾಬ್ ಬಚ್ಚನ್ - ಟಿವಿಎಸ್ ಜೂಪಿಟರ್

ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ಉತ್ಸಾಹ ಇನ್ನು ಕುಂದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಟಿವಿಎಸ್ ಜೂಪಿಟರ್ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಬಿಗ್ ಬಿ ಈಗಲೂ ಆಟೋಮೊಬೈಲ್ ಜೊತೆ ನಂಟು ಇಟ್ಟುಕೊಂಡಿದ್ದಾರೆ.

ವಿರಾಟ್ ಕೊಹ್ಲಿ - ಆಡಿ ಇಂಡಿಯಾ

ವಿರಾಟ್ ಕೊಹ್ಲಿ - ಆಡಿ ಇಂಡಿಯಾ

ಆಡಿ ಸಂಸ್ಥೆಯ ಪ್ರತಿಯೊಂದು ಲಾಂಚ್‌ನಲ್ಲೂ ತನ್ನ ಸಾನಿಧ್ಯವನ್ನು ಖಚಿತಪಡಿಸಿರುವ ವಿರಾಟ್ ಕೊಹ್ಲಿ ಯುವ ಜನಾಂಗದಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಅಲ್ಲದೆ ಆಡಿ ಫ್ಯಾಮಿಲಿಯ ಆರ್8, ಆರ್8 ಎಲ್‌ಎಂಎಕ್ಸ್ ಲಿಮಿಟೆಡ್ ಎಡಿಷನ್, ಕ್ಯೂ7 ಹಾಗೂ ಆಡಿ8ಎಲ್ ಡಬ್ಲ್ಯು12 ಕ್ವಾಟ್ರೊ ಮಾದರಿಗಳನ್ನು ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್ - ಬಿಎಂಡಬ್ಲ್ಯು ಇಂಡಿಯಾ

ಸಚಿನ್ ತೆಂಡೂಲ್ಕರ್ - ಬಿಎಂಡಬ್ಲ್ಯು ಇಂಡಿಯಾ

'ಭಾರತ ರತ್ನ' ಪ್ರಶಸ್ತಿ ವಿಜೇತ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಜೇಬಿಗೆ ತುಂಬಿಸಿಕೊಳ್ಳುವಲ್ಲಿ ಬಿಎಂಡಬ್ಲ್ಯು ಯಶಸ್ವಿಯಾಗಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಾಗಿ ಬಿಎಂಡಬ್ಲ್ಯು ಜೊತೆಗಿರುವ ತಮ್ಮ ಭಾಂದವ್ಯವನ್ನು ಲಿಟ್ಲ್ ಮಾಸ್ಟರ್ ಬಹಿರಂಗಪಡಿಸಿದ್ದಾರೆ. ತಾರೆಯರ ಪೈಕಿ ಜನರ ಮೇಲೆ ಅತಿ ಹೆಚ್ಚು ಪ್ರಭಾವ ಹೊಂದಿರುವ ಕ್ರಿಕೆಟ್ ದೇವರು ಸಚಿನ್ 2012ರಿಂದ ಬಿಎಂಡಬ್ಲ್ಯು ಪ್ರಚಾರ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಚಿನ್ ವಿಶೇಷ ಆವೃತ್ತಿಯನ್ನು ಬಿಎಂಡಬ್ಲ್ಯು ಬಿಡುಗಡೆ ಮಾಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ರಣವೀರ್ ಸಿಂಗ್ - ಮಾರುತಿ ಸುಜುಕಿ

ರಣವೀರ್ ಸಿಂಗ್ - ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಮಾರುತಿ ಸುಜುಕಿ ಸಂಸ್ಥೆಯು 2014ರಲ್ಲಿ ಸಿಯಾಝ್ ಕಾರಿನ ಪ್ರಚಾರಕ್ಕಾಗಿ ನಟ ರಣವೀರ್ ಸಿಂಗ್ ಅವರನ್ನು ನೇಮಕಗೊಳಿಸಿತ್ತು.

ಅಲ್ಲೂ ಅರ್ಜುನ್ - ಹೀರೊ ಮೊಟೊಕಾರ್ಪ್

ಅಲ್ಲೂ ಅರ್ಜುನ್ - ಹೀರೊ ಮೊಟೊಕಾರ್ಪ್

ಯುವ ಜನಾಂಗದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿರುವ ಹೀರೊ ದಕ್ಷಿಣದ ಸ್ಟಾರ್ ನಟ ಅಲ್ಲೂ ಅರ್ಜುನ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿದೆ.

ಅರ್ಜುನ್ ಕಪೂರ್ - ಹೀರೊ ಸೈಕಲ್ಸ್

ಅರ್ಜುನ್ ಕಪೂರ್ - ಹೀರೊ ಸೈಕಲ್ಸ್

ಸೈಕಲ್ ಮಾರಾಟದ ಮೇಲೂ ಗಮನ ಕೇಂದ್ರಿಕರಿಸಿರುವ ಹೀರೊ ಇದಕ್ಕಾಗಿ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರನ್ನು ನೇಮಕಗೊಳಿಸಿತ್ತು.

English summary
15 Celebrities associated with automobile brands
Story first published: Tuesday, January 5, 2016, 16:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark