ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಭಾರತದಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಐ‍ಎಸ್ಐ ಗುರುತಿನ ಹೆಲ್ಮೆಟ್ ಕಡ್ಡಾಯ. ಹೆಲ್ಮೆಟ್ ಧರಿಸದೇ ಸಂಚಾರಿ ನಿಯಮ ಉಲ್ಲಂಘಸಿರುವುದರಲ್ಲಿ ಪುರುಷರದೇ ಮೇಲುಗೈ. ಆದರೆ ಚಂಡೀಗಡದಲ್ಲಿ ಹೆಲ್ಮೆಟ್ ಧರಿಸದಿರುವ ಪ್ರಕರಣದಲ್ಲಿ ಪುರುಷರ ಅಷ್ಟೆ ಮಹಿಳೆಯರ ಮೇಲೆ ಪ್ರಕರಣಗಳು ಹೆಚ್ಚಾಗುತ್ತಿದೆ.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಚಂಡೀಗಡ ಟ್ರಾಫೀಕ್ ಪೊಲೀಸರು ಸೆಪ್ಟೆಂಬರ್ ತಿಂಗಳ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳನಲ್ಲಿಯೇ ಬರೊಬ್ಬರಿ 16,163 ಜನರಿಗೆ ದಂಡವನ್ನು ವಿಧಿಸಲಾಗಿದೆ. ಇದರಲ್ಲಿ 2,059 ಮಹಿಳಾ ಸವಾರರಿಗೆ ದಂಡವನ್ನು ವಿಧಿಸಲಾಗಿದೆ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಲ್ಲವೆಂಬ ಕಾರಣಕ್ಕೆ 2 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ದಂಡವನ್ನು ವಿಧಿಸಲಾಗಿದೆ.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಈ ದಂಡವನ್ನು ಹೊಸ ಎಂವಿ ಕಾಯ್ದೆಯ ಅಡಿಯಲ್ಲಿ ವಿಧಿಸಲಾಗಿದೆ. ಹೊಸ ನಿಯಮ ಜಾರಿಯಾದ ಬಳಿಕ ಚಂಡೀಗಡದಲ್ಲಿ 18,000 ಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ವರದಿಯಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಹೊಸ ಸಂಚಾರಿ ನಿಯಮ ಕಾಯ್ದೆ ಜಾರಿಯಾದ ಬಳಿಕ ಇಲ್ಲಿಯವರೆಗೂ ಒಟ್ಟು ರೂ.42.3 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಭಾರತದಲ್ಲಿ ಪುರುಷರು ಮತ್ತು ಮಹಿಳೆಯರು ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಧಾರ್ಮಿಕ ಪೇಟಗಳನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಸಿಖ್ ಧರ್ಮದವರು ಧಾರ್ಮಿಕ ಪೇಟ ಧರಿಸುವ ಕಾರಣಕ್ಕೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಹೊಸ ಕಾಯ್ಡೆ ಜಾರಿಯಾಗುವ ಮುನ್ನ ಚಂಡೀಗಡ ಪೊಲೀಸರು ಅಪಘಾತದ ಸಮಯದಲ್ಲಿ ಹೆಲ್ಮೆಟ್ ಸವಾರರ ಪ್ರಾಣವನ್ನು ಹೇಗೆ ಉಳಿಸಲಿದೆ ಎಂಬುದರ ಕುರಿತು ಮಾಧ್ಯಮ, ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಮಾಧ್ಯಮದ ಮೂಲಕ ಜಾಗೃತಿ ಮೂಡಿಸಿದ್ದರು.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ಸವಾರಿ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದ 6,746ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸಲಾಗಿದೆ. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಎಂಬುದು ಗಮನಾರ್ಹ. ದಂಡವನ್ನು ವಿಧಿಸಿದ್ದರೂ ಇವರು ಮತ್ತೆ ಮತ್ತೆ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಹೊಸ ಮೋಟಾರು ವಾಹನ ಕಾಯ್ದೆಯು ಜಾರಿಗೆ ಬರುವ ಮೊದಲು ಹೆಲ್ಮೆಟ್ ಧರಿಸಿದೇ ಇರುವುದಕ್ಕೆ ರೂ.100 ದಂಡವನ್ನು ವಿಧಿಸಲಾಗುತ್ತಿತ್ತು. ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ರೂ.1,000 ದಂಡ ವಿಧಿಸಲಾಗುತ್ತಿದೆ. ವಿಶೇಷವೆಂದರೆ ಚಂಡೀಗಡ ನಗರ ಟ್ರಾಫಿಕ್ ಪೊಲೀಸರು ಸೆಪ್ಟೆಂಬರ್ ತಿಂಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳಿಗೆ ದಂಡ ವಿಧಿಸಿದ್ದರು.

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದು, ಹೆಲ್ಮೆಟ್ ಧರಿಸದೆ ಇರುವುದು, ಜೀಬ್ರಾ ಸ್ಟಾಪ್ ಲೈನ್ ಮೇಲೆ ವಾಹನಗಳನ್ನು ನಿಲ್ಲಿಸುವುದು, ಸೀಟ್ ಬೆಲ್ಟ್ ಧರಿಸದಿರುವ ಮತ್ತು ಇತರ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಸೇರಿ ಒಟ್ಟು ಏಳು ರೀತಿಯ ನಿಯಮ ಉಲ್ಲಂಘನೆಗಾಗಿ ಪೊಲೀಸರಿಗೆ ದಂಡವನ್ನು ವಿಧಿಸಲಾಗಿದೆ. ಹೊಸ ಎಂವಿ ಕಾಯ್ದೆಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರು ಕಾನೂನನ್ನು ಮೀರಿದರೇ ಎರಡು ಪಟ್ಟು ದಂಡವನ್ನು ವಿಧಿಸಬಹುದು. ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮ ಉಲ್ಲಂಘಿಸಬಾರದು ಎಂಬ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ಒಟ್ಟು 195 ಪೊಲೀಸರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

2018ರಲ್ಲಿ ದೇಶದೆಲ್ಲೆಡೆ ಹೆಲ್ಮೆಟ್ ಧರಿಸದ ಸುಮಾರು 43,00 ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಮಾಣವು 2017ಕ್ಕೆ ಹೋಲಿಸಿದರೆ ಶೇ.21ರಷ್ಟು ಹೆಚ್ಚು. 2017ರಲ್ಲಿ 35,975 ಸಾವನ್ನಪ್ಪಿದ್ದರು. 2018ರಲ್ಲಿ ಹೆಲ್ಮೆಟ್ ಧರಿಸದ 15,360 ಹಿಂಬದಿ ಸಾವರರು ಕೂಡ ಸಾವಿಗೀಡಾಗಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಹೆಲ್ಮೆಟ್ ರಹಿತ ವಾಹನಾ ಸವಾರ ಸಾವಿನ ಸಂಖ್ಖೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 2018ರಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ 6.020 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 5,232 ಮಂದಿ, ತಮಿಳುನಾಡಿನಲ್ಲಿ 5,048 ಮಂದಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೆಲ್ಮೆಟ್ ಧರಿಸದ 2 ಸಾವಿರ ಮಹಿಳೆಯರಿಗೆ ದಂಡ..!

ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿರುವುದು ಸವಾರನ ಸುರಕ್ಷತೆಗಾಗಿ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಭಾರತೀಯ ರಸ್ತೆಗಳು ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳು ಓಡಾಡುವ ರಸ್ತೆಗಳಲ್ಲಿ ಒಂದಾಗಿದೆ. ಭಾರತೀಯ ರಸ್ತೆಗಳಲ್ಲಿ ಅತೀ ಹೆಚ್ಚು ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಇನ್ನು ಮುಂದಾದರೂ ಹೆಲ್ಮೆಟ್ ಧರಿಸಬೇಕು.

Most Read Articles

Kannada
English summary
More than 2,000 women FINED in Chandigarh for not wearing a helmet - Read in Kannada
Story first published: Friday, October 4, 2019, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X