ಫೆರಾರಿ ಫ್ಯಾಕ್ಟರಿ ಸುತ್ತ ಜಾಲಿ ರೈಡಿಂಗ್
ಪ್ರತಿಯೊಬ್ಬ ಕಾರು ಪ್ರಿಯರಲ್ಲೂ ವಿಶ್ವ ಪ್ರಸಿದ್ಧ ವಾಹನ ತಯಾರಕ ಕಂಪನಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಹಂಬಲವಿರುತ್ತದೆ. ಇದರಂತೆ ಈ ಲೇಖನದಲ್ಲಿ ಇಟಲಿಯ ಅತಿ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೆರಾರಿ ಬಗ್ಗೆ ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ.
ಇಟಲಿಯ ಬಹುರಾಷ್ಟ್ರೀಯ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿಯನ್ನು 1929ನೇ ಇಸವಿಯಲ್ಲಿ ಎನ್ಜೊ ಫೆರಾರಿ (Enzo Ferrari) ಎಂಬವರು ಸ್ಥಾಪಿಸಿದ್ದರು. ಫಾರ್ಮುಲಾ ಒನ್ ಸೇರಿದಂತೆ ಅನೇಕ ರೇಸಿಂಗ್ ಕಾರುಗಳಿಗೆ ಮ್ಯಾರನೆಲೊ (Maranello) ತಲಹದಿಯ ಈ ಕಾರು ಕಂಪನಿ ಪ್ರಖ್ಯಾತವಾಗಿದೆ.
ಸಾಮಾನ್ಯವಾಗಿ ಲಗ್ಷುರಿ ಹಾಗೂ ವಿಲಾಸಿ ಕಾರುಗಳಿಗೆ ಫೆರಾರಿ ಹೆಸರಾಂತವಾಗಿದೆ. ಕೇವಲ ರಸ್ತೆಗೆ ಮಾತ್ರ ಸೀಮಿತವಾಗಿರುವ ಕಾರುಗಳನ್ನು ಉತ್ಪಾದಿಸುವುದು ಎನ್ಜೊ ಫೆರಾರಿ ಇರಾದೆಯಾಗಿರಿಲಿಲ್ಲ. ಇದು ಸ್ಪೋರ್ಟ್ಸ್ ಕಾರು ತಯಾರಿಸುವುದರತ್ತ ಅವರನ್ನು ಪ್ರೇರೇಪಿಸಿತ್ತು.
ಅಂದ ಹಾಗೆ ಮೊದಲ ಫೆರಾರಿ ರೋಡ್ ಕಾರು 1947ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತು. 125 ಎಸ್ ಕಾರು 1.5 ಲೀಟರ್ ವಿ12 ಲೀಟರ್‌ನಿಂದ ನಿಯಂತ್ರಿಸಲ್ಪಟ್ಟಿತ್ತು. ಫೆರಾರಿ ಎಫ್40 ಸ್ಥಾಪಕ ಎನ್ಜೊ ಅವರಜೀವನ ಕಾಲಘಟ್ಟದಲ್ಲಿ ಬಿಡುಗಡೆಯಾದ ಕೊನೆಯ ಫೆರಾರಿ ಕಾರಾಗಿದೆ. ಬಳಿಕ ಇದು ಸೂಪರ್ ಕಾರುಗಳಲ್ಲೇ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು.
ಆ ಬಳಿಕ 2002ರಿಂದ 2004ರ ಅವಧಿಯಲ್ಲಿ ಫೆರಾರಿ ಸ್ಥಾಪಕನ ಗೌರವಾರ್ಥ ಎನ್ಜೊ ಕಾರನ್ನು ತಯಾರಿಸಲಾಯಿತು. ಹಾಗಿದ್ದರೂ ಇದನ್ನು ಫೆರಾರಿ ಎಫ್ ಸರಪಣಿಯಲ್ಲಿ ಹೆಸರಿಸಲಾಯಿತು.
ಫೆರಾರಿ ವಿಶ್ವದ ಅತಿ ಜನಪ್ರಿಯ ಬ್ರಾಂಡ್ ಕಾರುಗಳಲ್ಲಿ ಒಂದಾಗಿದೆ. ಕೇವಲ ಸ್ಪೋರ್ಟ್ಸ್ ಕಾರು ತಯಾರಿಸುವುದಕ್ಕೆ ಮಾತ್ರವಲ್ಲದೆ ಸೂಪರ್ ಕಾರುಗಳಿಗೂ ಹೆಸರುವಾಸಿಯಾಗಿದೆ.

ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ

ಫೆರಾರಿ ಸ್ಥಾಪಕ ಎನ್ಜೊ ಫೆರಾರಿ ರೇಸಿಂಗ್ ಪ್ರಿಯನಾಗಿದ್ದು, 1919ನೇ ಇಸವಿಯಲ್ಲಿ ತಮ್ಮ ರೇಸಿಂಗ್ ಕೆರಿಯರ್ ಆರಂಭಿಸಿದ್ದರು. ಆ ಬಳಿಕ ಅನೇಕ ರೇಸಿಂಗ್‌ಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

1943ನೇ ಇಸವಿಯಲ್ಲಿ ಫೆರಾರಿ ಫ್ಯಾಕ್ಟರಿಯನ್ನು Maranello ಎಂಬಲ್ಲಿ ಬದಲಾಯಿಸಲಾಗಿತ್ತು. ಆ ಬಳಿಕ ರೇಸ್ ಕಾರು ಜತೆ ಸ್ಪೋರ್ಟ್ಸ್ ಕಾರುಗಳನ್ನು ಉತ್ಪಾದಿಸಲು ಆರಂಭಿಸಲಾಗಿತು.

ಫೆರಾರಿಯ Scuderia ಎಫ್ 1 ತಂಡಕ್ಕೆ ವಿಶ್ವದದ್ಯಾಂತ ಅನೇಕ ಅಭಿಮಾನಿಗಳಿದ್ದಾರೆ. ಇಲ್ಲಿನ ಮರನೆಲ್ಲೊ ಪ್ಲಾಂಟ್‌ನಲ್ಲಿ ವಿಶ್ವ ಪ್ರಸಿದ್ಧ ಕಾರುಗಳನ್ನು ತಯಾರಿಸಲಾಗುತ್ತದೆ.

ಮೂಲಗಳ ಪ್ರಕಾರ ಫೆರಾರಿ ಕಂಪನಿಯು ವರ್ಷಂಪ್ರತಿ 6400ರಷ್ಟು ನೂತನ ಕಾರುಗಳನ್ನು ತಯಾರಿಸುತ್ತವೆ.

ಫಾರ್ಮುಲಾ ಒನ್ ಕಾರುಗಳ ಪೈಕಿ ಫೆರಾರಿ Maranello ಕಾರು ಘಟಕ ಹೆಚ್ಚು ಜನಪ್ರಿಯವೆನಿಸಿದೆ.

ಪ್ರಸ್ತುತ Maranello ಘಟಕದಲ್ಲಿ ಫಾರ್ಮುಲಾ ಒನ್ ಕಾರುಗಳನ್ನು ತಯಾರಿಸುವುದನ್ನು ಫೆರಾರಿ ಸ್ಥಗಿತಗೊಳಿಸಿದೆ. ಇದನ್ನು ಪ್ರತ್ಯೇಕವಾಗಿ ನಿರ್ಮಿನಿಸಲಾದ Fiorano ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಎಫ್50 ಲಿಮಿಟೆಡ್ ಕಾರನ್ನು ತಯಾರಿಸುವ ಮೂಲಕ ಫೆರಾರಿ ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಆ ಸಾಲಿನಲ್ಲಿ 349 ಎಫ್50 ಕಾರನ್ನು ಉತ್ಪಾದಿಸಲಾಗಿತ್ತು.

Maranello ಘಟಕದಲ್ಲಿ ಫೋಸ್ ಕೊಡುತ್ತಿರುವ ಫೆರಾರಿ ಬಾಸ್ Luca di Montezemolo

ಫೆರಾರಿಯಿಂದ ಹರಾಜಾಗಿರುವ ಕಾರುಗಳ ಪೈಕಿ ಫೆರಾರಿ 250 ಜಿಟಿಒ ಅತಿ ದುಬಾರಿಯಾಗಿದೆ. ಈ ಕಾರು ಬರೋಬ್ಬರಿ 12ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಹರಾಜಾಗಿತ್ತು.

ಫೆರಾರಿ Maranello ಘಟಕದ ಆಕರ್ಷಕ ವಿಹಾಂಗಣ ನೋಟ

ಕಾರ್ಪೋರೇಟ್ ಆಫೀಸ್

ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಫೆರಾರಿ ಲೊಗೊ


Click it and Unblock the Notifications








