ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

By Nagaraja

ಭಾರತೀಯ ಸೇನೆಯ ಅವಿಭಾಜ್ಯ ಭಾಗವಾಗಿರುವ ಭಾರತೀಯ ವಾಯು ಸೇನೆಯ (ಐಎಎಫ್) ಪ್ರಥಮ ಕರ್ತವ್ಯ ದೇಶದ ಮೈಮಾನಿಕ ವಲಯದ ರಕ್ಷಣೆಯಾಗಿದ್ದು, ಯುದ್ಧದಂತಹ ತುರ್ತು ಕಾಲಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಇನ್ನು ನೈಸರ್ಗಿಕ ವಿಕೋಪವುಂಟಾದಲೂ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲಿದೆ.

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಗಲಭೆಗ್ರಸ್ತ ಯೆಮೆನ್‌ ರಕ್ಷಣಾ ಕಾರ್ಯಾಚರಣೆ, ನೇಪಾಳ ಭೂಕಂಪ ವಿಕೋಪಗಳು ಭಾರತೀಯ ವಾಯುಸೇನೆಯ ನೆರವಿನ ಇತ್ತೀಚೆಗಿನ ಕೆಲವು ಉದಾಹರಣೆಗಳಾಗಿದೆ. ಭಾರತೀಯ ವಾಯು ಪಡೆ ಎಂಬ ಹೆಸರಿನಿಂದಲೂ ಜನಪ್ರಿಯವಾಗಿರುವ ಐಎಎಫ್ 1932 ಅಕ್ಟೋಬರ್ 08ರಂದು ಅಸ್ತಿತ್ವಕ್ಕೆ ಬಂದಿತ್ತು. ಆಧುನಿಕತೆಯೊಂದಿಗೆ ತನ್ನ ತಂತ್ರಜ್ಞಾನಗಳಲ್ಲೂ ಅಭಿವೃದ್ಧಿ ತಂದಿರುವ ಭಾರತೀಯ ವಾಯು ಪಡೆ ಈಗ ವಿಶ್ವದ ಮುಂಚೂಣಿಯ ಯುದ್ಧ ವಿಮಾನಗಳ ಒಡೆಯನಾಗಿದೆ. ಈಗ ಭಾರತೀಯ ವಾಯುಪಡೆ ಕುರಿತಾಗಿ ನೀವು ಅರಿತುಕೊಳ್ಳಬೇಕಾಗಿರುವ 15 ಸತ್ಯಾಂಶಗಳ ಬಗ್ಗೆ ನಾವು ಪಟ್ಟಿ ಮಾಡಿಕೊಡಲಿದ್ದೇವೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

01. ಅಮೆರಿಕ, ಚೀನಾ ಹಾಗೂ ರಷ್ಯಾ ಬಳಿಕ ಭಾರತೀಯ ವಾಯುಪಡೆ ವಿಶ್ವದ ನಾಲ್ಕನೇ ಅತಿ ದೊಡ್ಡ ವಾಯು ಸೇನೆ ಎಂದೆನಿಸಿಕೊಂಡಿದೆ. ಇದರಲ್ಲಿ 1,70,000 ಸಿಬ್ಬಂದಿಗಳು ಹಾಗೂ 1,5000 ವಿಮಾನಗಳು ಸೇವೆ ಸಲ್ಲಿಸುತ್ತಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

2. ಭಾರತೀಯ ವಾಯುಪಡೆಯು ವಿಶ್ವದಲ್ಲೇ ಏಳನೇ ಶಕ್ತಿಶಾಲಿ ವಾಯುಸೇನೆಯಾಗಿದ್ದು, ಈ ಸಾಲಿನಲ್ಲಿ ಜರ್ಮನಿ, ಆಸ್ಟ್ರೇಲಿಯಾ ಹಾಗೂ ಜಪಾನ್ ಗಳಂತಹ ಮುಂದುವರಿದ ರಾಷ್ಟ್ರಗಳನ್ನೇ ಹಿಂದಿಕ್ಕಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

03. ಭಾರತೀಯ ವಾಯುಪಡೆಯ ಬಾವುಟವನ್ನು 1951ರಲ್ಲಿ ರಚಿಸಲಾಗಿತ್ತು. ಆಕಾಶ ನೀಲಿ ಬಣ್ಣದಲ್ಲಿ ಭಾರತೀಯ ಧ್ವಜ ಇರಲಿದ್ದು, ಮತ್ತೊಂದು ಕಡೆ ವೃತ್ತಕಾರದಲ್ಲಿ ರಾಷ್ಟ್ರೀಯ ಧ್ವಜದ ಬಣ್ಣಗಳು ಕಾಣಿಸಲಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

04. ಇದರ ಹೊರತಾಗಿ ಅಶೋಶ ಸ್ತಂಭ, ಗರುಡ ಒಳಗೊಂಡ ಲಾಂಛನವನ್ನು ಹೊಂದಿದ್ದು, ವಾಯುಸೇನೆಯನ್ನು ವಿಶಿಷ್ಟ ರಚನೆ ಹಾಗೂ ಘಟಕವನ್ನು ಗುರುತಿಸಲು ಇದನ್ನು ರಚಿಸಲಾಗಿದೆ. ಇದು ಶ್ರೇಷ್ಠ ಐತಿಹಾಸಿಕ ಮತ್ತು ಭಾವನಾತ್ಮಕ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಯೋಧರಿಗೆ ಪ್ರೋತ್ಸಾಹ ಹಾಗೂ ಸ್ಪೂರ್ತಿಯನ್ನು ತುಂಬುತ್ತದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

05. ಭಾರತೀಯ ವಾಯು ಸೇನೆಯು "ನಭ ಸ್ಪರ್ಶಂ ದೀಪ್ತಂ" (Touch the Sky with Glory) ಎಂಬ ಧ್ಯೇಯೋಕ್ತಿಯನ್ನು ಹೊಂದಿದೆ. ಇದನ್ನು ಭವದ್ಗೀತೆಯ ಏಳನೇ ಅಧ್ಯಾಯದಿಂದ ತೆಗೆಯಲಾಗಿದೆ. ಗೀತೆಯಲ್ಲಿ ಹೇಗೆ ಭಗವಾನ್ ಶ್ರೀಕೃಷ್ಣನು ತನ್ನ ಸರ್ವೋಚ್ಛ ದೈವಿಕ ರೂಪವನ್ನು ಅರ್ಜುನನಿಗೆ ತೋರಿಸುತ್ತಾನೋ ಅದೇ ರೀತಿ ಭಾರತೀಯ ವಾಯು ಸೇನೆಯು ರಾಷ್ಟ್ರದ ರಕ್ಷಣೆಗಾಗಿ ಎದುರಾಳಿಗಳನ್ನು ನಾಶ ಪಡಿಸಲಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

06. ಭಾರತೀಯ ವಾಯುಸೇನೆಯ ಸಂಗ್ರಹಾಲಯವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿದೆ. ಇಲ್ಲಿ ಭಾರತೀಯ ವೈಮಾನಿಕ ಪಡೆಯ ಹಳೆಯ ವಿಮಾನ ಹಾಗೂ ಯುದ್ಧ ಸಾಮಾಗ್ರಿಗಳಿದ್ದು, ಚರಿತ್ರೆಯನ್ನು ಮೆಲುಕು ಹಾಕಬಹುದಾಗಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

07. ಒಂದನೇ ಮಹಾಯುದ್ಧದ ಬಳಿಕ ಬ್ರಿಟಿಷ್ ಆಡಳಿತ ಕಾಲದಲ್ಲಿ ಬ್ರಿಟಿಷ್ ಇಂಡಿಯಾದ ಸಹಾಯಕ ಮೈಮಾನಿಕ ಪಡೆಯಾಗಿ ರೂಪುಗೊಂಡಿದ್ದ ಭಾರತೀಯ ವಾಯು ಪಡೆಯು ಎರಡನೇ ಮಹಾಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದು ಬರ್ಮದಲ್ಲಿ ಜಪಾನ್ ಸೇನೆಯ ಆಕ್ರಮಣವನ್ನು ಮಟ್ಟ ಹಾಕಿತ್ತಲ್ಲದೆ ಜಪಾನ್ ವಾಯು ನೆಲೆಯ ಮೇಲೂ ದಾಳಿ ಹಮ್ಮಿಕೊಂಡಿತ್ತು. ಎರಡನೇ ಮಹಾಯುದ್ಧದ ಗೆಲುವಿನ ಬಳಿಕ 1945ರಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದೆನಿಸಿಕೊಂಡಿತ್ತು.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

08. ರಾಷ್ಟ್ರಪತಿಯು ಭಾರತೀಯ ವಾಯುಸೇನೆ ಸೇರಿದಂತೆ ಎಲ್ಲ ಸೇನೆಗೂ ಸುಪ್ರೀಂ ಕಮಾಂಡರ್ (ಕಮಾಂಡರ್-ಇನ್-ಚೀಫ್) ಆಗಿರುತ್ತಾರೆ. ಇದರ ಕೆಳಗಡೆ ಏರ್ ಚೀಫ್ ಮಾರ್ಷಲ್ ಭಾರತೀಯ ವಾಯುಸೇನೆಯ ಪರಮೋಚ್ಛ ಕರ್ತವ್ಯವನ್ನು ನಿಭಾಯಿಸುತ್ತಾರೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

09. ಏರ್ ಚೀಫ್ ಮಾರ್ಷಲ್ (ಎಸಿಎಂ) ಭಾರತೀಯ ವಾಯುಪಡೆಯ ನಾಲ್ಕು ತಾರೆಗಳ ಪದವಿಯನ್ನು ಆಲಂಕರಿಸುತ್ತಾರೆ. ಆದರೆ 2002ರಲ್ಲಿ ರಾಷ್ಟ್ರಪತಿ ಅವರಿಂದ ಮಾರ್ಷಲ್ ಆಫ್ ದಿ ಏರ್ ಫೋರ್ಸ್ ರಾಂಕ್‌ಗೆ ಪಾತ್ರವಾಗಿರುವ ಅರ್ಜನ್ ಸಿಂಗ್, ಫೈವ್ ಸ್ಟಾರ್ ರಾಂಕ್ ಗೌರವಕ್ಕೆ ಪಾತ್ರವಾಗಿರುವ ಏಕಮಾತ್ರ ಐಎಎಫ್ ಅಧಿಕಾರಿಯಾಗಿದ್ದಾರೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

10. 1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತೀಯ ವಾಯುಪಡೆಯು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಅಂತೆಯೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 1940ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ವರ್ಷಂಪ್ರತಿ ಅಕ್ಟೋಬರ್ 8ರಂದು ಭಾರತೀಯ ವಾಯುಪಡೆ ದಿನಾಚರಣೆಯಾಗಿ ದೇಶದ್ಯಾಂತ ಆಚರಿಸಲಾಗುತ್ತಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

11. ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿಟ್ ಸಿಂಗ್ ಸೆಖೋನ್ ಅವರು ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ 'ಪರಮ ವೀರ ಚಕ್ರ' ಗೌರವಾನ್ವಿತ ಪದವಿಗೆ ಭಾಜನರಾದ ಭಾರತೀಯ ವಾಯುಪಡೆಯ ಏಕಮಾತ್ರ ಅಧಿಕಾರಿಯಾಗಿದ್ದಾರೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

12. ಪದ್ಮಾವತಿ ಬಂಧೋಪಾದ್ಯಾಯ ಅವರು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಏರ್ ಮಾರ್ಷಲ್ ಪದವಿ ಆಲಂಕರಿಸಿದ್ದರು.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

13. ಅದೇ ರೀತಿ ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮಿರ್ಸ್ಟ್ (Elmhirst) ಅವರು ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದಾರೆ. ಅವರು 1947 ಅಗಸ್ಟ್ 15ರಿಂದ 1950 ಫೆಬ್ರವರಿ 21ರ ವರೆಗೆ ಸೇವೆ ಸಲ್ಲಿಸಿದ್ದರು.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

14. ಭಾರತೀಯ ವಾಯುಪಡೆಯ ಮೊದಲ 'ಚೀಫ್ ಆಫ್ ದಿ ಏರ್ ಸ್ಟಾಫ್' ಪದವಿಯನ್ನು ಏರ್ ಮಾರ್ಷಲ್ ಸುಬ್ರಟೊ ಮುಖರ್ಜಿ ಅವರು ಆಲಂಕರಿಸಿದ್ದರು. ಇವರನ್ನೇ 'ಭಾರತೀಯ ವಾಯುಪಡೆಯ ಜನಕ' ಎಂದು ಕರೆಯಲಾಗುತ್ತದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

15. ಹೀಗೆ ಎರಡನೇ ಮಹಾಯುದ್ಧದ ಬಳಿಕ ಭಾರತ-ಚೀನಾ ಯುದ್ಧ, ಭಾರತ-ಪಾಕಿಸ್ತಾನ ಯುದ್ಧ, ಕಾಶ್ಮೀರ ಯುದ್ದ ಇನ್ನು ಹತ್ತು ಹಲವಾರು ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ದೇಶದ ವೈಮಾನಿಕ ರಕ್ಷಣೆಯಾಗಿ ಪರಿಣಮಿಸಿರುವ ಭಾರತೀಯ ವಾಯುಪಡೆಯು ಕಳೆದ ಎಂಟು ದಶಕಗಳಿಂದಲೂ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

ಜಗತ್ತಿನ ಪ್ರಖ್ಯಾತ ಸರಕು ಸಾಗಾಣೆ ಸೈನ್ಯ ವಿಮಾನಗಳು

Most Read Articles

Kannada
Read more on ವಿಮಾನ plane
English summary
All you know about Indian Air Force
Story first published: Friday, June 12, 2015, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X